Karnataka Politics : 23 ಕಡೆಯಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ
ಪಟ್ಟಣದ 6ನೇ ವಾರ್ಡ್‌ನ ಕಂಠೇನಹಳ್ಳಿಯಲ್ಲಿ ಆರಂಭವಾದ 23 ವಾರ್ಡ್‌ಗಳ ವ್ಯಾಪ್ತಿಯ ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್ ಮುಖಂಡ ಡಿ. ರವಿಶಂಕರ್ ಅವರು ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕೆ.ಆರ್.ನಗರ (ಢಿ.20): ಪಟ್ಟಣದ 6ನೇ ವಾರ್ಡ್‌ನ ಕಂಠೇನಹಳ್ಳಿಯಲ್ಲಿ ಆರಂಭವಾದ 23 ವಾರ್ಡ್‌ಗಳ ವ್ಯಾಪ್ತಿಯ ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್ ಮುಖಂಡ ಡಿ. ರವಿಶಂಕರ್ ಅವರು ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ದುರಾಡಳಿತ ಮತ್ತು ಜನ ವಿರೋಧಿ ನೀತಿಯಿಂದ ಬೇಸತ್ತಿರುವ ಜನರು ಪರ್ಯಾಯವಾಗಿ ಕಾಂಗ್ರೆಸ್‌ಗೆ ಅಧಿಕಾರದ ಚುಕ್ಕಾಣಿ ನೀಡಲು ನಿರ್ಧರಿಸಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಮತದಾರರ ಮನೆಗಳಿಗೆ ಹೋಗಿ ದೇಶ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆ ಹಾಗೂ ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ತಿಳಿಸಿ ಪಕ್ಷದ ಪರವಾಗಿ ಬೆಂಬಲ ಯಾಚಿಸಬೇಕೆಂದು ಅವರು ಸಲಹೆ ನೀಡಿದರು.
Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್.ಪುಟ್ಟರಾಜು
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್ ಮಾತನಾಡಿ, ಕ್ಷೇತ್ರಾದ್ಯಂತ ಕಾಂಗ್ರೆಸ್ ಪರವಾದ ಅಲೆ ಇದ್ದು, ಜನರು ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಅತ್ಯಂತ ಪ್ರಾಮಾಣಿಕವಾಗಿ ದುಡಿದು ರವಿಶಂಕರ್ ಅವರ ಗೆಲುವಿಗೆ ಟೊಂಕ ಕಟ್ಟಿನಿಂತಿದ್ದು, ಇದಕ್ಕೆ ಮತದಾರ ಪ್ರಭುಗಳು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಎಸ್ಟಿವಿಭಾಗದ ಉಪಾಧ್ಯಕ್ಷ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಕೆ.ಜಿ. ಸುಬ್ರಹ್ಮಣ್ಯ, ಪಾರ್ವತಿ ನಾಗರಾಜು, ಪ್ರಕಾಶ್, ಗೀತಾ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಸ್ವಾಮಿ, ಸದಸ್ಯರಾದ ವಸಂತಮ್ಮ, ಜಾವೀದ್‌ಪಾಷಾ, ಸೈಯದ್‌ಸಿದ್ದಿಕ್, ಶಿವುನಾಯಕ್, ನಟರಾಜು, ಅಶ್ವಿನಿ ಪುಟ್ಟರಾಜು, ಮಾಜಿ ಸದಸ್ಯರಾದ ಕೆ.ಎಲ್. ಕುಮಾರ್, ಗುರುಶಂಕರ್, ಕೆ. ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುಕೆಂಚಿ, ಕಾರ್ಯದರ್ಶಿ ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್, ತಾಲೂಕು ಒಕ್ಕಲಿಗರ ಸಂಘದ ಹಿರಿಯ ಉಪಾಧ್ಯಕ್ಷ ಎಚ್.ಪಿ. ಪರಶುರಾಂ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಗ್ರಾಪಂ ಮಾಜಿ ಸದಸ್ಯ ಎಂ.ಎಸ್. ಅನಂತ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್ ಇದ್ದರು.
ಡಿಕೆಶಿ ವಿರುದ್ಧ ವಾಗ್ದಾಳಿ
ರಾಮನಗರ (ಡಿ.19): ನಾನು ರಾಜಕಾರಣದಲ್ಲಿ ಬೇರೆಯವರಂತೆ ಗಣಿಗಾರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಣ ಮಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಪಂಚರತ್ನ ರಥಯಾತ್ರೆಯಲ್ಲಿ ಆಗಮಿಸಿ ಹಾರೋಹಳ್ಳಿ - ಮರಳವಾಡಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವುದಕ್ಕೂ ಮುಂಚೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಕೃಷಿ ಮಾಡಿ ಸಂಪಾದನೆ ಮಾಡಿದಷ್ಟೇ ಆಸ್ತಿ ನನ್ನದು.
ಶಾಪಿಂಗ್ ಮಾಲ್, ಕಟ್ಟಡ ಕಟ್ಟಲು ರಾಜಕಾರಣದಲ್ಲಿ ಹಣ ಮಾಡಿಲ್ಲ ಎಂದರು. ನಾನು ಯಾವ ರೀತಿ ಬದುಕಿದ್ದೇನೆ ಎಂಬುದನ್ನು ನೀವೇ ನೊಂಡಿದ್ದೀರಿ. ಇಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೂ ಅಡ್ಡಿ ಮಾಡುತ್ತಾರೆ. ಆದರೂ ನಿಮ್ಮ ಕಷ್ಟಮತ್ತು ಸಮಸ್ಯೆಗಳಿಗೆ ನಾವಿದ್ದೇವೆ. ನಿಮ್ಮ ಮಡಿಲಿಗೆ ನಿಖಿಲ್ ನನ್ನು ಹಾಕಿದ್ದೇನೆ. ಅವನನ್ನು ಯಾವ ರೀತಿಯಲ್ಲಿ ಬೆಳೆಸುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆಯವರಂತೆ ಅವನನ್ನು ನಿಮ್ಮ ಮನೆ ಮಗನಾಗಿ ಬೆಳೆಸಿ ಎಂದು ಮನವಿ ಮಾಡಿದರು.
ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ಪ್ರದರ್ಶನ
ನನ್ನ ಅಧಿಕಾರ ದುರ್ಬಳಸಿಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರ ಹಲವರ ಮಕ್ಕಳು ಅಧಿಕಾರವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದ್ದೀರಿ. ಆದರೆ ನಿಖಿಲ್ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯಮಂತ್ರಿ ಆಗಿದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗನನ್ನು ಬೆಳೆಸಿದ್ದೇನೆ. ಅವನನ್ನು ಬೆಳೆಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವುದಿಲ್ಲ. ಈಗಾಗಲೇ ಬಿಜೆಪಿಯವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡುವಂತೆ ಕುಮಾರಸ್ವಾಮಿ ಜನರಲ್ಲಿ ಕೋರಿದರು.