ನಿಮಗೆ ಹನಿಟ್ರ್ಯಾಪ್ ಆಗಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ: ಸಚಿವ ಪ್ರಿಯಾಂಕ ಖರ್ಗೆ!
ಕಲಬುರಗಿ ಹನಿಟ್ರ್ಯಾಪ್ ಜಾಲದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಸಂತ್ರಸ್ತರು ನೇರವಾಗಿ ನನಗೆ ಅಥವಾ ಪೊಲೀಸ್ ಆಯುಕ್ತರಿಗೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.
ಕಲಬುರಗಿ (ಸೆ.09): ಹನಿಟ್ರ್ಯಾಪ್ ದಂಧೆ ಇದೊಂದು ಗಂಭೀರ ಅಪರಾಧ ಪ್ರಕರಣವಾಗಿದೆ. ಅದರಲ್ಲಿಯೂ ಈ ಹನಿಟ್ರ್ಯಾಪ್ ಇಲ್ಲಿ ನಡೆದಿರುವುದು ಕಲಬುರಗಿ ಜಿಲ್ಲೆಗೇ ಕಪ್ಪು ಚುಕ್ಕೆಯಾಗಿದೆ. ಹನಿಟ್ರ್ಯಾಪ್ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಸಂಬಂಧಪಟ್ಟ ಸಂತ್ರಸ್ತರು ನೇರವಾಗಿ ನನ್ನನ್ನು ಅಥವಾ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಬೇಕಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸೋಮವಾರ ಕಲಬುರಗಿ ಹನಿಟ್ರ್ಯಾಪ್ ಜಾಲದ ಬಗ್ಗೆ ಮಾಧ್ಯಮಗಳೊಂದಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರನ್ನೇ ಗುರಿಯಾಗಿಸಿ ಖೆಡ್ಡಾಕ್ಕೆ ಬೀಳಿಸುವ ನಿಟ್ಟಿನಲ್ಲಿ ಇಂತಹ ಹನಿಟ್ರ್ಯಾಪ್ ದುಷ್ಕೃತ್ಯ ಮಾಡಲಾಗುತ್ತಿದೆ. ಇಂತಹ ಹನಿಟ್ರ್ಯಾಪ್ ದಮಧೆಯಲ್ಲಿ ತೊಡಗಿದವರು ಯಾವ ಸಂಘಟನೆಯವರೇ ಆಗಿರಲಿ, ಅದೆಷ್ಟೇ ಪ್ರಭಾವಿಗಳಾಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ರೇಪ್, ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿಯಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ದಂಧೆ: ಸಂತ್ರಸ್ತೆಯರ ಆರೋಪ
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಫೋರೆನ್ಸಿಕ್ ವರದಿ ಕೇಳಲಾಗಿದ್ದು, ವರದಿ ಆಧರಿಸಿ ಪೊಲೀಸರ ತನಿಖೆ ನಡೆಯಲಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಹೆಚ್ಚಿನ ವಿವರ ಈಗಲೇ ಹೇಳಲು ಆಗದು. ಹನಿಟ್ರ್ಯಾಪ್ ಕಲಬುರಗಿ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದೆ. ಆರೋಪಿಗಳು ಯಾವುದೇ ಸಂಘಟನೆಗೆ ಸೇರಿದವರಾಗಿರಲಿ ಅಥವಾ ಯಾವುದೇ ವ್ಯಕ್ತಿಗಳಾಗಿರಲಿ, ಪೊಲೀಸ್ ತನಿಖೆ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಹನಿಟ್ರ್ಯಾಪ್ ಪ್ರಕರಣದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸೆನ್ ಇಲಾಖೆಗೆ ಸೂಚಿಸಲಾಗಿದೆ. ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್‌ಗೆ ದೂರು ಸಲ್ಲಿಸಬಹುದು. ಅಂಥವರ ವಿವರ ಹಾಗೂ ಗುರುತು ಗೌಪ್ಯವಾಗಿಡಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್ ಜೊತೆ 10 ವರ್ಷ ಸಂಸಾರ?
ಕಲಬುರಗಿಯಲ್ಲಿನ ಹನಿಟ್ರ್ಯಾಪ್ ಜಾಲದ ತನಿಖೆಗೆ ಸೆನ್ ಎಸಿಪಿ ನೇತೃತ್ವದಲ್ಲಿ ವಿಶೇಷ ಪೋಲಿಸ್ ತಂಡ ರಚಿಸಲಾಗಿದೆ. ಯಾರೇ ತಪ್ಪಿತಸ್ಥರು ಇರಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಸಾಕ್ಷಿ ಆಧಾರ ಪರಿಗಣಿಸಿ ಇನ್ನಿತರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು. ಅಂಥವರಿಂದ ಮತ್ಯಾರೇ ಅನ್ಯಾಯಕ್ಕೊಳಗಾಗಿದ್ರೆ ದೈರ್ಯವಾಗಿ ಬಂದು ದೂರು ಕೊಡಲಿ. ದೂರುದಾರರ ಮಾಹಿತಿ ಗೌಪ್ಯವಾಗಿಟ್ಟು ತನಿಖೆ ನಡೆಸಲಾಗುವುದು ಎಂದರು.