Asianet Suvarna News Asianet Suvarna News

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹೈಕೋರ್ಟ್‌ ವಕೀಲನ ಭೀಕರ ಹತ್ಯೆ

ಎಂದಿನಂತೆ ಕೋರ್ಟ್‌ ಕಲಾಪಗಳಿಗೆ ತೆರಳಲು ಅಪಾರ್ಟ್‌ಮೆಂಟ್‌ನಿಂದ ಕೆಳಗಿಳಿದು ತಮ್ಮ ವಾಹನ ಬಳಿ ಬಂದಾಗ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

High Court Lawyer Brutal Murder in Kalaburagi grg
Author
First Published Dec 8, 2023, 5:24 PM IST

ಕಲಬುರಗಿ(ಡಿ.08):  ನಗರದಲ್ಲಿ ಹಾಡುಹಗಲೇ ಹೈಕೋರ್ಟ್‌ ವಕೀಲರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ. ಹೈಕೋರ್ಟ್‌ ವಕೀಲರಾದ ಈರಣ್ಣಗೌಡ ಪಾಟೀಲ್ (40) ಕೊಲೆಯಾದ ವ್ಯಕ್ತಿ.

ಎಂದಿನಂತೆ ಕೋರ್ಟ್‌ ಕಲಾಪಗಳಿಗೆ ತೆರಳಲು ಅಪಾರ್ಟ್‌ಮೆಂಟ್‌ನಿಂದ ಕೆಳಗಿಳಿದು ತಮ್ಮ ವಾಹನ ಬಳಿ ಬಂದಾಗ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಬೆಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಆಟೋ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು

ಜಮೀನು ವಿವಾದಕ್ಕೆ ಸಂಬಂಧಿಸಿ ಇವರ ಹತ್ಯೆಯಾಗಿರಬಹುದು, ಅದೂ ಸಂಬಂಧಿಕರೇ ಈ ಹತ್ಯೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಕಲಬುರಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios