Asianet Suvarna News Asianet Suvarna News

ಗುಳೇದಗುಡ್ಡ: ಸಾಕು ನಾಯಿಗೆ ಸೀಮಂತ ಮಾಡಿ ಸಂಭ್ರಮಿಸಿದ ಜ್ಯೋತಿ ಕುಟುಂಬ..!

*   ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಸೀಮಂತ 
*   ಚಿಂಕವ್ವ ಎಂಬ ಹೆಸರಿನ ಸಾಕು ನಾಯಿಗೆ ನಡೆದ ಸೀಮಂತ 
*   ಗರ್ಭಿಣಿ ಮಹಿಳೆಯರಂತೆ ಗರ್ಭಿತ ನಾಯಿಗೂ ಸೀಮಂತ 
 

Jyoti Family Did Seemantha to Dog at Guledagudda in Bagalkot grg
Author
Bengaluru, First Published Jun 24, 2022, 12:15 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜೂ.24):  ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ಮನೆಮಂದಿಯೆಲ್ಲಾ ಸಂಭ್ರಮಿಸಿ ಅವಳಿಗೆ ಸೀಮಂತ ಕಾರ್ಯ ಮಾಡೋದನ್ನ ನೋಡಿದಿವಿ. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಮುದ್ದಿನ ನಾಯಿ ಚಿಂಕವ್ವ ಗರ್ಭವಾಗಿದ್ದರಿಂದ ಅದಕ್ಕೆ ಸೀಮಂತ ಮಾಡುವ ಮೂಲಕ ಮನೆಮಂದಿಯೆಲ್ಲಾ ಸಂಭ್ರಮಿಸಿದ ಘಟನೆ ನಡೆದಿದೆ.

ಹೌದು, ಮನೆಯ ಮುದ್ದಿನ ಸಾಕು ನಾಯಿಗೆ ಸೀಮಂತ ಕಾರ್ಯ ನಡೆಸಿರೋ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕಲಾವಿದೆ ಜ್ಯೋತಿ ಗುಳೇದಗುಡ್ಡ ಅವರ ಮನೆಯಲ್ಲಿ ಈ ಸೀಮಂತ ಕಾರ್ಯ ನಡೆದಿದೆ. ಮನೆಯ ಹೆಣ್ಣು ಮಕ್ಕಳಿಗೆ ಆರೈಕೆ ಮಾಡುವಂತೆ ಈ ನಾಯಿ ಚಿಂಕವ್ವಗೂ ಪ್ರೀತಿಯಿಂದ ಇವರ ಕುಟುಂಬ ನೋಡಿಕೊಂಡಿದೆ. ಈ ಮಧ್ಯೆ ನಾಯಿ ಗರ್ಭ ಧರಿಸಿದೆ ಎಂದಾಕ್ಷಣ ಅದಕ್ಕೆ ನಿತ್ಯ ಮತ್ತಷ್ಟು ರುಚಿರುಚಿಯಾದ ಊಟ ಹಾಕುತ್ತಾ ನೋಡಿಕೊಂಡು ಬಂದಿದ್ದಾರೆ. ಈ ವೇಳೆ ಮನೆ ಮಂದಿಯೆಲ್ಲಾ ಕುಳಿತಾಗ ತಮ್ಮ ಮನೆಯ ನಾಯಿಗೂ ಸೀಮಂತ ಮಾಡಬಾರದೇಕೆ ಎಂಬ ವಿಚಾರ ಹೊರ ಬಂದಾಗ ಮನೆಯ ಸಾಕು ನಾಯಿಗೆ ಸೀಮಂತ ಮಾಡಲು ಕಲಾವಿದೆ ಜ್ಯೋತಿ ಗುಳೇದಗುಡ್ಡ ಅವರ ಕುಟುಂಬ ನಿರ್ಧರಿಸಿದೆ.

