ಜಲ ಜೀವನ್‌ ಯೋಜನೆ ಕಳಪೆ ಕಾಮಗಾರಿ ಸಹಿಸಲ್ಲ ಸಾಮರ್ಥ್ಯ ಸೌಧದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಂಜಿನಿಯರ್‌ಗೆ ಶಾಸಕ ಟಿ.ಡಿ.ರಾಜೇಗೌಡ ಖಡಕ್‌ ಎಚ್ಚರಿಕೆ

ನರಸಿಂಹರಾಜಪುರ ಆ.13: ಜಲಜೀವನ್‌ ಯೋಜನೆ ಕೋಟ್ಯಂತರ ರು. ವೆಚ್ಚದ ಕುಡಿಯುವ ನೀರಿನ ಯೋಜನೆಯಾಗಿದೆ. ಇದರಲ್ಲಿ ಕಳಪೆ ಕಾಮಗಾರಿ ಮಾಡಿದರೆ ಸಂಬಂಧಪಟ್ಟಎಂಜಿನಿಯರ್‌ ಮನೆಗೆ ಹೋಗಲು ರೆಡಿ ಆಗಿರಬೇಕು ಎಂದ ಶಾಸಕ ಟಿ.ಡಿ.ರಾಜೇಗೌಡ ಖಡಕ್‌ ಎಚ್ಚರಿಕೆ ನೀಡಿದರು. ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನೆ ನಡೆ​ಸಿ ಅವರು ಮಾತ​ನಾ​ಡಿ​ದರು. ಜಲ ಜೀವನ್‌ ಯೋಜನೆಯಡಿ ನರಸಿಂಹರಾಜಪುರ ತಾಲೂಕಿಗೆ .13 ಕೋಟಿ ಮಂಜೂರಾಗಿದೆ. ಈಗಾಗಲೇ .3.50 ಕೋಟಿ ಖರ್ಚು ಮಾಡಲಾಗಿದೆ. ಒಂದೇ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕಾಮಗಾರಿ ಮಾಡುವಾಗ ನೀರಿನ ಮೂಲ ಪತ್ತೆ ಮಾಡುತ್ತಿಲ್ಲ. ಪೈಪ್‌ ಹಾಕಬೇಕಾದರೆ ಕನಿಷ್ಠ 1 ಮೀಟರ್‌ ಕಾಲುವೆ ಮಾಡಿ ನಂತರ ಪೈಪ್‌ ಹಾಕಬೇಕಾಗಿದೆ. ಆದರೆ, ಶೇ.90ರಷ್ಟುಕಾಮಗಾರಿಯಲ್ಲಿ 1 ಮೀಟರ್‌ ಕಾಲುವೆ ಮಾಡಿಲ್ಲ. ಕಾಮಗಾರಿ ಆದ ನಂತರ ನಾನು ಕೆಡಿಪಿ ಸದಸ್ಯರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ಕಳಪೆ ಆಗಿದ್ದರೆ ಸಂಬಂಧಪಟ್ಟಎಂಜಿನಿಯರ್‌ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇನೆ. $ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇನೆ ಎಂದರು.

