ಕಲಬುರಗಿ: ಶಿಕ್ಷಕಿಯಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ದಸ್ತಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಗುಣಾಕಾರ ಮತ್ತು ಭಾಗಾಕಾರ ಲೆಕ್ಕಗಳ ಬಗ್ಗೆ ಕೇಳಿದ ನಂತರ ಕಪ್ಪುಹಲಗೆ ಮೇಲೆ ಬರೆದ ಲೆಕ್ಕವನ್ನು ವಿದ್ಯಾರ್ಥಿ ಸರಿಯಾದ ಲೆಕ್ಕಬಿಡಿಸಿದಾಗ ಜಿಲ್ಲಾಧಿಕಾರಿಗಳು ಮೆಚ್ಚುಗೆಪಟ್ಟರು. ಚಿಮ್ಮಾಇದಲಾಯಿ ಗ್ರಾಮದಲ್ಲಿ ಇಂಗ್ಲಿಷ್ ಭಾಷೆಯ ಪಾಠವನ್ನು ಮಕ್ಕಳಿಂದ ಕೇಳಿ ತುಂಬ ಸಂತಸಪಟ್ಟ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಚಿಂಚೋಳಿ(ಡಿ.08): ತಾಲೂಕಿನ ದಸ್ತಾಪೂರ ಮತ್ತು ಚಿಮ್ಮಾಇದಲಾಯಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಾಲೆಯಲ್ಲಿ ಮಕ್ಕಳ ಗೈರು ಹಾಜರಿ ಆಗದಂತೆ ಶಿಕ್ಷಕರು ಹೆಚ್ಚು ಗಮನಹರಿಸಬೇಕು ಸೂಚನೆ ನೀಡಿದರು.
ದಸ್ತಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಗುಣಾಕಾರ ಮತ್ತು ಭಾಗಾಕಾರ ಲೆಕ್ಕಗಳ ಬಗ್ಗೆ ಕೇಳಿದ ನಂತರ ಕಪ್ಪುಹಲಗೆ ಮೇಲೆ ಬರೆದ ಲೆಕ್ಕವನ್ನು ವಿದ್ಯಾರ್ಥಿ ಸರಿಯಾದ ಲೆಕ್ಕಬಿಡಿಸಿದಾಗ ಜಿಲ್ಲಾಧಿಕಾರಿಗಳು ಮೆಚ್ಚುಗೆಪಟ್ಟರು. ಚಿಮ್ಮಾಇದಲಾಯಿ ಗ್ರಾಮದಲ್ಲಿ ಇಂಗ್ಲಿಷ್ ಭಾಷೆಯ ಪಾಠವನ್ನು ಮಕ್ಕಳಿಂದ ಕೇಳಿ ತುಂಬ ಸಂತಸಪಟ್ಟರು. ಆದರೆ ದಾಖಲಾತಿಯಂತೆ ಮಕ್ಕಳು ಹೆಚ್ಚು ಹಾಜರಿಯಾಗಿಲ್ಲ. ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದರು.
ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹೈಕೋರ್ಟ್ ವಕೀಲನ ಭೀಕರ ಹತ್ಯೆ
ತಾಲೂಕಿನ ಪುರಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಚಿಂಚೋಳಿ ಪಟ್ಟಣದಲ್ಲಿ ಸಾರ್ವಜನಿಕರ ಆಸ್ತಿ ತೆರಿಗೆ ಹೆಚ್ಚಳ ಇದ್ದರೆ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಿಕೊಡಲು ಅನುಕೂಲವಾಗಲಿದೆ. ನೀರಿನ ಟ್ಯಾಂಕ್ ಪರಿಶೀಲಿಸಿದ ಅವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜನಿಯರ ದೇವೇಂದ್ರಪ್ಪ ಕೋರವಾರ, ಟ್ಯಾಂಕ್ ಉತ್ತಮ ಗುಣಮಟ್ಟದಿಂದ ನಿರ್ಮಾಣಮಾಡಲಾಗಿದೆ, ಆದರೆ ಪೈಪ್‌ಲೈನ್ ಸರಿಯಾಗಿ ಇಲ್ಲದಿರುವ ಕಾರಣ ಟ್ಯಾಂಕ್ ಉಪಯೋಗ ಇಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಚಿಂಚೋಳಿ ಪುರಸಭೆಯಿಂದ ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗ ಸ್ಪಂದಿಸಬೇಕು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಂಚೋಳಿ ಪುರಸಭೆಯಿಂದ ಸಾರ್ವಜನಿಕರ ಆಸ್ತಿ ಕರ ವಸೂಲಿ ಬಹಳ ಕಡಿಮೆ ಇದೆ. ಅದನ್ನು ವಸೂಲಿ ಮಾಡಬೇಕು ಒಟ್ಟು ₹೭೨ಲಕ್ಷ ಆಸ್ತಿ ತೆರಿಗೆ ಇದೆ ಅದರಲ್ಲಿ ₹೫೮.೧೫ ಲಕ್ಷ ವಸೂಲಿ ಆಗಿದೆ. ಇನ್ನು ₹೨೨ ಲಕ್ಷ ಕರ ವಸೂಲಿ ಇದೆ ಎಂದು ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ನಂತರ ಘನತಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ಅಲ್ಲಿರುವ ವ್ಯವಸ್ಥೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಗೊಬ್ಬರ ತಯಾರಿಕೆ, ಕಸವಿಲೇವಾರಿ ಘಟಕ ಯಂತ್ರಗಳ ಬಗ್ಗೆ ಪರಿಶೀಲಿಸಿದ ಅವರು ಇದರ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕಾಗಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಕೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಲೂಕಿನಲ್ಲಿ ೧೮ ವರ್ಷದ ಯುವಕ/ಯುವತಿಯರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವುದಕ್ಕಾಗಿ ತಹಸೀಲ್ದಾರರು ಗಮನಹರಿಸಬೇಕು ಎಂದು ತಿಳಿಸಿದರು.