Jyoti Family Did Seemantha to Dog at Guledagudda in Bagalkot grg

ಬಡತನದ ಮಧ್ಯೆ ಓದಿ ಭಾರತೀಯ ಸೇನೆಗೆ ಆಯ್ಕೆಯಾದ ಕೋಟೆನಾಡಿನ ಕುವರಿ

ನಾಯಿಗೆ ಸೀರೆಯುಡಿಸಿ, ಕುಂಕುಮ ಹಚ್ಚಿ, ಬಳೆ ತೊಡಿಸಿ ಸೀಮಂತ ಕಾರ್ಯ

ಸಾಮಾನ್ಯವಾಗಿ ಮನೆಯ ಹೆಣ್ಣು ಮಕ್ಕಳ ಸೀಮಂತ ಎಂದಾಕ್ಷಣ, ಆಕೆಗೆ ಸೀರೆಯುಡಿಸಿ ಕುಂಕುಮ ಹಚ್ಚಿ, ಬಳೆ ತೊಡಿಸಿ ಉಡಿ ತುಂಬಲಾಗುತ್ತೆ, ಅದರಂತೆ ಗರ್ಭಿಣಿಯಾಗಿದ್ದ ಮನೆಯ ಸಾಕು ನಾಯಿಗೂ ಸೀಮಂತ ಮಾಡಲು ನಿಶ್ಚಯಿಸಿ ಅದಕ್ಕೆ ಸ್ನಾನ ಮಾಡಿಸಿ, ಹಸಿರು ಸೀರೆಯುಡಿಸಿದ್ದಾರೆ. ಬಳಿಕ ಆದನ್ನು ಕರೆ ತಂದು ಹಣೆಗೆ ಕುಂಕುಮ ಹಚ್ಚಿ, ಎರಡೂ ಕೈಗಳಿಗೆ ಬಳೆ ತೊಡಿಸಿ ನಂತರ ಹೂ ಹಣ್ಣು ಕಾಯಿ ತಾಂಬೂಲ ಸಮೇತ ಉಡಿ ತುಂಬುವ ಕಾರ್ಯಕ್ರಮವನ್ನ ಮಾಡಿದ್ದಾರೆ. ಮನೆಯ ಮಂದಿಯೆಲ್ಲಾ ಸೇರಿ ಅರತಿ ಎತ್ತಿ ನಾಯಿಗೆ ಶುಭಕೋರಿದ್ದಾರೆ. 

Jyoti Family Did Seemantha to Dog at Guledagudda in Bagalkot grg

ಸೀಮಂತದ ವೇಳೆ ಸುಮ್ಮನೆ ಕುಳಿತಿದ್ದ ನಾಯಿ, ಸೀಮಂತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್, ನೆಟ್ಟಿಗರು ಫುಲ್ ಫಿದಾ..

ಯೋಗ ವಿಶ್ವದ ಜೀವನ ವಿಧಾನ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಇನ್ನು ಸಾಮಾನ್ಯವಾಗಿ ನಾಯಿಗಳು ಅಂದರೆ ಸಾಕು ಅವು ನಿಂತಲ್ಲಿ ನಿಲ್ಲೋದಿಲ್ಲ, ಕುಳಿತಲ್ಲಿ ಕೂರೋದಿಲ್ಲ, ಆದರೆ ಕಲಾವಿದೆ ಜ್ಯೋತಿ ಗುಳೇದಗುಡ್ಡ ಅವರ ಮನೆಯ ಶ್ವಾನ ಮಾತ್ರ ತನಗೆ ಸೀಮಂತ ಕಾರ್ಯ ಮಾಡುವ ವೇಳೆ ಅತ್ತಿತ್ತ ಕದಲಲೇ ಇಲ್ಲ.‌ ತದೇಕಚಿತ್ತವಾಗಿ ತನಗೆ ಹಾಕುತ್ತಿದ್ದ ಬಳೆ, ಹಣೆಗೆ ಇಡುತ್ತಿದ್ದ ಕುಂಕುಮ, ಪ್ರತಿಯೊಬ್ಬರು ಆರತಿ ಮಾಡುತ್ತಿದ್ದ ವೇಳೆ ಶಾಂತವಾಗಿಯೇ ನಾಯಿ ಕುಳಿತಿತ್ತು. ಇದನ್ನು ನೋಡಿ ಮನೆಯ ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲಾ ನೋಡಿ ಅಚ್ಚರಿಗೊಂಡರು.‌ ಇತ್ತ ಮನೆಯಲ್ಲಿ ಶ್ವಾನಕ್ಕೂ ನಡೆಸಿದ ಸೀಮಂತ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನ ನೋಡಿರೋ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. 

ಒಟ್ಟಿನಲ್ಲಿ ಆಧುನಿಕತೆಯ ನಾಗಾಲೋಟದಲ್ಲಿ ಸಂಪ್ರದಾಯಗಳು ಮರೆಯಾಗಿ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಮನೆಯವರಿಂದ ದೂರವಾಗಿ ಸೀಮಂತ ಇಲ್ಲದೆ ಕೊರಗಿದ ಉದಾಹರಣೆಗಳಿವೆ, ಇವುಗಳ ಮದ್ಯೆ ಕಲಾವಿದರ ಕುಟುಂಬವೊಂದು ತಮ್ಮ ಮನೆಯ ಸಾಕು ನಾಯಿಗೆ ಮನುಷ್ಯರಂತೆ ಪ್ರೀತಿ ವಾತ್ಸಲ್ಯ ನೀಡಿ ಮಮತೆಯ ಸೀಮಂತ ಮಾಡಿ ಗಮನ ಸೆಳೆದಿದ್ದು ಅಭಿಮಾನದ ಸಂಗತಿಯೇ ಸರಿ.
 

Follow Us:
Download App:
  • android
  • ios