Asianet Suvarna News Asianet Suvarna News

'ದೇವಸ್ಥಾನದ ತೀರ್ಥಕ್ಕಿಂತ ಬಾರ್‌ ತೀರ್ಥವೇ ಜನರಿಗೆ ಬೇಕಾಗಿದೆ'

ಮದ್ಯ ಅಂಗಡಿಗಳನ್ನು ರಾಜ್ಯ ಸರ್ಕಾರ ತೆರದಿದೆ| ದೇವಸ್ಥಾನವನ್ನು ಏಕೆ ತೆರೆದಿಲ್ಲ ಎಂದು ಜನರು ಪ್ರಶ್ನಿಸದೆ ಇರುವುದು ದುರ್ದೈವದ ಸಂಗತಿ: ಕಾಗಿನೆಲೆಯ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ|

Kaginele Niranjanandapuri Swamiji reacts Ove Bar open during LockDown
Author
Bengaluru, First Published May 6, 2020, 8:21 AM IST

ಹಾವೇರಿ(ಮೇ.06): ಕೊರೋನಾ ವೈರಸ್‌ ಭೀತಿಯ ನಡುವೆಯೂ 42 ದಿನಗಳಿಂದ ಸ್ಥಗಿತಗೊಂಡಿದ್ದ ಮದ್ಯದಂಗಡಿಗಳನ್ನು ರಾಜ್ಯ ಸರ್ಕಾರ ಸೋಮವಾರದಿಂದ ಪುನರಾರಂಭಿಸಿದೆ. 

ಈ ಬಗ್ಗೆ ಮಾತನಾಡಿದ ಕಾಗಿನೆಲೆಯ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು, ಮದ್ಯ ಅಂಗಡಿಗಳನ್ನು ರಾಜ್ಯ ಸರ್ಕಾರ ತೆರದಿದೆ. ಆದರೆ, ದೇವಸ್ಥಾನವನ್ನು ಏಕೆ ತೆರೆದಿಲ್ಲ ಎಂದು ಜನರು ಪ್ರಶ್ನಿಸದೆ ಇರುವುದು ದುರ್ದೈವದ ಸಂಗತಿ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ. 

ಗ್ರೀನ್‌ಝೋನಲ್ಲಿದ್ದ ಹಾವೇರಿಗೆ ಕಂಟಕವಾದ ಮುಂಬೈ ಲಾರಿ

ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಗಳು, ಎರಡು ದಿನಗಳಿಂದ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ದೇವಸ್ಥಾನ ತೆರೆದಿಲ್ಲ. ಈ ಕುರಿತು ಭಕ್ತರು ಯಾರೂ ಪ್ರಶ್ನಿಸಿಲ್ಲ. ಇದನ್ನು ನೋಡಿದರೆ ನಮ್ಮ ಜನರಿಗೆ ದೇವಸ್ಥಾನದ ತೀರ್ಥಕ್ಕಿಂತ ಮದ್ಯದಂಗಡಿಯಲ್ಲಿ ಸಿಗುವ ತೀರ್ಥವೇ ಮುಖ್ಯವಾಗಿರಬೇಕು ಎಂದು ಹೇಳಿಕೊಂಡಿದ್ದಾರೆ.
 

Follow Us:
Download App:
  • android
  • ios