ಮನ್‌ಮುಲ್‌ನಲ್ಲಿ ನಡೆದ ಹಗರಣದ ತನಿಖೆ ವಿಚಾರ ದೇವೇಗೌಡರು ಮತ್ತು ಕುಮಾರಸ್ವಾಮಿ  ತಡೆ ಹಿಡಿದಿದ್ದಾರೆ ಎನ್ನುವ ಮೂಲಕ  ತನಿಖೆಯ  ಹಾದಿ ತಪ್ಪಿಸುವ ಯತ್ನ ಹಗರಣದ ಕುರಿತಂತೆ ಪೊಲೀಸ್ ತನಿಖೆ ನಡೆಯುತ್ತಿದೆ -ಸುರೇಶ್ ಗೌಡ

ಮಂಡ್ಯ (ಜೂ.29): ಮನ್‌ಮುಲ್‌ ಹಗರಣದ ತನಿಖೆಯನ್ನು ದೇವೇಗೌಡರು ಮತ್ತು ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ ಎಂದು ಹೇಳುವ ಮೂಲಕ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಆರೋಪಿಸಿದರು. 

ಹಗರಣದ ಕುರಿತಂತೆ ಪೊಲೀಸ್ ತನಿಖೆ ನಡೆಯುತ್ತಿದೆ. ಸಹಕಾರ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ. ಸರ್ಕಾರ ಸಿಐಡಿಗೆ ಪ್ರಕರಣವನ್ನು ಒಪ್ಪಿಸಿದೆ. ತನಿಖೆಯಾಗಲಿ ಬಿಡಿ. ಮಧ್ಯ ಕುತಂತ್ರ ಏಕೆ ಮಾಡುತ್ತೀರಾ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು. 

'ಗೌಡರ ಮೇಲಿನ ಆರೋಪ ಸಾಬೀತಾದರೆ ಜೆಡಿಎಸ್ ವಿಸರ್ಜನೆ' ...

ಮನ್‌ಮುಲ್‌ ಹಾಲು ಹಗರಣದವನ್ನು ಪತ್ತೆ ಹಚ್ಚಿದವರು ಹಾಲಿಗೆ ನೀರು ಹೇಗೆ ಬೆರೆಯುತ್ತಿದೆ ಎಂದು ಸುಳಿವು ಕೊಟ್ಟು ಪೊಲೀಸರಿಗೆ ದೂರು ಕೊಟ್ಟವರು ಜೆಡಿಎಸ್ ನೇತೃತ್ವದ ಆಡಳಿತ ಮಂಡಳಿ. ಅದನ್ನೇ ಸೂಪರ್‌ಸೀಡ್ ಮಾಡಿ ನಿಮಗೆ ಬೇಕಾದ ಅಧಿಕಾರಿಯನ್ನು ತಂದು ಕೂರಿಸಿಕೊಂಡು ಹಣ ಮಾಡುವುದಕ್ಕೆ ಪ್ಲಾನ್ ಹಾಕಿದ್ದೀರಾ ಎಂದು ಪ್ರಶ್ನಿಸಿದರು. 

ಹಗರಣ ತನಿಖೆಗೆ ಗೌಡರಿಂದ ಅಡ್ಡಿ?: ಆಡಿಯೋ ವೈರಲ್‌ ...

ಜಮೀರ್ ಅಂಡ್ ಟೀಂ ಕಾಂಗ್ರೆಸ್ ಹೆಸರಿನಲ್ಲಿರುವ ನಕಲಿ ಬಿಜೆಪಿಯವರು. ಏಕೆಂದರೆ ಮನ್‌ಮುಲ್‌ ಚುನಾವಣೆ ವೇಳೆ ಜೆಡಿಎಸ್‌ನಿಂದ ಗೆದ್ದ ನಿರ್ದೇಶಕರನ್ನು ಸೆಳೆದುಕೊಂಡು ಬಿಜೆಪಿ ಜೊತೆ ಅಧಿಕಾರ ಹಿಡಿಯಲು ಹೋಗಿದ್ದರು. ಈ ಹಿಂದೆ ಕದಲೂರು ರಾಮಕೃಷ್ಣರನ್ನು ಅಧ್ಯಕ್ಷರನ್ನಾಗಿ ಮಾಡಲು ಎಷ್ಟು ದುಡ್ಡು ತೆಗೆದುಕೊಂಡಿದ್ದರು. ಮೆಗಾ ಡೇರಿ ವಿಚಾರದಲ್ಲಿ ನಡೆದ ಹಗರಣದ ತನಿಖೆ ನಡೆಸಿ ಆದೇಶ ಹೊರಬಿದ್ದಾಗ ಅದಕ್ಕೆ ತಡೆಯಾಜ್ಞೆ ಕೊಡಿಸಿದವರು ಯಾರು ಎಂದು ಪ್ರಶ್ನಿಸಿದರು.