ಜಲವಿವಾದಗಳಿಗೆ ಕಾಯ್ದೆ ತಿದ್ದುಪಡಿ ಪರಿಹಾರ ಎಂದ ಸಿಎಂ ಬಸವರಾಜ ಬೊಮ್ಮಾಯಿ

- ಕಾಯ್ದೆ ತಿದ್ದುಪಡಿ ವೇಳೆ ಸಂಕುಚಿತ ರಾಜಕೀಯ ಬಿಡಬೇಕು

- ಜಲಜೀವನ ಮಿಷನ್‌, ಸ್ವಚ್ಛ ಭಾರತ ಮಿಷನ್‌ ದಕ್ಷಿಣ ಭಾರತ ಪ್ರಾದೇಶಿಕ ಸಮ್ಮೇಳನ

-ದಕ್ಷಿಣ ಭಾರತ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗಿ

solution for water dispute is amendment in act says karnataka cm basavaraj bommai san

ಬೆಂಗಳೂರು (ಮಾ.6): ಅಂತಾರಾಜ್ಯ ಜಲವಿವಾದ ಕಾಯ್ದೆಯನ್ನು (Inter State Water dispute Act) ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ. ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಂಕುಚಿತ ರಾಜಕೀಯ ಲಾಭದ ಬಗ್ಗೆ ಯೋಚಿಸುವ ಬದಲು ಹೆಚ್ಚು ಜನರಿಗೆ ನೀರು ಲಭ್ಯವಾಗುವಂತೆ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (karnataka cm basavaraj bommai) ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ನಡೆದ ‘ಜಲ ಜೀವನ್‌ ಮಿಷನ್‌’ (Jal Jeevan Mission) ಹಾಗೂ ‘ಸ್ವಚ್ಛ ಭಾರತ್‌ ಮಿಷನ್‌’ (Swach Bharath Mission) ಯೋಜನೆಗಳ ಕುರಿತ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನದಿ ಪಾತ್ರಗಳ ನಿರ್ವಹಣೆ ಹಾಗೂ ಜಲವಿವಾದ ಕಾಯ್ದೆ ತಿದ್ದುಪಡಿಯಿಂದ ಮಾತ್ರ ಜಲ ವಿವಾದಗಳನ್ನು ಬಗೆಹರಿಸಲು ಸಾಧ್ಯ. ಜನರಿಗೆ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ನೀರಿನ ವಿಚಾರದಲ್ಲಿ ಎಲ್ಲರೂ ಒಮ್ಮತದಿಂದ ಕಾರ್ಯ ನಿರ್ವಹಿಸಬೇಕು. ನೀರು ಸರಬರಾಜಿನ ಮೂಲಕ ಸುಸ್ಥಿರ ಜೀವನೋಪಾಯ ಕಲ್ಪಿಸಲು ಸಾಧ್ಯ ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಗುರಿ. ಪ್ರಧಾನಿಯವರ ಗುರಿ ಈಡೇರಿಸುವ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ನೀರಿನ ದುರ್ಬಳಕೆ ತಡೆಗೆ ಕ್ರಮ: ನೀರಾವರಿಯಲ್ಲಿ ದಕ್ಷತೆ ತರಲು ಪ್ರಯತ್ನಿಸಬೇಕು. ಸಾಕಷ್ಟುನೀರು ಹರಿಯುವ ಮಾರ್ಗಗಳಲ್ಲಿ ನೀರಿನ ದುರುಪಯೋಗ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿರುವ ನಮ್ಮ ಕಾಲುವೆಗಳಲ್ಲಿನ ನೀರಿನ ಹರಿವು ಸಾಮರ್ಥ್ಯ ಹಾಗೂ ನೀರು ಹರಿಸುತ್ತಿರುವ ಸಾಮರ್ಥ್ಯದಲ್ಲಿ ಅಜಗಜಾಂತರ ಅಂತರವಿದೆ. ಇವುಗಳನ್ನು ಸರಿಪಡಿಸಿದರೆ ಹೆಚ್ಚಿನ ನೀರು ಲಭ್ಯವಾಗಲಿದೆ ಎಂದು ಸಲಹೆ ನೀಡಿದರು.

ಜಲಜೀವನ್‌ ಮಿಷನ್‌ಗೆ ಕಾಲಮಿತಿ: ಕರ್ನಾಟಕದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯನ್ನು ಅನುಷ್ಠಾನ ಮಾಡಲು ಅವಿರತವಾಗಿ ಶ್ರಮಿಸಲಾಗುವುದು. ರಾಜ್ಯದಲ್ಲಿ 97.91 ಲಕ್ಷ ಗ್ರಾಮೀಣ ಮನೆಗಳಿವೆ. ಮೊದಲ ಹಂತದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ಅಳವಡಿಸಲು ಯೋಜಿಸಲಾಗಿದ್ದು, 18 ಲಕ್ಷ ಮನೆಗಳಿಗೆ ಅಳವಡಿಕೆಯಾಗಿದೆ. ಕೆಲವೇ ದಿನಗಳಲ್ಲಿ ಮೊದಲ ಹಂತದ ಗುರಿ ತಲುಪುತ್ತೇವೆ. ಬಾಕಿ ಮನೆಗಳಿಗೆ ನೀರೊದಗಿಸಲು ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು. ಈ ಮೂಲಕ ಕಾಲಮಿತಿಯಲ್ಲಿ ಗುರಿ ತಲುಪಲಾಗುವುದು ಎಂದು ಹೇಳಿದರು.

