ಶಿಕಾರಿಪುರ[ಜ. 31] ಶಿಕಾರಿಪುರದಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ಬಹುತೇಕ ಕಾರ್ಯಕ್ರಮಗಳು ಮುಗಿದಿದ್ದು ಸಂಭ್ರಮ ಇನ್ನು ಕೆಲ ದಿನ ಇದೆ. ಆದರೆ ಶಿಕಾರಿಪುರ ಜಾತ್ರೆಯಲ್ಲಿ ನಡೆದ ಅವಘಡ ಎಂಬ ಅರ್ಥ ತರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾತ್ರಾ ತೊಟ್ಟಿಲು[ಜಾಯಿಂಟ್ ವೀಲ್] ನಿಂದ  ಇಬ್ಬರು ಜಾರಿ ಬೀಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಶಿಕಾರಿಪುರ ಜಾತ್ರೆಯದು ಎಂದು ಹೇಳಲಾಗಿತ್ತು. ಆದರೆ ಈಗ ಅಸಲಿತ್ತು ಬಯಲಾಗಿದೆ.

ವಿವಿಧ ಆಟಗಳು ಜನರನ್ನು ರಂಜಿಸುತ್ತಿದ್ದು ಅದರೆ ತೋಟಿಲಿನಿಂದ ಜಾರಿ ಬಿದ್ದ ವಿಡಿಯೋ ವೈರಲ್ ಆಗಿದ್ದು ಅದು ಶಿಕಾರಿಪುರ ಜಾತ್ರೆಯಲ್ಲಿ ನಡೆದ ಘಟನೆಯಲ್ಲ. ಮಂಗಳವಾರದಿಂದ ಜಾತ್ರೆ ಪ್ರಾರಂಭವಾಗಿದ್ದು  ಕೆಲವು ದಿನಗಳಿಂದ ಎಲ್ಲಾರ ವಾಟ್ಸಫ್, ಫೇಸ್ ಬುಕ್ ಗಳಲ್ಲಿ ತೋಟಿಲ ಆಟ ಆಡುವಾಗ ಕೊಂಡಿಕಳಚಿ ಮಹಿಳೆಯರು ಬಿದ್ದಿರುವ ವಿಡಿಯೋ ವೈರಲ್ ಆಗಿತ್ತು.ಅದರೆ ಕೊಂಡಿಕಳಚಿ ಬಿದ್ದಿರುವ ವಿಡಿಯೋ ಶಿಕಾರಿಪುರದಲ್ಲ ಎಂದು ಜಾತ್ರಾ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಹಾಗೂ ಆ ವಿಡಿಯೋದಲ್ಲಿ ಹಸಿರು ಬಣ್ಣದ ನೆಲ ಹಾಸಿಗೆ ಹಾಕಲಾಗಿದ್ದು ಶಿಕಾರಿಪುರದಲ್ಲಿ ಯಾವುದೇ ರೀತಿಯ ನೆಲ ಹಾಸಿಗೆ ಹಾಕಿಲ್ಲ.

"