Asianet Suvarna News Asianet Suvarna News

ಹೊರ ರಾಜ್ಯದ ಹೊಟೇಲ್ ಕಾರ್ಮಿಕರಿಗೆ ಕನ್ನಡ ಪಾಠ

ಹೊಟೇಲ್ ಮಾಲೀಕರ ಸಂಘವು ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಯೋಜಿತ್ತು.

Kannada lessons for out-of-state hotel workers snr
Author
First Published Nov 19, 2023, 8:29 AM IST

 ಮೈಸೂರು :  ಹೊಟೇಲ್ ಮಾಲೀಕರ ಸಂಘವು ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಯೋಜಿತ್ತು.

ನ.1ರಿಂದ ಹೊರ ರಾಜ್ಯದ ಕಾರ್ಮಿಕರಿಗೆ ಕನ್ನಡ ಕಲಿಸಿ, ಇಂದು ಅವರೇ ಸೇರಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ನಿರೂಪಿಸಿದ್ದು ವಿಶೇಷವಾಗಿತ್ತು.

ರಾಜ್ಯದವರಿಗೆ ಹೋಟೆಲು ಕೆಲಸಕ್ಕೆ ಕರೆಸಬೇಕಾಗುತ್ತದೆ. ಹಾಗೆ ಬಂದವರು ನಮ್ಮ ಕರ್ನಾಟಕದ ಗ್ರಾಹಕರಿಗೆ ಅರ್ಥವಾಗುವ ಹಾಗೆ ಬೇರೆ ರಾಜ್ಯದವರಿಗೆ ನ. 1 ರಿಂದ ಕನ್ನಡ ಕಲಿಸುತ್ತಾ ಬಂದಿರುವುದು ಸಂತೋಷದ ವಿಷಯ ಮತ್ತು ಇದು ಇತರರಿಗೆ ಆದರ್ಶವಾಗಿದೆ.

ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಹೊಟೇಲ್ ಕೆಲಸಕ್ಕೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕರ್ನಾಟಕದವರೇ ಜಾಸ್ತಿಯಾಗಿ ಬರುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಹೊರ ರಾಜ್ಯದವರ ಮೇಲೆ ಅವಲಂಬಿತವಾಗಿರ ಬೇಕಾದ ಪರಿಸ್ಥಿತಿ ಬಂದಿದೆ. ಹೊರ ರಾಜ್ಯದ ಕಾರ್ಮಿಕರಿಗೆ ಕನ್ನಡ ಕಲಿಸುವುದು ಬಹಳ ಒಳ್ಳೆಯ ಬೆಳವಣಿಗೆ ಹೀಗೆಯೇ ಎಲ್ಲಾ ಹೊರ ರಾಜ್ಯದವರಿಗೆ ಕನ್ನಡ ಕಲಿಸಿದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಅವರು ಶ್ಲಾಘಿಸಿದರು.

ಹೊಟೇಲ್ ಕೆಲಸಕ್ಕೆ ನಮ್ಮ ರಾಜ್ಯದವರು ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಹೊರ ರಾಜ್ಯದವರಿಗೆ ಹೋಟೆಲ್ ಕೆಲಸಕ್ಕೆ ಕರೆಸಬೇಕಾಗುತ್ತದೆ. ಹಾಗೆ ಬಂದವರು ಕೂಡ ನಮ್ಮ ಕರ್ನಾಟಕದ ಗ್ರಾಹಕರಿಗೆ ಅರ್ಥವಾಗುವ ಹಾಗೆ ಕನ್ನಡ ಕಲಿಸುತ್ತಾ ಬಂದಿರುವುದು ಸಂತೋಷದ ವಿಷಯ ಮತ್ತು ಇದು ಇತರರಿಗೆ ಆದರ್ಶ ಎಂದರು.

