Asianet Suvarna News Asianet Suvarna News

ಮೈಸೂರು : ಹಲವು ಮುಖಂಡರು JDS ಸೇರ್ಪಡೆ

ಜೆಡಿಎಸ್‌ ತತ್ವ ಮತ್ತು ಸಿದ್ಧಾಂತವನ್ನು ಒಪ್ಪಿ ಬರುವ ಇತರ ಪಕ್ಷಗಳ ಮುಖಂಡರು ಮತ್ತು ಸರ್ವ ಜನಾಂಗದವರನ್ನು ನಾವು ಸ್ವಾಗತಿಸಲಿದ್ದು, ಭವಿಷ್ಯದಲಿ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

JDS invites All community People says Sara Mahesh
Author
First Published Oct 4, 2022, 5:40 AM IST

ಕೆ.ಆರ್‌.ನಗರ(ಅ.04): ಜೆಡಿಎಸ್‌ ತತ್ವ ಮತ್ತು ಸಿದ್ಧಾಂತವನ್ನು ಒಪ್ಪಿ ಬರುವ ಇತರ ಪಕ್ಷಗಳ ಮುಖಂಡರು ಮತ್ತು ಸರ್ವ ಜನಾಂಗದವರನ್ನು ನಾವು ಸ್ವಾಗತಿಸಲಿದ್ದು, ಭವಿಷ್ಯದಲಿ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ನಡೆದ ಕುರುಬ ಸಮಾಜದ ಮುಖಂಡರ ಜೆಡಿಎಸ್‌ (JDS)  ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದ ಅವಧಿಯಲ್ಲಿ ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆಯು ನನಗಿಲ್ಲ ಎಂದರು.

ಕಳೆದ 14 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿರುವ ಮತದಾರ ಪ್ರಭುಗಳು ಸತತ ಮೂರು ಬಾರಿ ಆಯ್ಕೆ ಮಾಡುವುದರ ಜತೆಗೆ ಒಮ್ಮೆ ಸಚಿವನಾಗಿ (Minister) ಕೆಲಸ ಮಾಡುವ ಭಾಗ್ಯ ಕರುಣಿಸಿದ್ದು ಮುಂದೆ ಅವರ ಸೇವೆ ಮಾಡುವುದು ನನ್ನ ಗುರಿ ಎಂದರು.

ಇದೇ ವೇಳೆ ಜೆಡಿಎಸ್‌ಗೆ ಸೇರ್ಪಡೆಯಾದ ಕುರುಬ ಸಮಾಜದ ಹಿರಿಯರು ಮತ್ತು ಯುವ ಮುಖಂಡರಾದ ಗೋಪಾಲಿ ಮಹದೇವ, ಗೋವಿಂದ, ಗೌರಮ್ಮ, ಸೂರ್ಯ, ಸಿದ್ದೇಗೌಡ, ಮಹದೇವ, ಬುಯಿಮಹದೇವ, ಕೆಂಪರಾಜು, ಶಿವು, ಮಾದೇಗೌಡ, ಪ್ರಮೀಳ, ಮುರ್ಕೇಗೌಡ, ಪಾಪಯ್ಯ, ಚಂದ್ರೇಗೌಡ, ನಾಗೇಗೌಡ, ಬುಡಯನರಾಜಣ್ಣ, ರವಿ, ಕೃಷ್ಣ, ರಂಗಣ್ಣ, ಹರೀಶ್‌, ಸ್ವಾಮಿ, ರಘುವೀರ್‌, ಬಿ. ಮಂಜುನಾಥ್‌, ರಮೇಶ್‌, ಸಚ್ಚಿ, ರಾಮೇಗೌಡ, ಪಾಪಣ್ಣ, ಆದರ್ಶ, ಮಾರೇಗೌಡ, ಕುಮಾರ, ವೆಂಕಟೇಶ್‌, ಸಿದ್ದೇಗೌಡ, ಸಿ.ಬಿ.ನಾಗರಾಜು, ಆನಂದ್‌, ಬೀರಯ್ಯನ ಮಹದೇವ ಮತ್ತಿತರರನ್ನು ಶಾಸಕರು ಬರಮಾಡಿಕೊಂಡರು.

ಜಿಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್‌, ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷಿ ್ಮೕ, ಕೆ.ಆರ್‌. ನಗರ ಪಟ್ಟಣ ಯುವ ಜೆಡಿಎಸ್‌ ಅಧ್ಯಕ್ಷ ಹರ್ಷಿತ್‌, ಪ್ರಧಾನ ಕಾರ್ಯದರ್ಶಿ ರುದ್ರೇಶ್‌, ಜೆಡಿಎಸ್‌ ಮುಖಂಡರಾದ ಮುದ್ದುಕುಮಾರ್‌, ಎಚ್‌.ಪಿ. ಶಿವಣ್ಣ, ಎಂ.ಕೆ. ಮಹದೇವ್‌, ಕೃಷ್ಣಶೆಟ್ಟಿ, ತಂದ್ರೆ ಟಿ.ಪಿ. ಮಂಜುನಾಥ್‌, ರಾಜೇಶ್‌, ಮಹದೇವ್‌, ಸಿ.ಎನ್‌. ಉಮೇಶ್‌, ಕುಂಟೇಗೌಡ ಇದ್ದರು.

