ಚಿಕ್ಕೋಡಿ(ಡಿ.10): ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ ಡೆಂಘಿ ಜ್ವರದಿಂದ ಬಳಲುತ್ತಿದ್ದು, ಮಹಾರಾಷ್ಟ್ರದ ಸಾಂಗ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಮಂತ ಪಾಟೀಲ ಅವರನ್ನು ನಿನ್ನೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

"

ನಂತರದಲ್ಲಿ ಜ್ವರ ಹೆಚ್ಚಾದ ಕಾರಣ ರಾತ್ರಿ ವೇಳೆ ಮಹಾರಾಷ್ಟ್ರದ ಸಾಂಗ್ಲಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀಮಂತ ಪಾಟೀಲ್ ಡೆಂಘಿ ಜ್ವರದಿಂದ ಬಳಲುತ್ತಿರುವುದಾಗಿ ಪುತ್ರ ಶ್ರೀನಿವಾಸ ಅವರು ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೇಗೆ..? ಇಲ್ಲಿದೆ ಐದು ಕಾರಣ

ಕೆಲವು ತಿಂಗಳ ಹಿಂದೆ ಹೆಚ್ಚಿನ ಪ್ರದೇಶಗಳಲ್ಲಿ ಡೆಂಘೀ ಜ್ವರ ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಚ್ಛತೆ, ಮುಂಜಾಗೃತಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಡೆಂಘೀ ಜ್ವರದಿಂದ ಸಾವೂ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಡೆಂಘೀ ಜ್ವರಕ್ಕೆ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡುವುದು ಅಗತ್ಯ.

ಚನ್ನಪಟ್ಟಣಕ್ಕೆ ಡಬಲ್ ಧಮಾಕ : ಇಬ್ಬರಿಗೆ ಸಚಿವ ಸ್ಥಾನ ?