ಪೈ ವಿಸ್ಟಾ ಹೊಟೇಲ್ ನ ಪ್ರಧಾನ ವ್ಯವಸ್ಥಾಪಕ ಕೆ. ಮಹೇಶ ಕಾಮತ್ ಮಾತನಾಡಿ, ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯವನ್ನಾಗಿ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರವು ಒಂದು ತಿಂಗಳು ರಾಜ್ಯೊತ್ಸವವನ್ನು ವಿಜೃಂಬಣೆಯಿಂದ ಆಚರಿಸೋಣ ಎಂದಿದೆ. ಇದು ನಮಗೆ ಈ ಕಾರ್ಯಕ್ರಮ ಆಯೋಜಿಸಲು ಪ್ರೇರಣೆಯಾಗಿದೆ. ಮುಂದಿನ ದಿನ ಎಲ್ಲಾ ಕಾರ್ಮಿಕರಿಗೆ ಕನ್ನಡ ಮಾತನಾಡಲು ಹಾಗೂ ಬರೆಯಲು ಪ್ರಾರಂಬಿಸುತ್ತೇವೆ. ಈ ರೀತಿಯಲ್ಲಿ ನಾವು ಕನ್ನಡ ಬೆಳೆಸಬೇಕು, ಉಳಿಸಬೇಕು ಎಂದರು.

ಗೂಗಲ್ ಲುಕ್‌ಔಟ್‌ನಲ್ಲಿ ಕನ್ನಡಕ್ಕೆ ಮಾನ್ಯತೆ

ಬೆಳಗಾವಿ(ನ.05): ದೃಷ್ಟಿದೋಷವುಳ್ಳವರ ಅನುಕೂಲಕ್ಕಾಗಿ ಗೂಗಲ್‌ ಸಂಸ್ಥೆಯು ರೂಪಿಸಿರುವ ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶಕ್ಕೆ ಕನ್ನಡ ಭಾಷೆ ಸೇರ್ಪಡೆಯಾಗಿದೆ. ಈ ಮೂಲಕ ದೃಷ್ಟಿದೋಷ ಹೊಂದಿರುವವರು ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸುಲಭವಾಗಿ ಅರಿಯಬಹುದಾಗಿದೆ.

ದೃಷ್ಟಿ ಸವಾಲಿಗ, ಬೈಲಹೊಂಗಲ ತಾಲೂಕು ಪಂಚಾಯಿತಿ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿರುವ ಸಿದ್ದಲಿಂಗೇಶ್ವರ ಇಂಗಳಗಿ ಈ ತಂತ್ರಾಂಶದಲ್ಲಿ ಕನ್ನಡ ಭಾಷೆ ಸೇರ್ಪಡೆ ಮಾಡುವಂತೆ ಧ್ವನಿ ಎತ್ತಿದ್ದರು. ಗೂಗಲ್‌ ಸಂಸ್ಥೆಯ ಡಿಸೆಬಿಲಿಟಿ ಸಪೋರ್ಟ್‌ ಡಿಸೆಬಿಲಿಟಿ ಹೆಲ್ಪ್‌ಡೆಸ್ಕ್‌ಗೆ 2021ರಲ್ಲಿ ಈ ಮೇಲ್‌ ಮತ್ತು ಟ್ವಿಟರ್‌ ಮೂಲಕ ಮನವಿ ಮಾಡಿದ್ದರು. ಇಂಗಳಗಿ ಅವರ ಮನವಿಗೆ ಎರಡು ವರ್ಷಗಳ ಬಳಿಕ ಸ್ಪಂದಿಸಿರುವ ಗೂಗಲ್‌ ಕಳೆದ ಆಗಸ್ಟ್‌ 17 ರಂದು ಈ ತಂತ್ರಾಂಶಕ್ಕೆ ಕನ್ನಡ ಭಾಷೆಯನ್ನು ಸೇರ್ಪಡೆಗೊಳಿಸುವ ಮೂಲಕ ದೃಷ್ಟಿಹೀನರ ಬದುಕಿಗೆ ಬೆಳಕಾಗಿದೆ. ಈ ಮೂಲಕ ತಂತ್ರಾಂಶ ಜಾಗತಿಕವಾಗಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಾಗಿದೆ.