ಜೆಡಿಎಸ್ ಗಟ್ಟಿತನಕ್ಕೆ ಯತ್ನ  : 

ರಾಯಚೂರು(ಸೆ.30): ವೈಯಕ್ತಿಕ ವರ್ಚಸ್ಸು, ಮತದಾರರ ಮನೋಭಾವನೆ ಬದಲಾವಣೆ, ಮೂರರಿಂದ ಮೊದಲನೇ ಸ್ಥಾನದ ಆದ್ಯತೆ ಆಧಾರದಡಿ ಸದಾ ಗೆಲುವಿನ ಬಾವುಟ ಹಾರಿಸುವ ಜೆಡಿಎಸ್‌ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳು ಜಿಲ್ಲೆಯಲ್ಲಿ ಸಾಗಿದ್ದು, ಆ ನಿಟ್ಟಿನಲ್ಲಿ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿ ಹಿರಿಯ ಮುಖಂಡರು ಜಿಲ್ಲೆಯ ಮೇಲೆ ಹೆಚ್ಚಿನ ಆಸಕ್ತಿ ವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಗೊಂಡಿದ್ದಾರೆ.

ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ (ಸಿಂಧನೂರು-ಮಾನ್ವಿ)ಎರಡರಲ್ಲಿ ಗೆಲವು ಕಂಡಿತ್ತು. ರಾಜಕೀಯ ತಪ್ಪು ಲೆಕ್ಕಾಚಾರದಿಂದಾಗಿ ದೇವದುರ್ಗ ಕ್ಷೇತ್ರ ಮತ್ತು ದುರಾದೃಷ್ಠದಿಂದಾಗಿ ಲಿಂಗಸುಗೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸೋತಿದ್ದರು. ಇದೀಗ ಮತ್ತೆ ಅದೇ ರೀತಿಯ ಯಡವಟ್ಟುಗಳಾಗದಂತೆ ಪಕ್ಷದ ವರಿಷ್ಠರು ಮುನ್ನೆಚ್ಚರಿಕೆಯನ್ನು ವಹಿಸಿದ್ದು, ಅದಕ್ಕಾಗಿ ಜಿಲ್ಲೆಯ ಹಾಲಿ ಜೊತೆಗೆ ಕೈತಪ್ಪಿದ ಕ್ಷೇತ್ರಗಳಲ್ಲಿ ತೆನೆಹೊತ್ತ ಮಹಿಳೆಯ ಬಾವುಟವನ್ನು ಎಗರಿಸುವುದಕ್ಕಾಗಿ ಕಂಕಣಕಟ್ಟಿಕೊಂಡು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಈಗಿನಿಂದಲೆಯೇ ಶ್ರಮಿಸುತ್ತಿದ್ದಾರೆ.

ಲಿಂಗಸುಗೂರಲ್ಲಿ ರಾಜಕೀಯ ಕಾರ್ಖಾನೆ ಬಲಾಬಲ ಪ್ರದರ್ಶನ: ಚುನಾವಣೆ ಪೂರ್ವದಲ್ಲೇ ಜಿದ್ದಾಜಿದ್ದಿ..!

ಸುಲಭದ ಕಾರ್ಯವಲ್ಲ:

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌-ಬಿಜೆಪಿಗೆ ಗಟ್ಟಿಯಾದ ಪೈಪೋಟಿಯನ್ನು ಒಡ್ಡು ಕ್ಷೇತ್ರವನ್ನು ದಕ್ಕಿಸಿಕೊಳ್ಳುವುದು ಅಷ್ಟೊಂದು ಸುಲಭದ ಕಾರ್ಯವಲ್ಲ ಆದರೆ ಕ್ಷೇತ್ರದಲ್ಲಿ ಪಕ್ಷದ ನಾಯಕರ ವೈಯಕ್ತಿಕ ವರ್ಚಸ್ಸು, ಮತದಾರರನ್ನು ತಮ್ಮತ್ತ ಎಳೆಯಲು ಅಗತ್ಯವಾದಂತಹ ಹಣ ಬಲ, ತೋಳ್‌ ಬಲ ಹಾಗೂ ಜಾತಿವಾರು ಮತಗಳನ್ನು ಗಿಟ್ಟಿಸಿಕೊಳ್ಳುವ ಸಾಮರ್ಥ್ಯ, ಮತದಾರರ ಆದ್ಯತೆ ಪಟ್ಟಿಯಲ್ಲಿ ಸದಾ ಮೂರನೇ ಸ್ಥಾನದಲ್ಲಿರುವವರು ಮೊದಲ ಸ್ಥಾನಕ್ಕೇರುವುದಕ್ಕಾಗಿ ಬೇಕಾದಂತಹ ರಾಜಕೀಯ ತಂತ್ರಗಾರಿಗಳನ್ನು ಚುನಾವಣೆ ಸಮಯದಲ್ಲಿ ಪ್ರಯೋಗ ಮಾಡುವಂತಹ ಅಭ್ಯರ್ಥಿಗಳು ಅಗತ್ಯವಾಗಿದ್ದಾರೆ. ಅದಕ್ಕೆ ತಕ್ಕಂತೆ ಸಕಾಲದಲ್ಲಿ ಪಕ್ಷವು ಸಹ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್‌ ಮಾಡುವ ರೂಢಿಯಲ್ಲಿ ಸಿದ್ಧಿಸಿಕೊಂಡಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ಭೂರಿಭೋಜನವನ್ನು ಉಣಪಡಿಸುವುದು ದೊಡ್ಡದ್ದೇನ್ನಲ್ಲ. ಇಂತಹ ವಾತಾವರಣವು ಜೆಡಿಎಸ್‌ಗೆ ರಾಯಚೂರು ಜಿಲ್ಲೆಯಲ್ಲಿದ್ದು ಅದರ ಸದ್ಬಳಕೆಯ ಕೆಲಸವನ್ನು ಪಕ್ಷದ ಮುಖಂಡರು ಮಾಡುತ್ತಿದ್ದಾರೆ.

Follow Us:
Download App:
  • android
  • ios