Asianet Suvarna News Asianet Suvarna News

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೇಗೆ..? ಇಲ್ಲಿದೆ ಐದು ಕಾರಣ

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಎಲ್ಲರಿಗೂ ಅಚ್ಚರಿಯ ವಿಷಯವೇ. ಅನರ್ಹ ಎಂಬ ಹಣೆಪಟ್ಟಿ ಇಟ್ಟುಕೊಂಡರೂ ಕೆ. ಸಿ. ನಾರಾಯಣ ಗೌಡ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ವಿಕ್ಟರಿ ಪಡೆದಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ..? ಇಲ್ಲಿದೆ ಬಿಜೆಪಿ ಗೆಲುವಿನ ಕಾರಣ.

five strong reasons that lead victory of bjp in kr pet
Author
Bangalore, First Published Dec 10, 2019, 10:29 AM IST

ಮಂಡ್ಯ(ಡಿ.10): ಕೆ. ಆರ್. ಪೇಟೆ ಜೆಡಿಎಸ್‌ ಭದ್ರಕೋಟೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕೆ. ಆರ್. ಪೇಟೆ ಈಗ ಏನಿದ್ದರೂ ಕಮಲಪಾಳಯದ ವಶಕ್ಕೆ ಬಂದಾಗಿದೆ. ಹಾಗಾದ್ರೆ ಬಿಜೆಪಿಗೆ ಈ ಗೆಲುವು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಕಾರಣ.

ಸಕ್ಕರೆ ನಾಡಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿತು. ತಂದೆ ಕನಸು ಮಗನ ಮೂಲಕ ನನಸಾಯಿತು. ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಕನಸು ಈಡೇರಿಸಲು ವಿಜಯೇಂದ್ರ ಚಾಣಾಕ್ಷ ಹೆಜ್ಜೆಗಳನ್ನಿಟ್ಟಿದ್ದರು.

ರೋಡ್ ರೋಮಿಯೋಗಳೇ ಎಚ್ಚರ, ಸಿದ್ಧವಾಗಿದೆ ಓಬವ್ವ ಪಡೆ..!

ಅಸಾಧ್ಯವಾದ ನೆಲದಲ್ಲಿ ವಿಜಯೇಂದ್ರ ಸಾಧಿಸಿತೋರಿದ್ದು, ಜೆಡಿಎಸ್‌ ಕೋಟೆ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸಿದ್ದರ ಹಿಂದೆ ಕೆಲವು ಕಾರಣಗಳಿವೆ. ಸಿಎಂ ಬಿಎಸ್‌ವೈ ತವರು, ತವರಿನಿಂದ ಒಬ್ಬ ಬಿಜೆಪಿ ಪ್ರತಿನಿಧಿ ಇಲ್ಲ ಅನ್ನೋ ಕೊರಗು ಬಿಎಸ್‌ವೈಗೆ ಇದೆ. ಅದು ಈಡೇರಬೇಕು ಎಂಬ ಭಾವನಾತ್ಮಕ ವಿಚಾರ ಮುಂದಿಟ್ಟು ಕೊಂಡು ಚುನಾವಣೆ ಎದುರಿಸಲಾಗಿತ್ತು.

ಮತದಾನ ದಿನದ ಹಿಂದಿನ ಹದಿನೈದು ದಿನಗಳಲ್ಲಿ ವಿಜಯೇಂದ್ರ, ಪ್ರೀತಂಗೌಡ, ಡಿಸಿಎಂ ಅಶ್ವಥ್ ನಾರಾಯಣ ತಂಡಗಳಿಂದ ನಡೆದ ತಳಮಟ್ಟದ ಸಂಘಟನೆ, ಪ್ರಾಬಲ್ಯವಿರುವ ಒಕ್ಕಲಿಗರು, ಕುರುಬರಷ್ಟೇ ಅಲ್ಲದೆ ಎಲ್ಲಾ ಸಮುದಾಯದವರನ್ನು ತಲುಪಿದ್ದು, ಕ್ಷೇತ್ರಕ್ಕೆ ಏನ್ ಮಾಡ್ತಿವಿ ಅನ್ನೋದನ್ನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಕಾರಣವಾಗಿದೆ.

ಕೆಸಿಎನ್‌ ಹ್ಯಾಟ್ರಿಕ್‌ ಗೆಲವು; ಕೆಬಿಸಿ ಹ್ಯಾಟ್ರಿಕ್‌ ಸೋಲು

ಆರ್ಥಿಕ ಧಾರಾಳತ‌ನ, ಚುನಾವಣೆಗಾಗಿ ಹೆಚ್ಚು ಹಣ ಖರ್ಚು ಮಾಡಿದ್ದು, ಮಹಿಳಾ ಸ್ವ ಸಹಾಯ ಸಂಘಗಳನ್ನ ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದ್ದು ಬಿಜೆಪಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಕ್ಷೇತ್ರದಲ್ಲಿನ ಜೆಡಿಎಸ್,ಕಾಂಗ್ರೆಸ್ ಮುಖಂಡರನ್ನ ಸೆಳೆದುಕೊಂಡು ಎದುರಾಳಿ ಪಕ್ಷಕ್ಕೆ ಆಘಾತ ನೀಡಿದ್ದು ದೊಡ್ಡ ಗೆಲುವು. ಕ್ಷೇತ್ರದ ಅಭಿವೃದ್ದಿ ಮಂತ್ರ ಜಪಿಸಿ ಬಿಡುಗಡೆ ಮಾಡಿದ ಪ್ರಣಾಳಿಕೆ ಪ್ಲಾನ್ ವರ್ಕ್ ಔಟ್ ಆಗಿರುವುದು ಬಿಜೆಪಿ ಗೆಲುವಿಗೆ ಕಾರಣವಾಯ್ತು. ಜೆಡಿಎಸ್ ನಾಯಕರ ಅತಿಯಾದ ಆತ್ಮವಿಶ್ವಾಸ, ಅವರ ಡ್ಯಾಮೇಜಿಂಗ್ ಹೇಳಿಕೆಗಳನ್ನ ಬಿಜೆಪಿ ನಾಯಕರು ಸಮರ್ಥವಾಗಿ ಉಪಯೋಗಿಸಿಕೊಂಡರು. ನಾರಾಯಣಗೌಡ ಗೆದ್ದರೆ ಮಂತ್ರಿಯಾಗ್ತಾರೆ ಅನ್ನೋದು ಖಚಿತವಾಗಿತ್ತು.

ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!

Follow Us:
Download App:
  • android
  • ios