ಸ್ನೇಹಿತನ ಪೋಸ್ಟ್‌ಮಾರ್ಟಮ್ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ
ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಸಿಂದಗಿ ಸಿಪಿಐ ರವಿ ಹಾಗೂ ಜೇವರ್ಗಿ ಸಿಪಿಐ ಭೀಮಣ್ಣ ಇಬ್ಬರೂ ಸ್ನೇಹಿತರು, ಭೀಮಣ್ಣ ಇಂಡಿಯಲ್ಲಿ ಸಿಪಿಐ, ಆಗ ರವಿ ಸಿಂದಗಿಯಲ್ಲಿ ಸಿಪಿಐ, ಭೀಮಣ್ಣ ಜೇವರ್ಗಿಗೆ ಬಂದು 4 ದಿನವಾಯ್ತು
ಕಲಬುರಗಿ/ಸಿಂದಗಿ(ಡಿ.08): ಭೀಕರ ರಸ್ತೆ ದುರಂತದಲ್ಲಿ ದಾರುಣ ಸಾವನ್ನಪ್ಪಿರುವ ಸಿಂದಗಿ ಸಿಪಿಐ ರವಿ ಉಕ್ಕುಂದಿ ಇವರನ್ನು ನೆನೆದು ಜೇವರ್ಗಿ ಸಿಪಿಐ ಭೀಮಣ್ಣ ಬಿರಾದಾರ್ ಕಣ್ಣೀರು ಹಾಕುತ್ತಿದ್ದಾರೆ. ಸ್ನೇಹಿತನ ಶವ ಪರೀಕ್ಷೆಯನ್ನು ತಾನೇ ಮುಂದೆ ನಿಂತು ಮಾಡಿಸುವಂತಾಯ್ತಲ್ಲ ಎಂದು ವಿಧಿಯನ್ನು ಹಳಿಯುತ್ತಿದ್ದಾರೆ. ಭೀಮಣ್ಣ ಜೇವರ್ಗಿ ಸಿಪಿಐ ಎಂದು ವರ್ಗವಾಗಿ ಬಂದು 4 ದಿನವಾಯ್ತಷ್ಟೆ, ತಮ್ಮ ಸ್ನೇಹಿತ ಸಿಪಿಐ ರವಿ ಉಕ್ಕುಂದಿ ದಂಪತಿ ಸಾವಿನ ಘೋರ ರಸ್ತೆ ದುರಂತದೊಂದಿಗೇ ಜೇವರ್ಗಿ ಕೆಲಸ ಶುರು ಮಾಡುವಂತಾಯ್ತಲ್ಲ ಎಂದು ಭೀಮಣ್ಣ ಬಿಕ್ಕುತ್ತಿದ್ದಾರೆ. 2 ದಿನದ ಹಿಂದಷ್ಟೆರವಿಗೆ ಫೋನ್ ಕರೆ ಮಾಡಿ ಮಾತನಾಡಿದ್ದೆ. ಇಷ್ಟು ಬೇಗ ಆತನ ಸಾವಿನ ಸುದ್ದಿ ಕೇಳಬೇಕಾಗಿ ಬರುತ್ತದೆ ಅಂದುಕೊಂಡಿರಲಿಲ್ಲ ಎಂದು ಅವರು ವಿಧಿಯ ಅಟ್ಟಹಾಸವನ್ನು ಶಪಿಸುತ್ತಿದ್ದಾರೆ.
ಕನ್ನಡಪ್ರಭ ಜೊತೆ ಮಾತನಾಡಿದ ಸಿಪಿಐ ಭೀಮಣ್ಣ ಬೆಳಗ್ಗೆ ಎದ್ದು ತಮ್ಮ ವಾಕಿಯಾಕಿಯಲ್ಲಿ ಬಂದ ರಸ್ತೆ ದುರಂತ, ಅದರಲ್ಲಿ ಮಿದಾತ ತಮ್ಮ ನೇಹಿತ ಎಂಬುದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ ಎಂದು ಕಂಬನಿ ಮಿಡಿದರು. ರವಿ ತುಂಬ ಮಾನವೀಯತೆ ಮೌಲ್ಯಗಳಿರುವ ವ್ಯಕ್ತಿ. 6 ಹಾಗೂ 9 ವರ್ಷದ ಹೆಣ್ಣು, ಗಂಡು ಮಕ್ಕಳಿದ್ದಾರೆ. ತುಂಬು ಸಂಸಾರ ಅವರದ್ದಾಗಿತ್ತು. ಸೇವಾ ಹಿರಿತನದಲ್ಲಿ ರವಿ ತಮಗಿಂತ ಜಯೂನಿಯರ್. ಆದಾಗ್ಯೂ ಸ್ನೇಹಕ್ಕೆ ತುಂಬ ಬೆಲೆ ಕೊಉತ್ತಿದ್ದ ಎಂದು ಭೀಮಣ್ಣ ಅಗಲಿದ ರವಿಯನ್ನು ನೆನೆದು ಕಣ್ಣೀರಿಟ್ಟರು.
