ಕಲಬುರಗಿ: ಕೆರೆಯಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು!
ಕೆರೆಯಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ (ಆ.11): ಕೆರೆಯಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಅಪ್ಪಾ ಕೆರೆಯಲ್ಲಿ ಎಮ್ಮೆಗಳನ್ನ ಸ್ನಾನ ಮಾಡಿಸಿದ್ದರು. ಕೆರೆ ಸುತ್ತ ಆಳವಡಿಸಿದ್ದ ಗ್ರೀಲ್ ಕಟ್ ಮಾಡಿ ಎಮ್ಮೆಗಳನ್ನ ಕೆರೆಗೆ ನುಗ್ಗಿಸಿ ಸ್ನಾನ ಮಾಡಿಸಿದ್ದರು. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿದ್ದಾಗ ಎಮ್ಮೆಗಳನ್ನ ಒಳಗೆ ಬಿಡಲಾಗಿತ್ತು. ತಂತಿ ಬೇಲಿ ಕಟ್ ಮಾಡಿ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಎಮ್ಮೆ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ತಂತಿ ಬೇಲಿ ಕಟ್ ಮಾಡಿ 5000 ರೂ ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆಂದು ಎಮ್ಮೆ ಮಾಲೀಕರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಪ್ಪನ ಕೆರೆಯ ಬೇಲಿ ಗ್ರಿಲ್ಗಳನ್ನು ಕಟ್ ಮಾಡಿ ಹಾಳು ಮಾಡಿದಲ್ಲದೇ ಕೆರೆಯ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಎಮ್ಮೆಗಳನ್ನು ಒಳಗೆ ಬಿಟ್ಟಿದ್ದು, ಅವರ ಮೇಲೆ ಕಳೆದ ಆ. 8 ರಂದು ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 175/2023, ಕಲಂ 447, 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಯಮರಾಜನಾದ ಶ್ವಾನ: ಎರಡೆಮ್ಮೆಗಳ ಮೇಲೆ ನಿಂತು ಬಿಂದಾಸ್ ಪಯಣ: ವೈರಲ್ ವೀಡಿಯೋ
ಅಪ್ಪನ ಕೆರೆಯ ಸುತ್ತಮುತ್ತಲೂ ಅಪಾಯಕಾರಿ ನಿಷೇಧಿತ ಪ್ರದೇಶವೆಂದು ಘೋಷಣೆ:
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಅಪ್ಪಾ ಕೆರೆಯ ಸುತ್ತಮುತ್ತಲೂ ಗ್ರೀಲ್ಗಳನ್ನು ಅಳವಡಿಸಿ, ಬೇಲಿ ಹಾಕಿ ಅಪಾಯಕಾರಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ದನ/ ಎಮ್ಮೆ ಮೇಯಿಸುವವರು ಈ ಕೆರೆಯ ಸುತ್ತಮುತ್ತಲಿನ ಬೇಲಿ ದಾಟಿ ಅಕ್ರಮವಾಗಿ ಪ್ರವೇಶ ಮಾಡಬಾರದೆಂದು ತಿಳಿಸಿದೆ. ಈ ಕುರಿತು ಸುತ್ತಮುತ್ತಲಿನ ಬೇಲಿಗೆ ನಿಷೇಧಿತ ಪ್ರದೇಶವೆಂದು ನಾಮಫಲಕ ಸಹ ಅಳವಡಿಸಿದೆ.
ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು, ಮುಂದಾಗಿದ್ದೇನು?
ಅಪ್ಪಾ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧ ಮತ್ತು ಅಪಾಯಕಾರಿ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇದನ್ನು ಗಮನಿಸಬೇಕೆಂದು ಕೋರಲಾಗಿದೆ.