ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮುಖಂಡ, ಬೆಂಬಲಿಗರು
ಜೆಡಿಎಸ್ ಪಕ್ಷದ ಮುಖಂಡರೋರ್ವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಪಕ್ಷವನ್ನು ಸೇರಿದ್ದಾರೆ.
ಪಾವಗಡ (ಮಾ.09): ಜೆಡಿಎಸ್ ಮುಖಂಡರಾಗಿದ್ದ ಕಣವೇನಹಳ್ಳಿ ನರೇಶ್ ಮತ್ತು ಅವರ ಬೆಂಬಲಿಗರು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಶಾಸಕ ವೆಂಕಟರಮಣಪ್ಪ ಅವರ ಸಾಮಾಜಿಕ ನ್ಯಾಯ ಹಾಗೂ ಜನಪರ ಕಾಳಜಿ ಹಿನ್ನೆಲೆಯಲ್ಲಿ ತಾ.ಕಾಂಗ್ರೆಸ್ ಅಧ್ಯಕ್ಷ ಎಚ್,ವಿ.ವೆಂಕಟೇಶ್ ನಗರಾಧ್ಯಕ್ಷ ಸುದೇಶ್‌ಬಾಬು ನೇತೃತ್ವದಲ್ಲಿ ತಾ,ರಾಜವಂತಿ ಗ್ರಾಪಂ ಸದಸ್ಯೆ ಕಣೀವೇನಹಳ್ಳಿ ವಾಸಿ ನೇತ್ರಾವತಿ ಅವರ ಪತಿ ಮುಖಂಡ ನರೇಶ್ ಇತರೆ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಅತ್ಯಂತ ಸಂತಸ ತಂದಿದೆ.ಇನ್ನೂ ಎಲ್ಲರ ಸಹಕಾರ ಹಾಗೂ ಜತೆಗೊಡಿ ರಾಜವಂತಿ ಗ್ರಾಪಂ ಪ್ರಗತಿಗೆ ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಮಾಜಿ ಸಂಸದ ಇಂದು ಬಿಜೆಪಿಗೆ ಸೇರ್ಪಡೆ ...
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿ ನಮ್ಮ ತಂದೆ ಶಾಸಕ ವೆಂಕಟರಮಣಪ್ಪ ಹಾಗೂ ನನ್ನ ಮೇಲಿನ ಭರವಸೆ ಮೇರೆಗೆ ಮುಖಂಡ ನರೇಶ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪೆಡೆಯಾಗಿರುವ ಕುರಿತು ಅತ್ಯಂತ ಸಂತಸವಾಗಿದೆ.ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ಮುಖಂಡ ಎ.ಶಂಕರರೆಡ್ಡಿ ತಾ,ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್‌ಬಾಬು ಕಾಂಗ್ರೆಸ್ ಯುವ ಮುಖಂಡ ಹೊಸಹಳ್ಳಿ ಗೋವಿಂದನಾಯ್‌್ಕ ರಾಜವಂತಿ ಗ್ರಾಪಂ ಕಣಿವೇನಹಳ್ಳಿ ಗ್ರಾಮದ ಮುಖಂಡರಾದ ಶಿವಣ್ಣ ಮಹೇಶ್,ನರಸಪ್ಪ ಸುಬ್ಬರಾಯಪ್ಪ ಲಕ್ಷ್ಮೀನಾರಾಯಣ್,ರಾಮಾಂಜಿನಪ್ಪ ಶ್ರೀನಿವಾಸ್ ರಾಜೇಶ್ ವೆಂಕಟೇಶಪ್ಪ ಹನುಮಂತರಾಯಪ್ಪ ಮಂಜಪ್ಪ ಹಾಗೂ ಇತರೆ ಹಲವಾರು ಮಂದಿ ಇದ್ದರು.