ಮಸ್ಕಿ: ಗುಡದೂರು ಬಳಿ ರಸ್ತೆ ಅಪಘಾತ, ಮೂವರ ದುರ್ಮರಣ
ಹಾವೇರಿ ಜಿಲ್ಲೆಯ ಹಿರೆಕೋರೂರ್ ತಾಲೂಕು ಅರಳಿಕಟ್ಟೆಯ ರವಿ ಉಕ್ಕುಂದಿ ಕೊಪ್ಪಳದಲ್ಲಿ 7 ವರ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿ ಅಲ್ಲಿಂದ ಸಿಂದಗಿಗೆ ಬಂದವರು. ಅಲ್ಲಿಗೆ ಬಂದು ಒಂದೂವರೆ ವರ್ಷವಾಗಿತ್ತು. ಆಗ ಇಂಡಿಯಲ್ಲಿ ಭೀಮಣ್ಣ ಸಿಪಿಐ ಆಗಿದ್ದರು. ರವಿ ಹಾಗೂ ಪತ್ನಿ ಮಧು ತುಂಬ ದೈವಭಕ್ತೆ. ವಾರದ ಹಿಂದಷ್ಟೆಮಂತ್ರಾಲಯತ್ತೆ ಹೋಗಿ ರಾಯರ ರುಶನ ಪಡೆದು ಬಂದವರು. ಮದು ತಂದೆ ಹನುಮಂತಪ್ಪ ಓಲೆಕಾರ್ ಇವರು ಸಿಡಿಪಿಎ ಆಗಿ ನಿವೃತ್ತರಾಗಿದ್ದರು. ಇವರ ದುರಂತದ ಸಾವು ನಮಗೆಲ್ಲರಿಗೂ ಉಃಖ ತಂದಿದೆ ಎಂದು ಕೊಪ್ಪಳದ ಇವರ ಆಪ್ತರಾದ ರಮೇಶ ಕುಲಕರ್ಣಿ ದುಃಖಿಸಿದರು.
ರವಿ ಫತ್ತುಂದಿ ಹಾಗೂ ಮದು ಉಕ್ಕುಂದಿ ಇವರಿಬ್ಬರ ಪಾರ್ಥೀವ ಶರೀರದ ಪೋಸ್ಟ್ ಮಾರ್ಟಮ್ ಆಗಿದ್ದು ಅಂಇಮ ಸಂಸ್ಕಾರ ಹಿರೆಕೇರೂರಿನ ಅರಳಿಕಟ್ಟೆಯಲ್ಲಿ ಗುರುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ. ಮಕ್ಕಳನ್ನು ಅತ್ತ ಶಾಲೆಗೆ ಕಳುಹಿಸಿ ಇತ್ತ ಆಸ್ಪತ್ರೆಗೆ ಹೋಗಿ ಬರೋಣವೆಂದು ಬಂದ ರವಿ ಹಾಗೂ ಮಧು ಬಾರದ ಲೋಕಕ್ಕೆ ತೆರಳಿರುವ ಬೆಳವಣಿಗೆ ಬಂಧುಗಳನ್ನು ರೋದಿಸುವಂತೆ ಮಾಡಿದೆ.
ಲಾರಿಗೆ ಕಾರು ಡಿಕ್ಕಿ: ಸಿಪಿಐ ದಂಪತಿ ಸಾವು
ಸಿಂದಗಿ: ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಸಿಂದಗಿ ಸಿಪಿಐ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಸಮೀಪ ಬುಧವಾರ ನಡೆದಿದೆ. ಸಿಂದಗಿ ಸಿಪಿಐ ರವಿ ಉಕ್ಕುಂದ್ (45) ಹಾಗೂ ಪತ್ನಿ ಮಧುಮತಿ (40) ಸ್ಥಳದಲ್ಲೇ ಮೃತರಾಗಿದ್ದಾರೆ.
ಚಿಕ್ಕಬಳ್ಳಾಪುರ: ಹಾವು ತಪ್ಪಿಸಲು ಹೋಗಿ ಟ್ರಕ್ ಚಾಲಕ ಎಡವಟ್ಟು, ಸರಣಿ ಅಪಘಾತ
ಕಾರಿನಲ್ಲಿ ಸಿಂದಗಿಯಿಂದ ಕಲಬುರಗಿ ನಗರಕ್ಕೆ ರವಿ ಉಕ್ಕುಂದ್ ಹಾಗೂ ಪತ್ನಿ ಮಧುಮತಿ ಹೊರಟಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದೆ. ಮೃತ ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ. ಕಲಬುರ್ಗಿ ಜಿಲ್ಲೆಯ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಾಲೂಕು ಆಡಳಿತದಿಂದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೌನಾಚರಣೆ ಮಾಡಿ ನುಡಿನಮನ ಸಲ್ಲಿಸಿದರು.
ಶಾಸಕ ರಮೇಶ ಭೂಸನೂರ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಪುರಸಭೆಯ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಅರುಣ ಶಹಾಪುರ, ವಿಠ್ಠಲ ಕೋಳೂರ, ಅಶೋಕ ಅಲ್ಲಾಪುರ, ರಾಜಶೇಖರ ಕೂಚಬಾಳ, ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಸಿಡಿಪಿಒ ಬಸವರಾಜ ಜಿಗಳೂರ, ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಸಂತೋಷ ಮಣಗಿರಿ, ಸಿಂದಗಿ ಪಿಎಸೈ ಸೋಮೇಶ ಗೆಜ್ಜಿ, ಆಲಮೇಲ ಪಿಎಸೈ ಅಜೀತಕುಮಾರ ಹೊಸಮನಿ, ದೇವರಹಿಪ್ಪರಗಿ ಪಿಎಸೈ ರಾಜು ಬೀಳಗಿ, ಕಲಕೇರಿ ಪಿಎಸೈ ರವಿ ಯಡವಣ್ಣವರ, ಕಲಬುರಗಿ ಸಿಪಿಐ ಶಕೀಲ ಅಂಗಡಿ, ಬೆಳಗಾವ ಸಿಪಿಐ ಮಹಾಂತೇಶ ದ್ಯಾಮಣ್ಣವರ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಸಿಂದಗಿ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.