ಸಿಎಂ ಉಪಹಾರ ಸಭೆಗೆ ಆಹ್ವಾನವಿತ್ತು, ಹೋಗಿರಲಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದೃಷ್ಟಿದೋಷವುಳ್ಳವರ ಅನುಕೂಲಕ್ಕಾಗಿ ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶಕ್ಕೆ ಕನ್ನಡ ಭಾಷೆ ಸೇರ್ಪಡೆ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತ ಬಂದಿದ್ದೆ. ಕೊನೆಗೂ ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದು ಸಿದ್ದಲಿಂಗೇಶ್ವರ ಇಂಗಳಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಏನೇನು ಮಾಡಬಹುದು?:

ಈ ತಂತ್ರಾಂಶದ ಮೂಲಕ ದೃಷ್ಟಿಹೀನರು ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸುಲಭವಾಗಿ ಗುರುತಿಸಬಹುದು. ಪಠ್ಯ, ಪುಸ್ತಕ ಓದಬಹುದು. ದಿನಪತ್ರಿಕೆಗಳನ್ನು ಓದಬಹುದು. ಫೋನ್‌ನ ಹಿಂಭಾಗದ ಕ್ಯಾಮೆರಾ ಬಳಸಿ ವಿವಿಧ ಸಂಗತಿಯನ್ನು ತಿಳಿಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಪ್ಲೆ ಸ್ಟೋರ್‌ ಆ್ಯಪ್‌ಗೆ ಹೋಗಿ, ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶ ಡೌನ್ ಲೋಡ್‌ ಮಾಡಿಕೊಳ್ಳಬೇಕು. ಇದರಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ಸ್‌, ಎಕ್ಸಪ್ಲೋರ್‌, ಕರೆನ್ಸಿ, ಫುಡ್‌ಲೇಬಲ್ಸ್‌, ಇಮೇಜಸ್‌ ಎಂಬ 6 ವಿಧಾನಗಳಿವೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಫೋನ್‌ನ ಹಿಂಭಾಗದ ಕ್ಯಾಮೆರಾ ಬಳಸಿ ವಿವಿಧ ಸಂಗತಿ ತಿಳಿಯಬಹುದು.

ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ: ಸಚಿವ ಶರಣ ಪ್ರಕಾಶ ಪಾಟೀಲ

ಟೆಕ್ಸ್ಟ್ ವಿಧಾನವು ಕನ್ನಡ ಭಾಷೆಯಲ್ಲಿರುವ ಪಠ್ಯ ಗುರುತಿಸಿ, ಗಟ್ಟಿಯಾಗಿ ಓದಿ ಹೇಳುತ್ತದೆ. ಇದರಿಂದ ವಿವಿಧ ಪುಸ್ತಕ, ದಾಖಲೆಗಳು ಹಾಗೂ ದಿನಪತ್ರಿಕೆಗಳಲ್ಲಿ ಮಾಹಿತಿ ತಿಳಿಯಬಹುದು. ಡಾಕ್ಯುಮೆಂಟ್ಸ್‌ ವಿಧಾನದಲ್ಲಿ ಪುಸ್ತಕ ಇಡೀ ಪುಟದಲ್ಲಿರುವ ವಿಷಯವು ಸ್ಕ್ಯಾನ್‌ ಆಗಿ ಟೆಕ್ಸ್ಟ್ ಆಗಿ ಪರಿವರ್ತನೆಯಾಗುತ್ತದೆ. ನಂತರ ಯಥಾವತ್ತಾಗಿ ಕನ್ನಡ ಭಾಷೆಯಲ್ಲಿ ಓದಿ ಹೇಳುತ್ತದೆ. ಎಕ್ಸಪ್ಲೋರ್‌ (ಬೇಟಾ) ವಿಧಾನ ನಾವು ಕುಳಿತಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ವಸ್ತುಗಳನ್ನು ಗುರುತಿಸಿ ತಿಳಿಸುತ್ತದೆ. ಕರೆನ್ಸಿ ವಿಧಾನದಿಂದ ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ತಿಳಿಯಬಹುದಾಗಿದೆ.

Follow Us:
Download App:
  • android
  • ios