ತುಮಕೂರು(ನ.19): ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಕಾಮುಕ ಪ್ರಾಂಶುಪಾಲನಿಂದ ಬೇಸತ್ತು ವಿದ್ಯಾರ್ಥಿನಿಯರು ಕಣ್ಣೀರು ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ನೀನು ಚೆನ್ನಾಗಿ ಕಾಣ್ತೀಯ ಎಂದು ಈ ಪ್ರಿನ್ಸಿಪಲ್ ವಿದ್ಯಾರ್ಥಿನಿಯರಿಗೆ ಕಿಸ್ ಮಾಡ್ತಾನೆ. ಪ್ರಾಂಶುಪಾಲನ ಕಾಟದಿಂದ ಬೇಸತ್ತ ವಿದ್ಯಾರ್ಥಿನಿಯರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ.

ನೀನು ಸಿಂಗಲ್ ಬ್ಲಡ್ಡಾ ಅಥವಾ ಕ್ರಾಸ್ ಬ್ಲಡ್ಡಾ ಎಂದು ಪ್ರಶ್ನಿಸುವ ಈ ಶಿಕ್ಷಕ ಬಾಲಕಿಯರಿಗೆ ಕಿರುಕುಳ ನೀಡುತ್ತಾನೆ ಎಂಬ ಆರೋಪ ಕೇಳಿ ಬಂದಿದೆ. ಮಕ್ಕಳ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡುವುದು ಸೇರಿದಂತೆ ವಿದ್ಯಾರ್ಥಿನಿಗೆ ಕಾಟ ಕೊಡುತ್ತಿರುವ ಬಗ್ಗೆ ವಿಷಯ ಬೆಳಕಿಗೆ ಬಂದಿದೆ.

ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!

ನೀನು ಚೆನ್ನಾಗಿ ಕಾಣ್ತಿಯಾ ಎಂದು ಮಕ್ಕಳ ಸ್ಥಾನದಲ್ಲಿ ಕಾಣಬೇಕಾದ ವಿದ್ಯಾರ್ಥಿನಿಯರನ್ನೇ ಈ ಶಿಕ್ಷಕ ಕಿಸ್ ಮಾಡುತ್ತಾನೆ. ನಾನು ನಿನ್ನ ಜೊತೆ ಏಳು ಹೆಜ್ಜೆ ಹಾಕಿದ್ದೆ. ಹಿಂದಿನ ಜನ್ಮದಲ್ಲಿ ಗಂಡ-ಹೆಂಡತಿ ಆಗಿದ್ದೆವು ಎಂಬಂತಹ ಹುಚ್ಚು ಮಾತುಗಳನ್ನು ಹೇಳಿ ಮಕ್ಕಳಿಗೆ ಕಿರುಕುಳ ಮಾಡುತ್ತಾನೆ.

ಪಾವಗಡ ಪಟ್ಟಣದ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಲಜ್ಜೆಗೇಡಿ ವರ್ತನೆಯಿಂದ ಬೇಸತ್ತು ಹೋಗಿದ್ದು, ಪ್ರಾಂಶುಪಾಲರ ಕಿರುಕುಳದಿಂದ ಮುಕ್ತಿ ನೀಡುವಂತೆ ಕಣ್ಣೀರು ಹಾಕಿ ಕೇಳಿದ್ದಾರೆ. ಪ್ರಾಂಶುಪಾಲ ಧನಂಜಯ್ ನಿಂದ‌ ವಿಕೃತ ಕೃತ್ಯ ನಡೆಸುತ್ತಿದ್ದ.

ತುಮಕೂರು: ಹಾಫ್ ಹೆಲ್ಮೆಟ್ ಧರಿಸಿದ್ರೆ ಕಠಿಣ ಕ್ರಮ