ಬೇಲೂರು (ಅ.20):  ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆದು, ಮತ್ತೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.

ಮೂರು ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಸಿಎಂಬಿ ವರ್ಗದಲ್ಲಿ ಡಿ.ಪಿ.ಸೋಮೇಗೌಡ, ಎಸ್‌ ರವಿ, ಸಾಮಾನ್ಯ ವರ್ಗದಿಂದ ಡಿ.ಇ,. ಮಲ್ಲೇಗೌಡ, ಪಿ.ಟಿ ಸೋಮೇಗೌಡ, ಎಸ್ಸಿ ವರ್ಗದಿಂದ ಹೆಚ್‌.ಎಂ. ಗೋವಿಂದಪ್ಪ, ಚಿಕ್ಕಬ್ಯಾಡಿಗೆರೆ ಮಂಜುನಾಥ್‌ ಹಾಗೂ ಬಿ.ಎಲ್‌ ಲಕ್ಷ್ಮಣ್‌ ಸೇರಿ ಏಳು ಜನರು ಕಣದಲ್ಲಿದ್ದರು.

ಉಪ ಚುನಾವಣೆ : ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಅಭ್ಯರ್ಥಿ ಮುನಿರತ್ನ ..

215 ಮತದಾರರಿದ್ದು ಇದರಲ್ಲಿ 206 ಮತದಾನವಾಗಿದ್ದು ಸಾಮಾನ್ಯ ವರ್ಗದಿಂದ ಡಿ.ಇ. ಮಲ್ಲೇಗೌಡ 142, ಹಿಂದುಳಿದ ವರ್ಗ ಬಿ ಡಿ.ಪಿ. ಸೊಮೇಗೌಡ 140, ಪರಿಶಿಷ್ಟಜಾತಿಯಿಂದ ಬಿ ಎಲ್‌ ಲಕ್ಷ್ಮಣ್‌ 118 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣೆ ಅ​ಕಾರಿಯಾಗಿದ್ದ ಎಸ್‌ ಆರ್‌ ಲೋಕೇಶ್‌ ತಿಳಿಸಿದರು.

13 ಸದಸ್ಯರ ಬಲದ ವ್ಯವಸಾಯ ಉತ್ಪನ್ನ ಸಹಕಾರ ಸಂಘದಲ್ಲಿ 10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಲ್ಲಿ ಬಿಡಿ ಚಂದ್ರೇಗೌಡ, ಎಸ್‌ ನಾಗೇಶ್‌, ಬಿ,ಎಂ ರವಿಕುಮಾರ್‌, ಕೆಜಿ ಕುಮಾರ್‌, ರಾಜಶೇಖರಯ್ಯ, ಕಾಂತರಾಜ, ಪ್ರಸಾದ್‌, ಭಾರತೀಗೌಡ, ಪ್ರಿಯಾಂಕ, ಜಾನಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ವಿಜಯಿಶಾಲಿಯಾದವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಎಸ್‌. ಲಿಂಗೇಶ್‌ ಎಲ್ಲರ ಸಹಕಾರದಿಂದಾಗಿ ಮತ್ತೊಮ್ಮೆ ಜೆಡಿಎಸ್‌ ತನ್ನ ಹಿಡಿತವನ್ನು ಸಹಕಾರ ಕ್ಷೇತ್ರದಿಂದ ಹಿಡಿಯುತ್ತಾ ಬಂದಿದೆ. ಇದಕ್ಕೆ ಕಾರಣ ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಸಹಕಾರ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ನೆನೆದು ಈ ದಿನ ಮತದಾರರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅಲ್ಲದೇ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಿಎಲ್‌ಡಿ ಬ್ಯಾಂಕ್‌ ನಲ್ಲಿ ಇದ್ದಂತ 13 ಕ್ಷೇತ್ರಗಳಲ್ಲಿ 10 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಮಾಡುವುದರ ಮೂಲಕ ಜೆಡಿಎಸ್‌ ಪಕ್ಷ ಪ್ರಾಬಲ್ಯ ಮೆರೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿಡಿ ಚಂದ್ರೇಗೌಡ ಮಾತನಾಡಿ, ಸುಮಾರು 15 ವರ್ಷದಿಂದ ಜೆಡಿಎಸ್‌ ತನ್ನ ಪ್ರಾಬಲ್ಯ ಮೆರೆದುಕೊಂಡು ಬರುತ್ತಿದೆ. ಈಗಾಗಲೇ 13 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಲ್ಲಿ ಸಂಸದರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಮೂರು ಸ್ಥಾನಗಳಿಗೆ ಮತ್ತೊಮ್ಮೆ ಜೆಡಿಎಸ್‌ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದ್ದಾರೆ ಎಂದರು.

ನೂತನ ಸದಸ್ಯರಾದ ಮಲ್ಲೇಗೌಡ ಸೋಮೇಶ್‌ ಮಾತನಾಡಿ, ಎಲ್ಲರ ಸಹಕಾರದಿಂದ ಮತದಾರ ಒಲವಿನಿಂದಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ವ್ಯವಸಾಯ ಉತ್ಪನ್ನದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಕೊಂಡೊಯ್ಯುವುದರ ಜೊತೆಗೆ ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.