Karnataka Politics : 'ಜೆಡಿಎಸ್‌ಗೆ ವಿಜಯ : ಬಿಜೆಪಿ-ಕಾಂಗ್ರೆಸ್‌ ಮೈತ್ರಿಗೆ ಸಿಕ್ಕ ಪಾಠ'

  • 'ಜೆಡಿಎಸ್‌ಗೆ ವಿಜಯ ಬಿಜೆಪಿ-ಕಾಂಗ್ರೆಸ್‌ ಮೈತ್ರಿಗೆ ಸಿಕ್ಕ ಪಾಠ'
  • ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ಜನರಿಂದ ತಕ್ಕ ಪಾಠ
  • ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಎಂ.ಆರ್‌.ಮಂಜುನಾಥ್‌ ಟೀಕೆ
JDS Victory  is The lesson For BJP Congress in Hanur Grama Panchayat Election snr

ಹನೂರು(ಜ.03):  ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕೆ.ಗುಂಡಾಪುರ 3ನೇ ವಾರ್ಡ್‌ನಲ್ಲಿ ಬಿಜೆಪಿ (BJP), ಕಾಂಗ್ರೇಸ್‌ (Congress) ರಾಷ್ಟ್ರೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಜೆಡಿಎಸ್‌ (JDS) ಬೆಂಬಲಿತರನ್ನು ಸೋಲಿಸಲು ಕಾರ್ಯತಂತ್ರ ರೂಪಿಸಿದರು. ಅವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜೆಡಿಎಸ್‌ (JDS)  ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಂ.ಆರ್‌.ಮಂಜುನಾಥ್‌ ಟೀಕಿಸಿದರು.

ಇತ್ತೀಚಿಗೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ (Grama Panchayat Election) ಸೂಳೇರಿಪಾಳ್ಯ ಗ್ರಾ.ಪಂ.ವ್ಯಾಪ್ತಿಯ ಕೆ.ಗುಂಡಾಪುರ 3ನೇ ವಾರ್ಡ್‌ಗೆ ನಡೆದ ಗ್ರಾ.ಪಂ.ಸದಸ್ಯ ಸ್ಥಾನಕ್ಕೆ ಬರೊಬ್ಬರಿ 143 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ ಜೆಡಿಎಸ್‌ (JDS) ಬೆಂಬಲಿತ ಸದಸ್ಯೆ ಜ್ಯೋತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಬರುವ ಚುನಾವಣೆಗಳಲ್ಲಿ (Election) ಜೆಡಿಎಸ್‌  (JDS) ಪಕ್ಷ ವಿಜಯದ ನಾಗಲೋಟ ಮುಂದುವರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕ್ಷೇತ್ರ ವ್ಯಾಪ್ತಿಯ ಸಿಂಗನಲ್ಲೂರು, ಕೆ.ಗುಂಡಾಪುರ, ಕುರಟ್ಟಿ ಹೊಸೂರು ಗ್ರಾ.ಪಂ.ಗಳ ಸದಸ್ಯತ್ವ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Election) ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿರುವುದು ಜೆಡಿಎಸ್‌ (JDS) ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಅಲ್ಪ ಅವಧಿಯಲ್ಲಿಯೇ 45 ಸಾವಿರ ಮತಗಳನ್ನು ನೀಡಿದ ಜನತೆ, ಪಕ್ಷದ ಸಿದ್ದಾಂತ ಹಾಗೂ ಕಾರ್ಯವೈಖರಿಯನ್ನು ಕಂಡು ಬೆಂಬಲಿಸುತ್ತಾ ಬಂದಿದ್ದಾರೆ. ಇದಕ್ಕೆ ಪೂರಕವಾಗಿ ವಿಧಾನಪರಿಷತ್‌ ಚುನಾವಣೆ ಜೆಡಿಎಸ್‌ ಅಭ್ಯರ್ಥಿ ಗೆಲುವು ಹಾಗೂ ಗ್ರಾ.ಪಂ.ಚುನಾವಣೆಯ ಗೆಲುವು ಸಾಕ್ಷಿಯಾಗಿದೆ ಎಂದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮಂಜೇಶ್‌, ಸಿಂಗನಲ್ಲೂರು ರಾಜಣ್ಣ, ಅಮೀನ್‌ ಸೇರಿದಂತೆ ಸೂಳೇರಿಪಾಳ್ಯ ಗ್ರಾ.ಪಂ.ವ್ಯಾಪ್ತಿಯ ಮಹಮದ್‌ ರಫಿ, ಹೊನ್ನೇಗೌಡ, ಜಡೇಸ್ವಾಮಿ, ಅಜು, ಬಾಬು, ಗೋಪಾಲ, ಚಿನ್ನವೆಂಕಟ, ಮಾರನಾಯಕ, ಸೀನಪ್ಪ, ಶಿವರಾಮು ಇದ್ದರು.

ರಾಜಕೀಯ ನಿವೃತ್ತಿ ಸವಾಲು  :    ನಾನು ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಷ್ಟು ದಿನ ಯಾವುದೇ ರೀತಿ ಅಕ್ರಮ ನಡೆಸಿಲ್ಲ. ಆದರೆ, ಶಾಸಕ ಶ್ರೀನಿವಾಸಗೌಡರು ಮಾಡಿರುವ ಆರೋಪ ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು (Govindaraju) ಸವಾಲು ಹಾಕಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರವಷ್ಟೇ ಶಾಸಕ ಶ್ರೀನಿವಾಸಗೌಡರು(K Shrinivas Gowda) ) ಮಾಡಿದ್ದ ಆರೋಪಕ್ಕೆ ಉತ್ತರಿಸುವ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಅವರು ಹೇಳಿರುವಂತೆ ಅಕ್ರಮ ಎಸಗಿದ್ದರೆರಾಜಕೀಯದಿಂದ ದೂರವಾಗುತ್ತೇನೆ. ಆದರೆ, ಅದನ್ನು ಸಾಬೀತುಪಡಿಸಲಾಗದಿದ್ದರೆ ಶ್ರೀನಿವಾಸಗೌಡರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಸರಿಯಲು ಎಂದು ಆಗ್ರಹಿಸಿದರು.

ಮಾನನಷ್ಟ ಮೊಕದ್ದಮೆ ದಾಖಲು: ಶಾಸಕ ಶ್ರೀನಿವಾಸಗೌಡರ ವಯಸ್ಸು, ರಾಜಕಾರಣದ ಬಗ್ಗೆ ಬಹಳ ಗೌರವ ಇದೆ. ಆದರೆ, ಗೌರವಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ನಾನು ಸಾರಿಗೆ ಸಂಸ್ಥೆಯ ಕೆಲಸಕ್ಕೆ ಸೇರಿದ್ದು 1985ರಲ್ಲಿ. ಆನಂತರ 1987ರಲ್ಲಿ ವರ್ಗಾವಣೆಯಾಗಿ 1988ಕ್ಕೆ ಬೆಂಗಳೂರು ಬಿಎಂಟಿಸಿಗೆ ಬಂದೆ,ಆನಂತರ 1996ರಲ್ಲಿ ಸ್ವಯಂ ನಿವೃತ್ತಿಪಡೆದು ಕೃಷಿ ಚಟವಟಿಕೆಗಳನ್ನು ಆರಂಭಿಸಿ, ಈಗ ಉದ್ಯಮಿಯಾಗಿದ್ದೇನೆ. ಅವರು ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸದಿದ್ದರೆ ಮಾನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜಕೀಯದಿಂದ ಹಿಂದೆ ಸರಿಯಲಿ: ಶ್ರೀನಿವಾಸಗೌಡರು ಪ್ರಥಮವಾಗಿ ಶಾಸಕರಾಗಿ 1990ರಲ್ಲಿ. ಅವರು ಇದನ್ನು ಮರೆತಿದ್ದಾರೆ. ಸಂಸ್ಥೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದೇವೆ,ಈಗಲೂ ನನಗೆ ಉತ್ತಮ ಹೆಸರು ಇದೆ. ನಾನು ತಪ್ಪು ಮಾಡಿದ್ದರೆ ತನಿಖೆಯಾಗಿರುವ ದಾಖಲೆಗಳು ಇರುತ್ತವೆ. ವಯಸ್ಸನಲ್ಲಿಹಿರಿಯರಿದ್ದಾರೆ, ನಿರೂಪಿಸದಿದ್ದರೆ ರಾಜಕೀಯದಿಂದ ಹಿಂದಕ್ಕೆ ಸರಿಯಲಿ ಎಂದು ಸಲಹೆ ನೀಡಿದರು.

ಸಚಿವರಿಗೆ ಪತ್ರ ಬರೆದಿದ್ದೇನೆ: ಕಲಾಪಗಳಲ್ಲಿ ವರ್ತನೆ ನಮ್ಮಂತವರಿಗೆ ಆಗಿ ಬರಲ್ಲ. ಕೋಲಾರ ನಗರದಲ್ಲಿ 80 ಕಿ.ಮೀ ಈಗಲೂ ಮಣ್ಣು ರಸ್ತೆಗಳು ಇವೆ, ನಗರಸಭೆಯನ್ನು ಎ ಗ್ರೇಡ್‌ಗೆ ಏರಿಸಲಾಗಿದೆ, ಪ್ರಮುಖ ಮೂರು ರಸ್ತೆಗಳಲ್ಲಿ ಬೀದಿದೀಪ ಆವಳವಡಿಸಲು ಕ್ರಮಕೈಗೊಳ್ಳಲಾಗಿದ್ದು, ಈ ಬಗ್ಗೆ ನಗರಾಭಿವೃದ್ಧಿಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜನ ಪ್ರಶ್ನೆ ಮಾಡಲಿ: ನಗರ, ಕ್ಷೇತ್ರ ಬಗ್ಗೆ ಶ್ರೀನಿವಾಸಗೌಡರಿಗೆ ಕಾಳಜಿಯಿಲ್ಲ. ಅವರನ್ನು ಬಲವಂತ ಮಾಡಿ ತಾಜ್‌ ಹೋಟೆಲ್‌ಗೆ ಕರೆದುಕೊಂಡು ಹೋಗಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿ ಮೂರು ರಸ್ತೆಗೆ 17 ಕೋಟಿ ರೂ. ಮಂಜೂರು ಮಾಡಿಸಲಾಯಿತು. ಜ್ಞಾಪಕ ಇದ್ರೆ ಮೆಲಕು ಹಾಕಲಿ. ನಾನು ರಾಜಕಾರಣ ಮಾಡಲ್ಲ. ಜಿಲ್ಲೆಯಲ್ಲಿ ಸಂಸದರು, ಶಾಸಕರುಇದ್ದಾರೆ ಎಷ್ಟರ ಮಟ್ಟಿಗೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂಬುದಕ್ಕೆ ಜನ ಪ್ರಶ್ನೆ ಮಾಡಲಿ ಎಂದು ಕಿವಿಮಾತು ಹೇಳಿದರು.

Latest Videos
Follow Us:
Download App:
  • android
  • ios