‘ಶಿವಸೇನೆಗೆ ಬೆಂಬಲ ಕಾಂಗ್ರೆಸ್ ದುರಂತ’
ಶಿವಸೇನೆಗೆ ಬೆಂಬಲ ನೀಡಿರುವುದು ತನ್ನ ಜಾತ್ಯತೀತ ನಿಲುವಿನ ಬೂಟಾಟಿಕೆಗೆ ಹೊಡೆದ ಕೊನೆಯ ಮಳೆಯಾಗಿದೆ ಎಂದು ಜಾತ್ಯತೀತ ಜನತಾ ದಳದ ಮುಖಂಡರೋರ್ವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮೂಡಿಗೆರೆ [ಡಿ.01]: ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ನೀಡಿರುವುದು ತನ್ನ ಜಾತ್ಯತೀತ ನಿಲುವಿನ ಬೂಟಾಟಿಕೆಗೆ ಹೊಡೆದ ಕೊನೆಯ ಮಳೆಯಾಗಿದೆ ಎಂದು ಜಾತ್ಯತೀತ ಜನತಾ ದಳದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಕಾರಿಯ ಜಕೀರ್ ಆರೋಪಿಸಿದ್ದಾರೆ.
ಕಾಂಗ್ರೆಸ್‌ನ ಇತ್ತೀಚಿನ ನಡವಳಿಕೆ ಗಮನಿಸಿದರೆ. ಯಾವುದೇ ತತ್ವ, ನೀತಿ- ಸಿದ್ಧಾಂತ, ನೆಲೆಗಟ್ಟು ಎಂಬುವುದೇ ಇಲ್ಲವೆನಿಸುತ್ತಿದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರಕ್ಕಾಗಿ ಮಾತ್ರ ವಿರೋಧಿಸಿಕೊಂಡು ಬಂದಿದ್ದು, ಕಾಂಗ್ರೆಸ್ ಬಿಜೆಪಿಗಿಂತಲೂ ಖಟ್ಟರ್‌ವಾದಿ ಮತ್ತು ಮುಂಬೈನ ಬೀದಿಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅಂದಿನಿಂದ ಇಂದಿನವರೆಗೂ ಅಲ್ಪಸಂಖ್ಯಾತರನ್ನು ಬೆದರಿಸಿ, ಓಡಿಸಿ ಬದುಕಲು ನೆಲೆ ಇಲ್ಲದಂತೆ ಮಾಡಿದ್ದ ಪಕ್ಷಕ್ಕೆ ಕೇವಲ ಅಧಿಕಾರ ದಾಹದಿಂದ ಬೆಂಬಲ ನೀಡಿ, ಒಟ್ಟಾಗಿರುವುದು ದುರಂತ ಎಂದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜನತಾದಳ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ರಾಷ್ಟ್ರನಾಯಕ ದೇವೇಗೌಡಜೀ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು ಅದನ್ನು ತಿರುಚಿ ಕಾಂಗ್ರೆಸ್ಸಿಗರು ಮನಬಂದಂತೆ ವಾಖ್ಯಾನಿಸುತ್ತಿರುವುದು ಖಂಡನಿಯ. ಕಾಂಗ್ರೆಸ್ ತಮ್ಮ ಜಾತ್ಯತೀತ ನಿಲುವಿನ ಸೋಗನ್ನು ಮುಂದುವರಿಸಿ ಅಲ್ಪಸಂಖ್ಯಾತಕರನ್ನು ಮರುಳು ಮಾಡುವ ಗುರಿಯಾಗಿದೆ ಎಂದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 5 ವರ್ಷಗಳ ಅವಧಿಗೆ ಮುಸ್ಲಿಂ ಕಾಲೋನಿ ಅಭಿವೃದ್ಧಿಗೆ ಕೇವಲ 50 ಲಕ್ಷಗಳನ್ನು ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ 1 ವರ್ಷದ ಅವಧಿಯಲ್ಲಿ .800 ಕೋಟಿ ನೀಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ .5ರಿಂದ .10 ಕೋಟಿ ಹಣ ನೀಡಲಾಗಿತ್ತು. ಈ ಮೂಲಕ ಅಲ್ಪಸಂಖ್ಯಾತ ಅಭಿವೃದ್ಧಿಗೆ ಸಾಕಷ್ಟುಶ್ರಮಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಮುಖಗಳಿದ್ದಂತೆ ಎನ್ನುವ ಘೋರ ಸತ್ಯವು ಸಮುದಾಯದ ಅರಿವಿಗೆ ಬರುತ್ತಿದ್ದು, ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಜಕಾರಿಯಾ ಕೋರಿದ್ದಾರೆ.
ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: