ಕಲಬುರಗಿ ಜಿಲ್ಲೆಯಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆದ ಹೀರೇಕಾಯಿ ಕಿತ್ತುಕೊಂಡಳೆಂದು ಮಹಿಳೆಯೆಂದೂ ಲೆಕ್ಕಿಸದೇ ಹಲ್ಲೆ ಮಾಡಿದ ವಿಡಿಯೋ ವೈರಲ್‌ ಆಗಿದೆ. 

ಕಲಬುರಗಿ (ಸೆ.16): ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿತ್ತಲಿನ ಭಾಗದಲ್ಲಿಯೇ ಕೈತೋಟವನ್ನು ನಿರ್ಮಿಸಿಕೊಂಡು ಹೀರೇಕಾಯಿ, ಪಡುವಲಕಾಯಿ, ಸೋರೆಕಾರಿ, ಚಪ್ಪರದ ಅವರೆಕಾಯಿ ಇತ್ಯಾದಿ ಬಳ್ಳಿಯ ತರಕಾರಿಗಳನ್ನು ಬೆಳೆಯುತ್ತಾರೆ. ಅದೇ ರೀತಿ ಕಲಬುರಗಿಯಲ್ಲೂ ಮನೆಯ ಹಿತ್ತಲಿನಲ್ಲಿ ಬೆಳೆದ ಹೀರೇಕಾಯಿಯನ್ನು ಕಿತ್ತುಕೊಂಡ ಮಹಿಳೆಗೆ ಮನೆ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್‌ ಆಗಿದೆ.

ಹಿತ್ತಲಲ್ಲಿನ ಹೀರೆ ಕಾಯಿ ಕಿತ್ತಿದ್ದಕ್ಕೆ ಮಹಿಳೆಗೆ ನಡು ರಸ್ತೆಯಲ್ಲಿಯೇ ಜುಟ್ಟು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಹಿಳೆ ಎನ್ನುವುದನ್ನೂ ಮರೆತು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಾಡಗಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮಾಡಿರುವ ವ್ಯಕ್ತಿಯನ್ನು ಗುರುಲಿಂಗಯ್ಯ ಎಂದು ಗುರುತಿಸಲಾಗುದೆ. ಇನ್ನು ಮಹಿಳೆ ಹಿತ್ತಲಲ್ಲಿ ಬೆಳೆದ ಹೀರೆಕಾಯಿ ಕಿತ್ತುಕೊಂಡು ಹೋಗಿದ್ದಕ್ಕೆ ವಾಗ್ವಾದ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದಾಗ ಮಹಿಳೆಯನ್ನು ಹಿಡಿದು ಮನಬಂದಂತೆ ಹಲ್ಲೆ ಮಾಡಿದ್ದಾನೆ.

Bengaluru- Murdeshwar train: ಬುಕಿಂಗ್ ಓಪನ್ ಆಗಿ ಕೆಲವೇ ನಿಮಿಷಗಳಲ್ಲಿ ಸೀಟು ಭರ್ತಿ! ವೈಟಿಂಗ್ ಲಿಸ್ಟ್ನಲ್ಲಿ 231 ಜನ

ಇನ್ನು ಕೇವಲ 20 ರೂಪಾಯಿಗೆ ಸಿಗುವ ಹೀರೇಕಾಯಿ ಕಿತ್ತುಕೊಂಡಿದ್ದಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಗುರುಲಿಂಗಯ್ಯ ಅವರ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಘಟನೆಯು ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ. ಆದರೆ, ಅನೇಕ ಮಹಿಳೆಯರಿಂದ ಗುರುಲಿಂಗಯ್ಯ ವಿರದ್ಧ ಆಕ್ರೋಶ ವ್ಯಕ್ತವಾಗಿದ್ದು, ಆತನ ಹೀರೇಕಾಯಿ ಹಣ ನಾವು ಕೊಡ್ತೇವೆ ಮೊದಲು ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.

ವ್ಯಕ್ತಿಯ ಮೈಮೇಲಿದ್ದ ಅಂಗಿಯೂ ಹರಿದ ಮಹಿಳೆ: ಇನ್ನು ಮಹಿಳೆಯನ್ನು ಥಳಿಸುವ ವೇಳೆ ಇಡೀ ಕುಟುಂಬ ಸದಸ್ಯರು ಜಗಳಕ್ಕೆ ಬಂದಿದ್ದಾರೆ. ಈ ವೇಳೆ ಮಹಿಳೆಯೂ ಕೂಡ ತನ್ನನ್ನು ಥಳಿಸುತ್ತಿದ್ದ ವ್ಯಕ್ತಿಯ ಅಂಗಿಯನ್ನು ಹಿಡಿದು ಎಳೆದಾಡಿದ್ದಾರೆ. ಆದ್ದರಿಂದ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯ ಅಂಗಿಯೂ ಕೂಡ ಹರಿದು ಹೋಗಿದ್ದು, ಅದರ ಒಂದು ತುಂಡು ಸ್ಥಳದಲ್ಲಿ ಬಿದ್ದಿತ್ತು. ಇನ್ನು ಮಹಿಳೆಯ ಜಡೆಯನ್ನು ಹಿಡಿದುಕೊಂಡು ಎತ್ತುಗಳಿಗೆ ಕಟ್ಟುವ ಮಿಣಿಯಿಂದ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. ಜಗಳ ಬಿಡಿಸಲು ಹಲವರು ಪ್ರಯತ್ನ ಮಾಡಿದ್ದಾರೆ.

ಕಾಂಗ್ರೆಸ್‌ ಶಕ್ತಿ ಯೋಜನೆ ದುರುಪಯೋಗ ಮಾಡಿಕೊಂಡ ತಮಿಳುನಾಡು ಮಹಿಳೆ: ಕೊಳ್ಳೇಗಾಲದಲ್ಲಿ ಅಂದರ್

Scroll to load tweet…