Asianet Suvarna News Asianet Suvarna News

ಅನಾಥ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್!

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್ ಅವರು ಅನಾಥ ಮಕ್ಕಳೊಂದಿಗೆ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಡಿಸಿ ಮಾತ್ರವಲ್ಲದೇ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡವೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Kalaburagi DC B Fouzia Taranum celebrated Deepavali with Orphans gvd
Author
First Published Nov 13, 2023, 11:03 PM IST

ಕಲಬುರಗಿ (ನ.13): ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಕಲಬುರಗಿ ಡಿಸಿ  ಬಿ.ಫೌಜಿಯಾ ತರನ್ನುಮ್ ಅವರು ಅನಾಥ ಮಕ್ಕಳೊಂದಿಗೆ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಡಿಸಿ ಮಾತ್ರವಲ್ಲದೇ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡವೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಲಬುರಗಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಸರ್ಕಾರಿ ಬಾಲಕೀಯರ ಬಾಲ‌ ಮಂದಿರದಲ್ಲಿಂದು ಸಾಯಂಕಾಲ ಅನಾಥ ಮಕ್ಕಳೊಂದಿಗೆ ಡಿಸಿ ಹಾಗೂ ಮಹಿಳಾ ಅಧಿಕಾರಿಗಳು ದೀಪಾವಳಿ ಹಬ್ಬ ಆಚರಿಸಿದರು.

ಬಾಲಕೀಯರ ಬಾಲ ಮಂದಿರದ ಸಭಾಂಗಣದಲ್ಲಿ ರಾಜ್ಯ‌ ಮಹಿಳಾ ನಿಲಯದ‌ ನಿಲಾಯಾರ್ಥಿಗಳು, ಅಮೂಲ್ಯ ಶಿಶು ಗೃಹದ ಪುಟ್ಟ ಮಕ್ಕಳು, ಬಾಲಕೀಯರ ಬಾಲ ಮಂದಿರದ ಮಕ್ಕಳು ಹಾಗೂ ಬುದ್ದಿ ಮಾಂದ್ಯ ಮಕ್ಕಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಸಿಹಿ ವಿತರಿಸಿ ಹಬ್ಬದ ಶುಭ ಕೋರಿದರು. ತದನಂತರ ಮಕ್ಕಳೊಂದಿಗೆ ಕೆಲ ಹೊತ್ತು ಅವರಲ್ಲೊಬ್ಬರಾಗಿ ಬೆರೆತರು. ಮೋಬೈಲ್ ಸೆಲ್ಫಿಗೆ, ಗ್ರೂಪ್ ಫೋಟೋಗೆ ಫೋಸ್ ಕೊಟ್ಟರು. ಮಕ್ಕಳೊಂದಿಗೆ ಸೇರಿ ಹಸಿರು ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮಿಸಿದರು. 

ವಿಜಯೇಂದ್ರ ಆಯ್ಕೆಯಿಂದ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ: ಮುರುಗೇಶ್‌ ನಿರಾಣಿ

ಜಿಲ್ಲಾಧಿಕಾರಿ‌‌ ಬಿ.ಫೌಜಿಯಾ ತರನ್ನುಮ್ ಆದಿಯಾಗಿ ಮಹಿಳಾ ಅಧಿಕಾರಿಗಳ ತಂಡ ಹಬ್ಬದ ದಿನದಂದು ತಮ್ಮೊಂದಿಗೆ ದೀಪಾವಳಿ ಆಚರಿಸಲು‌ ಬಂದಿರುವ ವಿಷಯ ಗೊತ್ತಾಗ್ತಿದ್ದಂತೆ ಅನಾಥ ಮಕ್ಕಳಲ್ಲಿ ಎಲ್ಲಿಲ್ಲದ‌ ಸಂಭ್ರಮ ಮನೆ ಮಾಡಿತ್ತು. ಖುದ್ದು ಪಾಲಕರೊಂದಿಗೆ, ಕುಟುಂಬದವರೊಂದಿಗೆ ಹಬ್ಬ ಸಂಭ್ರಮ ಆಚರಣೆಯ ಭಾವ ಅವರ ಮುಖದಲ್ಲಿ ಕಂಡುಬಂತು. ಮಕ್ಕಳೆಲ್ಲರು ಖುಷಿಯಿಂದ ಸಂಭ್ರಮದಲ್ಲಿ ಭಾಗಿಯಾದರು. ಇದಕ್ಕೂ‌ ಮುನ್ನ ಸಂಸ್ಥೆಯಲ್ಲಿ ಆಯೋಜಿಸಿದ ಲಕ್ಷ್ಮೀ ಪೂಜೆಯಲ್ಲಿ ಡಿ.ಸಿ. ಅವರು ಭಾಗಿಯಾಗಿದ್ದರು.

ಡಿ.ಸಿ.ಗೆ ದೀಪ ನೀಡಿ ಸ್ವಾಗತಿಸಿದ ಮಕ್ಕಳು: ತಮ್ಮೊಂದಿಗೆ ದೀಪಾವಳಿ ಹಬ್ಬ ಅಚರಿಸಲು ಆಗಮಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೇರಿದಂತೆ ಮಹಿಳಾ ಅಧಿಕಾರಿಗಳನ್ನು ಅನಾಥ ಮಕ್ಕಳು ಡೊಳ್ಳು ಬಾರಿಸಿ, ಹಣತೆ ದೀಪ ನೀಡುವ ಮೂಲಕ ಬರಮಾಡಿಕೊಂಡರು.ಇದೇ ಸಂದರ್ಭದಲ್ಲಿ ಸಂಸ್ಥೆ ಆವರಣದಲ್ಲಿ 100ಕ್ಕೂ ಹೆಚ್ಚು ದೀಪ ಹಚ್ಚುವ ಮೂಲಕ ಸರಳ ದೀಪಾವಳಿ ಜೊತೆಗೆ ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು.

ರಾಜಕೀಯ ಬೇಡ ಎನ್ನಿಸಿದರೆ ರಾಜಕಾರಣ ಬಿಟ್ಟು ಕುಳಿತುಕೊಳ್ಳುತ್ತೇನೆ: ಸಿ.ಟಿ.ರವಿ

ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಅಧಿಕಾರಿಗಳ ತಂಡ: ಇದೇ‌‌ ಸಂದರ್ಭದಲ್ಲಿ ಮಕ್ಕಳಿಗೆ ಪಾಸಿಂಗ್ ಬಾಲ್ ಆಟ ಅಯೋಜಿಸಲಾಗಿತ್ತು. ಹಾಡು, ಕುಣಿತದಲ್ಲಿ ಮಕ್ಕಳ ಸಂಭ್ರಮ ಕಳೆ ಕಟ್ಟಿತ್ತು. ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಅವರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಗಳಾ ಪಾಟೀಲ, ಕಲಬುರಗಿ ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಇದಕ್ಕೆ ಸಾತ್ ನೀಡಿದರು. ರಾಜ್ಯ ಮಹಿಳಾ ನಿಲಯ, ಅಮೂಲ್ಯ ಶಿಶು ಗೃಹ, ಸರ್ಕಾರಿ ಬಾಲಕೀಯ ಬಾಲ‌ಮಂದಿರದ ಸಿಬ್ಬಂದಿಗಳು ಇದಕ್ಕೆ‌‌ ಸಾಕ್ಷಿಯಾದರು.

Follow Us:
Download App:
  • android
  • ios