Asianet Suvarna News Asianet Suvarna News

ಬಾಬರಿ‌ ಮಸೀದಿ ರೀತಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಒಡೆಯಬೇಕು: ರಿಷಿಕುಮಾರ್ ಸ್ವಾಮೀಜಿ!

*ಬಾಬರಿ‌ ಮಸೀದಿ ರೀತಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಒಡೆಯಬೇಕು
*ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
*ಸ್ವಾಮೀಜಿ ವಶಕ್ಕೆ ಪಡೆದ  ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್

Jamia Mosque in Srirangapatna should be demolished like Babri Masjid Said  Rishikumar Swamiji of Kalim Math mnj
Author
Bengaluru, First Published Jan 18, 2022, 1:40 PM IST

ಮಂಡ್ಯ (ಜ. 18): ಶ್ರೀರಂಗಪಟ್ಟಣದ ಜಾಮೀಯಾ (Srirangapatna) ಮಸೀದಿ ಬಗ್ಗೆ ಕಾಳಿಮಠದ ಋಷಿಕುಮಾರ್ ಸ್ವಾಮೀಜಿ (Rishikumar Swamiji ) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬರಿ‌ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಒಡೆಯಬೇಕು ಎಂದು  ರಿಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಸಾಮಾಜಿ‌ಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ವೀಡಿಯೋ ಮಾಡಿ ಸ್ವಾಮೀಜಿ ಹರಿಬಿಟ್ಟಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಅಗಿತ್ತು. ಈ ಬೆನ್ನಲ್ಲೇ ಕಾಳಿಮಠದ ಸ್ವಾಮೀಜಿ ಅವರನ್ನು ಶ್ರೀರಂಗಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಋಷಿಕುಮಾರ್ ಸ್ವಾಮೀಜಿ ಆರೋಗ್ಯ ತಪಾಸಣೆ ನಂತರ  ಪೋಲಿಸರು ಶ್ರೀರಂಗಪಟ್ಟಣ  ಠಾಣೆಗೆ ಸ್ವಾಮೀಜಿ ಅವರನ್ನು ಕರೆತಂದಿದ್ದಾರೆ. "ನನ್ನ ಹೇಳಿಕೆ ಈಗಲೂ ಬದ್ದನಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ. ಶ್ರೀರಂಗಪಟ್ಟಣದ ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ. ಮಸೀದಿ ಒಡೆದು ದೇವಾಲಯ ಕಟ್ಟುತ್ತೇವೆ ಎಂದು ಮಾಧ್ಯಮಗಳ ಮುಂದೆ‌  ಋಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ರಿಷಿಕುಮಾರ್ ಸ್ವಾಮೀಜಿ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಸ್ಮಾರ್ಟ್‌ ಸಿಟಿ ಮಾಡ್ತೀರಾ ಇದು ನಿಮ್ಮ ಸಿಟಿ ಪಡೆದ ಬಲಿ: Rishi Kumar Swamiji

ಕೆಲ ತಿಂಗಳ ಹಿಂದೆ‌ ಮಸೀದಿ ಒಡೆಯಲು ಹುನ್ನಾರೆ ಇದೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.  "ಜಾಮೀಯಾ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ. ಇದು ದೇವಸ್ಥಾನದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ‌ ಮಾಡಿಕೊಂಡಿದ್ದಾರೆ. ಹಿಂದೂಗಳು ಜಾಗರೂಕರಾಗಿ. ಆದಷ್ಟು ಬೇಗ ಒಡೆಯಬೇಕಾದ ಮಸೀದಿ ಇದು" ಎಂದು ರಿಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ

ಮುಸ್ಲಿಂ ಮುಖಂಡರು ಆರೋಪ: ಅಯೋಧ್ಯೆಯಲ್ಲಿ (Ayodhya) ಬಾಬರಿ ಮಸೀದಿ (Babri masjid) ಕೆಡವಿದ ರೀತಿಯಲ್ಲೇ ಡಿ.16ರಂದು ಹನುಮ ಜಯಂತಿ ಆಚರಣೆ ವೇಳೆ ಶ್ರೀರಂಗಪಟ್ಟಣದ (Srirangapattana) ಮಸೀದೆ-ಎ-ಅಲಾ ಕೆಡವಲು ಕೆಲವು ಸಂಘಟನೆಗಳು ಸಂಚು ರೂಪಿಸಿವೆ ಎಂದು ಮಂಡ್ಯ ಮುಸ್ಲಿಂ ಮುಖಂಡರು ಆರೋಪಿಸಿದ್ದರು. ಸಾಮಾಜಿಕ ಜಾಲತಾಣದ (Social Media)  ಮೂಲಕ ಈ ಬಗ್ಗೆ ಪ್ರಚಾರ ಮಾಡಲಾಗಿದ್ದು ಅಂದು ಶಾಂತಿ ಕದಡುವ ಹಾಗೂ ಹಿಂದೂ-ಮುಸ್ಲಿಂ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದಲೇ ಸಂಕೀರ್ತನಾ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Sarvasya Natyam ಚಿತ್ರದ ಆಡಿಯೋ ಬಿಡುಗಡೆ;ಕಾಳಿ ಮಠದ Rishi Kumar Swamiji ನಟನೆ!

ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುಸ್ಲಿಂ ಮುಖಂಡರಾದ(Muslim Leaders) ಮುನಾವರ್‌ ಖಾನ್‌, ರಿಜ್ವಾನ್‌ ಸೈಯದ್‌, ಮಹಮದ್‌ ಬಾಷಾ, ಅಮ್ಜದ್‌ ಖಾನ್‌, ನದೀಮ್‌ ಅಹಮದ್‌, ಮುಜಾಹಿಲ್‌ ಖಲೀಮ್‌ ಮಸೀದಿ ಇರುವ ಜಾಗದಲ್ಲಿ ಹಿಂದೆ ಹನುಮ ಮಂದಿರವಿತ್ತು(Hanuma temple). ಮತ್ತೆ ಅದೇ ಜಾಗದಲ್ಲಿ ಹನುಮ ಮಂದಿರವನ್ನು ಪುನರ್‌ ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಪ್ರಚಾರ ಮಾಡಿದ್ದಾರೆ ಆತಂಕ ವ್ಯಕ್ತಪಡಿಸಿದರು. ತಕ್ಷಣವೇ ಮಸೀದಿಗೆ ಬಿಗಿ ಪೊಲೀಸ್‌ (Police) ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು..

Follow Us:
Download App:
  • android
  • ios