ನಂತರ ಸರಕಾರಿ ಕನ್ಯಾ ಪಿಯುಸಿ ಕಾಲೇಜಿಗೆ ಭೇಟಿ ನೀಡಿದ ಅವರು, ಬಾಲಕಿಯರ ಶೌಚಾಲಯ ಮತ್ತು ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಎಇಇ ರಾಹುಲ್ ಕಾಂಬಳೆ ಅವರಿಗೆ ಕೇಳಿ ಯಾವುದೇ ಅವ್ಯವಸ್ಥೆ ಅಗದಂತೆ ಗಮನಹರಿಸಬೇಕೆಂದು ಸೂಚಿಸಿದರು.
ಚಂದಾಪೂರ ಸರ್ಕಾರಿ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಹಳೆ ಕಟ್ಟಡವನ್ನು ನೋಡಿ ಇದು ತುಂಬಾ ಹಳೆದಾಗಿದೆ. ಮಕ್ಕಳಿಗೆ ಅಪಾಯವಾಗಲಿದೆ ಕೂಡಲೇ ಇದನ್ನು ನೆಲಸಮಗೊಳಿಸಬೇಕೆಂದು ಎಇಇ ಬಸವರಾಜ ಬೈನೂರ ಅವರಿಗೆ ಹೇಳಿದರು.
ಕಲಬುರಗಿ: ಕಿರುಕುಳಕ್ಕೆ ಬೇಸತ್ತು ಇಂಜಿನಿಯರ್ ನೇಣು ಹಾಕಿಕೊಂಡು ಆತ್ಮಹತ್ಯೆ
ಚಿಂಚೋಳಿ ತಾಲೂಕಿನ ಸಮಾಜ ಕಲ್ಯಾಣ ಮತ್ತು ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರುಗಳು ಬಂದಿದೆ. ಮುಂದಿನ ದಿನಗಳಲ್ಲಿ ಚಿಂಚೋಳಿಗೆ ಬಂದಾಗ ಹಾಸ್ಟೆಲ್‌ಗೆ ಭೇಟಿ ನೀಡುತ್ತೇನೆ ಎಂದರು.
ಕೊಳಗೇರಿ ಮಂಡಳಿನಿಂದ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ಬಗ್ಗೆ ಮುಖ್ಯಾಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ತಾಪಂ ಅಧಿಕಾರಿ ಶಂಕರ ರಾಠೋಡ, ಗ್ರೇಡ-೨ ತಹಸೀಲ್ದಾರ ವೆಂಕಟೇಶ ದುಗ್ಗನ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಎಇಇ ಬಸವರಾಜ ಬೈನೂರ, ಎಇಇ ರಾಹುಲ್ ಕಾಂಬಳೆ, ಟಿಎಚ್‌ಓ ಡಾ. ಮಹಮ್ಮದ ಗಫಾರ, ಬಿಇಒ ಮಾರುತಿ ಯಂಗನೋರ, ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ, ಪಿಎಸ್ಐ ಎ.ಎಸ್. ಪಟೇಲ, ಸಿಡಿಪಿಒ ಗುರುಪ್ರಸಾದ ಕವಿತಾಳ, ಸಂಗಮೇಶ, ಆರ್.ಐ. ರವಿಕುಮಾರ ಪಾಟೀಲ, ಪ್ರೊ. ಮಲ್ಲಿಕಾರ್ಜುನ ಪಾಲಾಮೂರ, ಸಮಾಜಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ ಇನ್ನಿತರಿದ್ದರು.