ಜಲವಿವಾದಗಳಿಗೆ ಕಾಯ್ದೆ ತಿದ್ದುಪಡಿ ಪರಿಹಾರ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಕ್ರಿಮಿನಲ್‌ ಕೇಸು ಹಾಕಬೇಕು: ಕೆರೆ ಕಾಮಗಾರಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂದು ದೂರುಬಂದಿದೆ. ನನ್ನ ಗಮನಕ್ಕೆ ಬಾರದೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ತಾಲೂಕಿನ 179 ಕೆರೆಗಳ ಸರ್ವೆ ಕಾರ್ಯ ನಡೆಸಿ ಇದರಲ್ಲಿ ಒತ್ತುವರಿಯಾದ ಕೆರೆಗಳನ್ನು ತೆರವುಗೊಳಿಸುವುದು, ಕೆರೆಯ ಸುತ್ತ ಟ್ರಂಚ್‌ ಹೊಡೆಯುವುದು ಹಾಗೂ ಆ ಕೆರೆಗಳನ್ನು ಅಭಿವೃದ್ಧಿಪಡಿಸಲು ಒಟ್ಟು .16.40 ಲಕ್ಷ ಬಿಡುಗಡೆ ಮಾಡಲಾಗಿತ್ತು. ಮಾಚ್‌ರ್‍ ಕೊನೆಯಲ್ಲಿ ಗುತ್ತಿಗೆದಾರರ ಖಾತೆಗೆ .5 ಲಕ್ಷ ಹಾಕಲಾಗಿದೆ. ಸಾರ್ವಜನಿಕರ ದೂರಿನ ಮೇಲೆ ಸಂಬಂಧಪಟ್ಟಎಂಜಿನಿಯರ್‌ ಅವರನ್ನು ಅಮಾನತು ಮಾಡಲಾಗಿದೆ. ಈ ವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಬೇಕು ಎಂದು ಕೆಡಿಪಿ ಸಭೆ ನಿರ್ಣಯ ಮಾಡೋಣ ಎಂದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತು.

ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ನೀಲೇಶ್‌, ಕೆಡಿಪಿ ಸದಸ್ಯ ಎಸ್‌.ಗೋಪಾಲ್‌ ಮಾತನಾಡಿ, ಶಂಕರಪುರ ಸೇತುವೆ ಸಮೀಪದಲ್ಲಿ ದೊಡ್ಡ ಗುಂಡಿಯಾಗಿದೆ. ಕಳೆದ ವರ್ಷ ಸೇತುವೆ ನಿರ್ಮಾಣವಾಗಿತ್ತು. ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು. ಮಡಬೂರು -ಮುತ್ತಿನಕೊಪ್ಪ ಮಧ್ಯೆ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಂದಿನ 7 ದಿನದ ಒಳಗೆ ಒಂದು ದಿನ ಗೊತ್ತು ಮಾಡಿ ಶಂಕರಪುರ ಸೇತುವೆ ವೀಕ್ಷಣೆ ಮಾಡೋಣ. ಮಳೆ ಕಡಿಮೆಯಾದ ಮೇಲೆ ಗುಂಡಿ ಮುಚ್ಚುವುದು ಸೂಕ್ತ. ಅತಿ ಅಗತ್ಯವಿರುವ ಕಡೆ ತಕ್ಷಣ ಗುಂಡಿ ಮುಚ್ಚಿ ಎಂದು ಸಂಬಂಧಪಟ್ಟಎಂಜಿನಿಯರ್‌ ಅವರಿಗೆ ಸೂಚಿಸಿದರು.

Jal Jeevan Mission: ಮೊದಲ ಮೂರು ಗ್ರಾಮಗಳಿಗೆ ನೀರು

ಸಭೆಯಲ್ಲಿ ತಾಲೂಕು ಪಂಚಾಯಿತಿ ಇ.ಓ. ನಯನ, ತಹಸೀಲ್ದಾರ್‌ ವಿಶ್ವನಾಥ್‌, ಪ್ರೊಬೆಷನರಿ ಡಿಎಫ್‌ಓ ಲೇಖರಾಜ್‌ ಮೀನ ಇದ್ದರು. ಕೆಡಿಪಿ ಸಭೆಯಲ್ಲಿ ಕೆಡಿಪಿ ನಾಮನಿರ್ದೇಶನ ಸದಸ್ಯರಾದ ರಶ್ಮಿ ದಯಾನಂದ್‌, ಶೈಲಾ, ಎಸ್‌.ಗೋಪಾಲ್‌, ಕೆಸುವೆ ಮಂಜುನಾಥ್‌, ಮೋಹನ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಂದೀಪ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಗುಳದಮನೆ ಪ್ರಕಾಶ, ಪಿಸಿಎಆರ್‌ಡಿ ಬ್ಯಾಂಕ್‌ ಅಧ್ಯಕ್ಷ ಸಂದೇಶ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.