Asianet Suvarna News Asianet Suvarna News

ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್‌ ಜೊತೆ 10 ವರ್ಷ ಸಂಸಾರ?

ದರ್ಶನ್ ಮತ್ತು 14 ವರ್ಷ ಚಿಕ್ಕವರಾದ ನಟಿ ಪವಿತ್ರಾ ಗೌಡ ಕಳೆದ 10 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗಿದ್ದರೂ ಪವಿತ್ರಾ ಗೌಡ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪವಿದೆ.

Pavitra Gowda Actor Darshan ten years long live in relationship sat
Author
First Published Sep 9, 2024, 5:08 PM IST | Last Updated Sep 9, 2024, 5:48 PM IST

ಬೆಂಗಳೂರು (ಸೆ.09): ಕನ್ನಡ ಚಿತ್ರರಂಗದ ಬೇಡಿಕೆ ನಟ ದರ್ಶನ್ ತೂಗುದೀಪ 47 ವರ್ಷದವರಾಗಿದ್ದು, ಈತನೊಂದಿಗೆ ನಟಿ ಪವಿತ್ರಾ ಗೌಡ (33) ಬರೋಬ್ಬರಿ 14 ವರ್ಷ ಚಿಕ್ಕವಳಾಗಿದ್ದರೂ ಕಳೆದ 10 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಸಂಸಾರ ಮಾಡುತ್ತಿದ್ದಾರೆ. ಇವರ ಸಂಸಾರಕ್ಕೆ ಯಾರದ್ದೇ ಅಡ್ಡಿಯಾಗಬಾರದೆಂದು ನಟ ದರ್ಶನ್ ಮನೆಯ 1 ಕಿ.ಮೀ. ದೂರದಲ್ಲಿ ಪ್ರತ್ಯೇಕ ಮನೆಯನ್ನು ಖರೀದಿಸಿ 2018ರಿಂದ ಸಂಸಾರ ಮಾಡಿಕೊಂಡಿದ್ದೆವು ಎಂದು ನಟಿ ಪವಿತ್ರಾಗೌಡ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಶೆಡ್ಡಿನಲ್ಲಿಟ್ಟು ಬೀಕರವಾಗಿ ಥಳಿಸಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾನೆ. ಆದರೆ, ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿ ಮದುವೆ ಮಾಡಿಕೊಂಡಿರುವ ಪತ್ನಿ ವಿಜಯಲಕ್ಷ್ಮಿ ಅವರು ಜೊತೆಯಲ್ಲಿರುವಾಗಲೇ ನಟ ದರ್ಶನ್ ಮತ್ತೊಬ್ಬ ಮಹಿಳೆ ನಟಿ ಪವಿತ್ರಾಗೌಡ ಅವರೊಂದಿಗೆ 10 ವರ್ಷ ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಇನ್ನು ಅಕ್ರಮವಾಗಿ ಸಂಬಂಧವನ್ನಿ ಹೊಂದುವುದಕ್ಕಾಗಿಯೇ ನಟಿ ಪವಿತ್ರಾಗೌಡ ಹಾಗೂ ಆಕೆಯ ಮಗಳು ಪ್ರತ್ಯೇಕವಾಗಿ ವಾಸಕ್ಕೆ ಅನುಕೂಲ ಆಗುವಂತೆ 1.75 ಕೋಟಿ ರೂ. ಮೌಲ್ಯದ ಮನೆಯೊಂದನ್ನೂ ಖರೀದಿ ಮಾಡಿಸಿಕೊಟ್ಟಿರುತ್ತಾನೆ. ಆದರೆ, 14 ವರ್ಷ ದೊಡ್ಡವನಾದ ದರ್ಶನ್ ಜೊತೆಗೆ ಹೇಗೆ ಸಂಬಂಧ ಬೆಳೆಸಿದ್ದರು ಎಂಬ ರೋಚಕ ಮಾಹಿತಿ ಇಲ್ಲಿದೆ ನೋಡಿ...

ಸೌಂದರ್ಯ ಜಗದೀಶ್‌ರಿಂದ ₹1.75 ಕೋಟಿ ಪಡೆದಿದ್ದ ಪವಿತ್ರಾ, ಬಯಲಾಗುತ್ತಾ ನಿರ್ಮಾಪಕನ ಸಾವು ಪ್ರಕರಣ?

ಪವಿತ್ರಾಗೌಡ ಅವರೊಂದಿಗೆ ಸಂಬಂಧದ ಕುರಿತು ನಟ ದರ್ಶನ್ ಹೇಳಿದ್ದೇನು? 
ನಾನು ಕನ್ನಡ ಚಿತ್ರರಂಗದಲ್ಲಿ ಚಿತ್ರನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. ನಾನು, ನನ್ನ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಮಗ ವಿನೀಶ್ ಮೂವರು ಹೊಸಕೆರೆಹಳ್ಳಿಯಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿರುತ್ತೇವೆ. ನನ್ನ ಪತ್ನಿ ಗೃಹಿಣಿಯಾಗಿರುತ್ತಾರೆ ಮತ್ತು ನನ್ನ ಮಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ನನ್ನ ಮತ್ತು ವಿಜಯಲಕ್ಷ್ಮಿ ಯವರ ವಿವಾಹವಾಗಿ 22 ವರ್ಷವಾಗಿದ್ದು, ಮೇ. 19 ಕ್ಕೆ ನಾನು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದುಬೈಗೆ ಹೋಗಿ ಬಂದಿದ್ದೆವು. ಪವಿತ್ರಾಗೌಡ ಎಂಬುವವರು ಸುಮಾರು 10 ವರ್ಷಗಳಿಂದ ನನ್ನೊಂದಿಗೆ ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದು, ಇವರು ಆರ್‌ಆರ್‌ನಗರದಲ್ಲಿ ನನ್ನ ಮನೆಯಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿರುತ್ತಾರೆ. ಪವನ್ ಎಂಬುವವನು, ನನ್ನ ಮನೆಯಲ್ಲಿ ಮತ್ತು ಪವಿತ್ರಾಗೌಡ ವಾಸವಾಗಿರುವ ಮನೆಗಳಲ್ಲಿ ಮನೆ ಕೆಲಸವನ್ನು ಮಾಡಿಕೊಂಡು 8 ವರ್ಷಗಳಿಂದ ಜೊತೆಯಲ್ಲಿದ್ದಾನೆ ಎಂದು ನಟ ದರ್ಶನ್ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.

