ಮಂಡ್ಯ(ನ.19): ಸ್ಥಳೀಯರು ನನ್ನ ಮೇಲೆ ಚಪ್ಪಲಿ ಎಸೆಯಲ್ಲ. ಮಂಡ್ಯದ ಜನ ನನ್ನ ಮೇಲೆ ಚಪ್ಪಲಿ ಎಸೆಯಲಾರರು. ಇದು ಹೊರಗಿನವರ ಕೆಲಸ. ಜೆಡಿಎಸ್‌ನವರು ಹೊರಗಿನಿಂದ ಜನ ಕರೆಸಿ ನನ್ನ ಮೇಲೆ ಬೇಕೆಂದೇ ಚಪ್ಪಲಿ ಎಸೆದಿದ್ದಾರೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ.

ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ನ.18ರಂದು ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ಮೇಲೆ ಚಪ್ಪಲಿ ಎಸೆದಿರುವ ಬಗ್ಗೆ ಅವರು ಕೆ. ಆರ್. ಪೇಟೆಯಲ್ಲಿ  ಪ್ರತಿಕ್ರಿಯಿಸಿದ್ದಾರೆ.

ಕನ್ನಡದಲ್ಲಿ ಪ್ರಮಾಣ ಪತ್ರ ಓದಲು ತಡವರಿಸಿದ BJP ಅಭ್ಯರ್ಥಿ

ಹೊರಗಿನಿಂದ ಜನರನ್ನ ಕರೆಸಿ ಹೀಗೆ ಮಾಡಲಾಗಿದೆ. ಇದು ಜೆಡಿಎಸ್‌ನವರ ಯೋಜಿತ ಕೃತ್ಯ ಎಂದು ಕೆ. ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ. ಸ್ಥಳೀಯ ಜನರು ಹಾಗೆ ಮಾಡುವವರಲ್ಲ. ಚೆನ್ನರಾಯಪಟ್ಟಣ, ಪಾಂಡವಪುರಗಳಿಂದ ಸಾವಿರಾರು ಜನರನ್ನು ಕರೆಯಿಸಲಾಗಿದೆ. ಜನರ ಬಂದರೆ ಬರಲಿ ಆದ್ರೆ ಇಲ್ಲಿನ ಜನ ಶಾಂತಿಯುತವಾಗಿ ಇರಲು ಬಿಡಿ ಎಂದು ಕೇಳಿಕೊಂಡಿದ್ದಾರೆ.

ಚೆನ್ನಾಗಿ ಕಾಣ್ತೀಯಾ ಎಂದು ಕಿಸ್ ಕೊಡ್ತಾನೆ ಈ ಪ್ರಿನ್ಸಿಪಲ್, ವಿದ್ಯಾರ್ಥಿನಿಯರ ಕಣ್ಣೀರು

ಇದು ಜೆಡಿಎಸ್ ನವರು ಮಾಡಿದ ಯೋಜಿತ ಕೆಲಸ. ನಾನೂ ಸಹ 10 ವರ್ಷ ಇದ್ದೆ. ಆದ್ರೆ ನಾನು ಈ ರೀತಿಯ ಘಟನೆಗೆ ಅವಕಾಶ ನೀಡಿರಲಿಲ್ಲ. ಘಟನೆ ಸಂಬಂಧ ನಾನು ಯಾರ ವಿರುದ್ದವೂ ದೂರು ನೀಡಿಲ್ಲ. ಆದ್ರೆ ಪೊಲೀಸರೇ ಸ್ವಯಂ‌ ಪ್ರೇರಿತರಾಗಿ ಕೆಲವರನ್ನ‌ ಬಂಧಿಸಿದ್ದಾರೆ. ಆಗ ನಾನೇ ಸರ್ಕಲ್‌ ಇನ್ಸ್ ಪೆಕ್ಟರ್ ಅವರಿಗೆ ಕಾಲ್ ಮಾಡಿ ಅವರು ಸಾಮಾನ್ಯರಿದ್ದಾರೆ ಎಂದು ಬಿಡಲು ಮನವಿ ಮಾಡಿದ್ದೆ. ಅದರಂತೆ ಪೊಲೀಸರು ಅವರನ್ನ ಬಿಟ್ಟು ಕಳುಹಿಸಿದ್ದಾರೆ ಎಂದಿದ್ದಾರೆ.

"

ಸಂಸದೆ ಸುಮಲತಾ ಅವರ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಸುಮಕ್ಕರ‌ ಬಳಿ ಮಾತನಾಡಿದ್ದೀನಿ, ಬೆಂಬಲ ಕೋರಿದ್ದೀನಿ. ನೋಡಣ. ಪ್ರಚಾರದಲ್ಲಿ ರಾಜ್ಯ ಮಟ್ಟದ ನಾಯಕರು ಪಾಲ್ಗೊಳುತ್ತಾರೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಿದ್ದಾರೆ .