ಪರಿಸರದ ಸವಾಲು ಎದುರಿಸಬೇಕಿದೆ: ಜಲಾನಯನ ಯೋಜನೆಗಳ ನಿರ್ಮಾಣದ ವೇಳೆ ಪರಿಸರದ ಬಗ್ಗೆ ಗಮನ ನೀಡಬೇಕು. ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಡೆಯಲು ಅಣೆಕಟ್ಟು ಕಟ್ಟುವುದಾಗಿ ಹೇಳುತ್ತೇವೆ. ಈ ಹಂತದಲ್ಲಿ ನಾವು ವಿಜ್ಞಾನವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ.30ರಷ್ಟುಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ.60ರಷ್ಟುಉಪ್ಪು ನೀರು ಆವಿಯಾಗಲು ಸಾಧ್ಯವಾಗಿ ಮಳೆಯಾಗುತ್ತದೆ. ಈ ಸರಳ ಸತ್ಯದ ಅರಿವು ಯೋಜನೆ ರೂಪಿಸುವ ಎಲ್ಲರಿಗೂ ಇರಬೇಕು. ಪರಿಸರದ ಸವಾಲುಗಳನ್ನು ನಾವು ಎದುರಿಸಬೇಕು. ಸದಾ ಹರಿಯುವ ನದಿಗಳು ಈಗ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಹುತೇಕ ನದಿಗಳು ಸಮುದ್ರ ಸೇರುವ ಮುನ್ನ ಒಣಗುತ್ತಿವೆ. ಇವುಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಕಾಳಿನದಿ ನೀರು ಹಂಚಿಕೆ ವಿಚಾರವಾಗಿ ಸಿಎಂ ಜೊತೆ ಚರ್ಚೆ
ಕಾರವಾರ (ಮಾ.6):
ಉತ್ತರ ಕರ್ನಾಟಕದ (Uttara Karnataka) ಜಿಲ್ಲೆಗಳಿಗೆ ಕಾಳಿನದಿಯ (Kali River)ನೀರನ್ನು ಕೊಂಡೊಯ್ಯುವ ಯೋಜನೆಗೆ ಉತ್ತರಕನ್ನಡ (Uttara Kannada) ಜಿಲ್ಲೆಯ ಹಲವರಿಂದ ಅಸಮಾಧಾನವಿದ್ದು, ಈ ಬಗ್ಗೆ ಎಲ್ಲರೂ ಒಟ್ಟಾಗಿ ಕೂತು ಮಾತನಾಡಿ, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ (Ropali Naik) ಹೇಳಿದ್ದಾರೆ.

Uttara Kannada ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕಾಳಿ ನೀರು ಪೂರೈಸುವ ಯೋಜನೆಗೆ ಆಕ್ಷೇಪ
ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಉತ್ತರಕನ್ನಡದ ಜೀವನದಿಯೆಂದೇ ಕರೆಯಲ್ಪಡುವ ಕಾಳಿ ನದಿ ನೀರನ್ನು ಕೊಂಡೊಯ್ಯುವ ಯೋಜನೆಯನ್ನು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವುದು ಜಿಲ್ಲೆಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಕಾಳಿ ನದಿ ನೀರನ್ನು ಐದು ಜಿಲ್ಲೆಗಳಿಗೆ ಕೊಂಡೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಅಸಮಾಧಾನದ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

Haveri ಬೇಡ್ತಿ-ವರದಾ ಜೋಡಣೆಗೆ ಅನುದಾನ ನೀಡಿ
ಕಳೆದ ಸಚಿವ ಸಂಪುಟದಲ್ಲಿ ಜಲಜೀವನ್‌ ಮಿಶನ್‌, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಕಾರವಾರ- ಅಂಕೋಲಾ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ನೀರು ನೀಡಲು . 119 ಕೋಟಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. ಇನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ಕಾಳಿ ನದಿಯ ಕದ್ರಾ ಅಣೆಕಟ್ಟಿನ ಮೇಲ್ಭಾಗದಿಂದ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ನೀಡಲು ಯೋಜನೆ ರೂಪಿಸಲಾಗಿದೆ. ಉಪ್ಪು ನೀರಿನ ಸಮಸ್ಯೆ ಬಗೆಹರಿಸಲು . 1500 ಕೋಟಿ ಘೋಷಣೆ ಮಾಡಲಾಗಿದೆ. ಈ ಹಿಂದೆ ವಿಧಾನಸಭಾವಾರು ತಲಾ . 300 ಕೋಟಿ ಘೋಷಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಹೆಚ್ಚಿನ ಅನುದಾನ ಘೋಷಿಸಲಾಗಿದ್ದು, ಇದರಿಂದಾಗಿ ಬಾವಿಗಳಿಗೆ ಉಪ್ಪು ನೀರು ನುಗ್ಗಿ ಸಮಸ್ಯೆ ಅನುಭವಿಸುತ್ತಿದ್ದವರಿಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios