ಕನ್ನಡದಲ್ಲಿ ಪ್ರಮಾಣ ಪತ್ರ ಓದಲು ತಡವರಿಸಿದ BJP ಅಭ್ಯರ್ಥಿ
ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಕನ್ನಡದಲ್ಲಿ ಇದ್ದ ಪ್ರಮಾಣ ಹಾಗೂ ಧೃಡೀಕರಣ ಪತ್ರ ಓದುವಾಗ ತಡವರಿಸಿರುವ ಘಟನೆ ಕೆ. ಆರ್. ಪೇಟೆ ತಾಲೂಕು ಕಚೇರಿಯಲ್ಲಿ ನಡೆದಿದೆ.
ಮಂಡ್ಯ(ನ.19): ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಕನ್ನಡದಲ್ಲಿ ಇದ್ದ ಪ್ರಮಾಣ ಹಾಗೂ ಧೃಡೀಕರಣ ಪತ್ರ ಓದುವಾಗ ತಡವರಿಸಿರುವ ಘಟನೆ ಕೆ. ಆರ್. ಪೇಟೆ ತಾಲೂಕು ಕಚೇರಿಯಲ್ಲಿ ನಡೆದಿದೆ.
ಪತ್ನಿ ದೇವಿಕರೊಂದಿಗೆ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಬಂದ ಸಮಯದಲ್ಲಿ ಚುನಾವಣಾಧಿಕಾರಿ ಕೃಷ್ಣಮೂರ್ತಿಯವರು ಕನ್ನಡದಲ್ಲಿದ್ದ ಪ್ರಮಾಣ ಪತ್ರ ಓದುವಂತೆ ನಾರಾಯಣಗೌಡರಿಗೆ ಸಿದ್ಧ ಪಡಿಸಿದ್ದ ಪ್ರತಿಯೊಂದನ್ನು ಕೊಟ್ಟರು.
ಜ್ಯೋತಿಷಿಗಳ ಮಾತಿನಂತೆ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಕೆಸಿಎನ್
ಆಗ ಕನ್ನಡ ಓದಲು ಆರಂಭಿಸಿದ ನಾರಾಯಣಗೌಡರು ಸ್ಪಷ್ಟವಾಗಿ ಓದದೇ ತಡವರಿಸಲು ಆರಂಭಿಸಿದರು. ಈ ವೇಳೆ ದೇವಕಿ ಓದಲು ಸಹಾಯ ಮಾಡಿದ್ದಾರೆ. ನಾರಾಯಣಗೌಡರು ಮೊದಲ ಬಾರಿಗೆ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಕನ್ನಡ ಓದಲು ತಡವರಿಸಿದ್ದನ್ನು ಸ್ಮರಿಸಬಹುದು.
ನಾರಾಯಣಗೌಡರತ್ತ ಚಪ್ಪಲಿ ತೂರಿದ ಜೆಡಿಎಸ್ ಕಾರ‍್ಯಕರ್ತರು