ನಟ ದರ್ಶನ್ ಅವರೊಂದಿಗೆ ಸಂಬಂಧದ ಕುರಿತು ಪವಿತ್ರಾಗೌಡ ಹೇಳಿದ್ದೇನು?
ನಾನು ಗಂಡನೊಂದಿಗೆ ಡಿವೋರ್ಸ್ ಪಡೆದ ನಂತರ ಜೀವನಕ್ಕಾಗಿ 2012ರಲ್ಲಿ ಡ್ಯಾನ್ಸಿಂಗ್‌, ಮಾಡೆಲಿಂಗ್ ಮತ್ತು ನಟನೆಯನ್ನು ಆರಂಭಿಸಿದೆ. ಕನ್ನಡ ಭಾಷೆಯಲ್ಲಿ ಅಗಮ್ಯ ಸಾಗುವ ದಾರಿ ಹಾಗೂ 2016ರಲ್ಲಿ ತಮಿಳುನಲ್ಲಿ 54321 ಸಿನಿಮಾದಲ್ಲಿ ನಟಿಸಿದೆ. ಇದಾದ ನಂತರ 2014ರಲ್ಲಿ ಬುಲ್ ಬುಲ್ ಸಿನಿಮಾಗೆ ಆಡಿಷನ್ ಕೊಡಲು ಹೋದಾಗ, ನನ್ನ ಮಾಡೆಲಿಂಗ್ ಪ್ರೊಫೈಲ್ ಅನ್ನು ನಟ ದರ್ಶನ್ ಅವರಿಗೆ ಕೊಟ್ಟು, ಅವರಿಂದ ರೆಫರ್ ಮಾಡಿಸಲು ಕರೆ ಮಾಡಿದ್ದೆನು. ಆದರೆ, ಅದಾಗಲೇ ಆಡಿಷನ್ ಮುಗಿದಿದ್ದು, ಬೇರೆ ಯಾವುದಾದರೂ ಸಿನಿಮಾಗಳ ಆಡಿಷನ್ ಬಂದರೆ ತಿಳಿಸುವುದಾಗಿ ಹೇಳಿರುತ್ತಾರೆ. ಇದನ್ನು ನೆಪವಾಗಿಟ್ಟುಕೊಂಡು ದರ್ಶನ್ ಅವರೊಂದಿಗೆ ಫೋನ್ ಕರೆ ಮತ್ತು ವಾಟ್ಸಾಪ್‌ನಲ್ಲಿ ಚಾಟಿಂಗ್ ಮಾಡುತ್ತಾ ಸಲುಗೆ ಬೆಳೆಸಿಕೊಂಡು ಹೊರಗಡೆ ಭೇಟಿಯಾಗುತ್ತಿದ್ದೆವು. 

ಆಕಾಶದಿಂದ ಬರಲಿದೆ ಭಾರೀ ಆಪತ್ತು: ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ

ಇದಾದ ನಂತರ ಸಲುಗೆ ಹೆಚ್ಚಾಗಿ, ನಮ್ಮ ಸಲುಗೆ ಪ್ರೀತಿಯಾಗಿ ಮಾರ್ಪಟ್ಟಿತು. ದರ್ಶನ್ ವಿಜಯಲಕ್ಷ್ಮಿ ಅವರನ್ನು ಮದುವೆ ಆಗಿದ್ದು, ಅವರಿಗೆ ಮಗನಿದ್ದಾನೆಂಬ ಮಾಹಿತಿ ಇದ್ದರೂ ಆದರೂ ಅವರನ್ನು ಪ್ರೀತಿ ಮಾಡುತ್ತಾ ಲಾಂಗ್ ಡ್ರೈವ್ ಹೋಗುತ್ತಿದ್ದೆವು. ದರ್ಶನ್ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನನ್ನ ಮಗಳು, ನಾನು ಹಾಗೂ ದರ್ಶನ್ ವಾಸ ಮಾಡಲೆಂದು 2018ರಲ್ಲಿ ನಟ ದರ್ಶನ್ ಅವರು ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಂದ 1.75 ಕೋಟಿ ರೂ. ನನ್ನ ಖಾತೆಗೆ ವರ್ಗಾವಣೆ ಮಾಡಿಸಿ, ಮನೆ ಖರೀದಿ ಮಾಡಿಸಿರುತ್ತಾರೆ. ಇದಾದ ನಂತರ 2018ರ ಫೆಬ್ರವರಿಯಲ್ಲಿ ಮನೆ ಗೃಹ ಪ್ರವೇಶ ಮಾಡಿ ಅಂದಿನಿಂದ ನಾವಿಬ್ಬರೂ ಸಂಸಾರ ಮಾಡಿಕೊಂಡಿರುತ್ತೇವೆ ಎಂದು ನಟಿ ಪವಿತ್ರಾಗೌಡ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios