ಮಂಡ್ಯ(ಜ.31): ಮೈತ್ರಿ ಸರ್ಕಾರ ಉರುಳಿಸಿದವರ ಪರವಾಗಿ ಮಂಡ್ಯ ಜೆಡಿಎಸ್ ಶಾಸಕರು ಬ್ಯಾಟಿಂಗ್ ಮಾಡಿರೋ ಘಟನೆ ನಡೆದಿದೆ. ಕಾಂಗ್ರೆಸ್, JDSಗೆ ಕೈಕೊಟ್ಟು ಕಮಲ ಹಿಡಿದವರ ಪರವಾಗಿ ಜೆಡಿಎಸ್ ಶಾಸಕರು ಮಾತನಾಡುತ್ತಿದ್ದಾರೆ.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡರಿಂದ ಮಿತ್ರ ಮಂಡಳಿ ಪರ ಬ್ಯಾಟಿಂಗ್ ನಡೆದಿದ್ದು, ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆಂದು ಊಹಾಪೋಹಗಳಿಂದ ಸುದಿಯಾಗಿದ್ದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ನಾರಾಯಣ ಗೌಡ ಪರ ಮಾತನಾಡಿದ್ದಾರೆ.

ಬಿಎಸ್‌ವೈಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಪೂಜೆ

ಕೈ, ತೆನೆ ತೊರೆದ 17 ಮಂದಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಲಾಗಿದ್ದು, ಮೈತ್ರಿ ಸರ್ಕಾರ ಬೀಳಿಸುವಾಗ ಮಂತ್ರಿ ಮಾಡುತ್ತೇವೆಂದು ಬಿ. ಎಸ್‌. ಯಡಿಯೂರಪ್ಪ ಮಾತು ಕೊಟ್ಟಿದ್ರು. ಈಗ ಕೆಲವರಿಗಷ್ಟೇ ಸಚಿವ ಸ್ಥಾನ ಅಂತ ಹೇಳಲಾಗುತ್ತಿದೆ. ಕೊಟ್ಪ ಮಾತಿನಂತೆ 17 ಮಂದಿಯನ್ನೂ ಮಂತ್ರಿ ಮಾಡಬೇಕು ಎಂದಿದ್ದಾರೆ.

ಯಡಿಯೂರಪ್ಪ ಮಾತು ತಪ್ಪಿದರೆ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ. ಸೋತಿರುವ ವಿಶ್ವನಾಥ್, ಎಂಟಿಬಿ ನಾಗರಾಜ್ ಅವರನ್ನೂ ಮಂತ್ರಿ ಮಾಡಬೇಕು. ಕೆ. ಆರ್. ಪೇಟೆಯಲ್ಲಿ ಗೆದ್ದ ನಾರಾಯಣಗೌಡ ಅವ್ರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಎಚ್ಡಿಕೆ ಸರ್ಕಾರಕ್ಕೆ ಮುಳ್ಳಾದವರ ಪರ ಇಬ್ಬರು ದಳಪತಿಗಳು ಬ್ಯಾಟಿಂಗ್ ಮಾಡಿರೋದು ಕುತೂಹಲ ಸೃಸ್ಟಿಸಿದೆ.

ಶಸ್ತ್ರಾಸ್ತ್ರ ತ್ಯಜಿಸಿ ಒಂದೇ ದಿನ 1615 ಉಗ್ರರು ಶರಣಾಗತಿ