ವಿಜಯೇಂದ್ರ ಆಯ್ಕೆಯಿಂದ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ: ಮುರುಗೇಶ್ ನಿರಾಣಿ
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಮಾಡಿರುವುದಕ್ಕೆ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ. ಆದರೆ ವಿಜಯೇಂದ್ರ ಆಯ್ಕೆ ಸೂಕ್ತ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಹುಬ್ಬಳ್ಳಿ (ನ.13): ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಮಾಡಿರುವುದಕ್ಕೆ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ. ಆದರೆ ವಿಜಯೇಂದ್ರ ಆಯ್ಕೆ ಸೂಕ್ತ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿತ್ತು. ಇದೀಗ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಇದನ್ನು ನಾನು ಸ್ವಾಗತಿಸುತ್ತೇನೆ. ದೀಪಾವಳಿ ಉಡುಗೊರೆಯಾಗಿ ನಮಗೆ ವಿಜಯೇಂದ್ರ ಅವರನ್ನು ಪಕ್ಷ ನೀಡಿದೆ. ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ. ಮೂರನೇ ಸಲ ಮೋದಿ ಅವರನ್ನು ಪ್ರಧಾನಿಯನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮತ್ತೆ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುತ್ತೇವೆ ಎಂದು ನುಡಿದರು. ವಿಜಯೇಂದ್ರ ಆಯ್ಕೆಯಿಂದ ಕೆಲವರಿಗೆ ಅಸಮಾಧಾನವಾಗಿರುವುದು ಸಹಜ. ಪ್ರತಿಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಆಗುವ ಸಾಮರ್ಥ್ಯವಿರುವ ವ್ಯಕ್ತಿಗಳಿದ್ದಾರೆ.
ಸಾಲ ಮಾಡಿ ಬೆಳೆದಿದ್ದ ರಾಗಿ ತೆನೆ ತಿಂದು ತೇಗಿದ ಕಾಡು ಹಂದಿಗಳು: ರೈತರ ಕಣ್ಣೀರು
ಆದರ ಒಬ್ಬರನ್ನಷ್ಟೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಅಲ್ವೇ? ಹೀಗಾಗಿ ಅಳೆದು ತೂಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಸಿ.ಟಿ. ರವಿ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಬೇರೆ ಬೇರೆ ಕಾರಣದಿಂದ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅಸಮಾಧಾನ ಸಹಜ. ಆದರೆ ಇದೆಲ್ಲವೂ ಸರಿಯಾಗುತ್ತದೆ. ಹೈಕಮಾಂಡ್ ಸರಿಪಡಿಸುತ್ತದೆ ಎಂದರು. ಸಿ.ಟಿ. ರವಿ ಹೇಗೆ ಅಂತ ನನಗೆ ಗೊತ್ತು. ಅವರೇ ಮುಂದೆ ಎಲ್ಲವನ್ನು ಸರಿ ಮಾಡುತ್ತಾರೆ. ವಿಜಯೇಂದ್ರ ನನ್ನ ಜತೆಗೆ ಮಾತನಾಡಿದ್ದಾರೆ. ಎಲ್ಲರೂ ಒಂದಾಗಿ ಇರೋಣ ಎಂದು ಹೇಳಿದ್ದಾರೆ ಎಂದರು.
ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...
ಸಿ.ಟಿ. ರವಿ, ಸೋಮಣ್ಣ ಯಾರೇ ಇರಲಿ ಅವರ ಮನೆಗೆ ನಾವು ಹೋಗುತ್ತೇವೆ. ಅಸಮಾಧಾನವಿದ್ದರೆ ಸರಿಪಡಿಸುತ್ತೇವೆ ಎಂದು ನುಡಿದರು. ಗುರುವಾರ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಇದೆ. ಮುಂದೆ ಒಳ್ಳೆಯ ವಿರೋಧ ಪಕ್ಷದ ನಾಯಕರ ಆಯ್ಕೆಯೂ ಆಗುತ್ತದೆ. ಬಸವನಗೌಡ ಪಾಟೀಲ ಯತ್ನಾಳ ಸೇರಿ ಎಲ್ಲರಿಗೂ ಮಂತ್ರಿ ಆಗಬೇಕು. ಮುಖ್ಯಮಂತ್ರಿ ಆಗಬೇಕು ಅಂತ ಇರುತ್ತದೆ. ಆದರೆ ಕೆಲ ಸಲ ತ್ಯಾಗ ಮಾಡಬೇಕಾಗುತ್ತದೆ ಎಂದರು. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸದಾನಂದಗೌಡರ ಬಗ್ಗೆ ಕೇಳಿದ ಪ್ರಶ್ನೆಗೆ ಅವರದು ದೊಡ್ಡ ಗುಣ ಎಂದು ನುಡಿದರು.