ಹೊಸಕೋಟೆ [ನ.29]:  ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರನ್ನು ಮತ ಕೇಳುವ ನೈತಿಕತೆ ಎಂಟಿಬಿ ನಾಗರಾಜು ಅವರಿಗೆ ಇಲ್ಲ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಐವಾನ್‌ ಡಿಸೋಜಾ ಹೇಳಿದರು.

ಅವರು ಹೊಸಕೋಟೆ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮತನಾಡಿ, ಕಾಂಗ್ರೆಸ್‌ ಕಾರ್ಯಕರ್ತರು ಅಭ್ಯರ್ಥಿ ಪದ್ಮಾವತಿ ಸುರೇಶ್‌ ಜೊತೆಗಿದ್ದಾರೆ. ನಮಗೆ ಸ್ವತಂತ್ರ ಅಭ್ಯರ್ಥಿ ಎದುರಾಳಿ, ಎಂಟಿಬಿ ನಾಗರಾಜು ಅಲ್ಲ. ಅವರು ಮೂರನೇ ಸ್ಥಾನಕ್ಕೆ ಹೋಗಲಿದ್ದಾರೆ. ಹಣ ಕೊಟ್ಟು ಮತ ಪಡೆಯುವೆ ಮತ್ತು ಉಂಗುರ ಕೊಟ್ಟಿವೋಟು ಪಡೆಯುವೆ ಎಂದು ಹೇಳಿದ್ದಾರೆ.

ಹೊಸಕೋಟೆ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಹಿಂದೆ ಸಿದ್ದರಾಮಯ್ಯ ಕೊಟ್ಟಅನುದಾನದಿಂದ ಅವರು ತಾಲೂಕು ಅಭಿವೃದ್ಧಿ ಮಾಡಿದ್ದು. ಎಂಟಿಬಿ ಅನ್ನೊ ಹೆಸರನ್ನು ಕಾಂಗ್ರೆಸ್‌ ಪಕ್ಷ ಕೊಟ್ಟಿದೆ. ಎದೆ ಬಗೆದರೆ ಸಿದ್ದರಾಮಣ್ಣ ಅನ್ನುತ್ತಿದ್ದ ಎಂಟಿಬಿ ಈಗ ಯಡಿಯೂರಪ್ಪನನ್ನು ಇಟ್ಟುಕೊಂಡಿದ್ದಾರೆ. ಈಗೆ ಮಾಡುತ್ತಾ ಹೋದರೆ ನಿಮ್ಮ ಪ್ರಾಣಕ್ಕೆ ಹಾನಿ ಆಗಬಹುದು. ಯಾಕೆಂದರೆ ಎಷ್ಟುಸಾರಿ ಎದೆ ಬಗೆಯುತ್ತೀರಿ ಎಂದು ಕೆಣಕಿದರು.

ಹೊಸಕೋಟೆ ತಾಲೂಕಿನ ಜನರು ಯಾವತ್ತು ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವುದಿಲ್ಲ. ನಿಮ್ಮನ್ನು ನ್ಯಾಯಾಲಯ ಅನರ್ಹ ಎಂದು ಹೇಳಿ, ಜನರ ಮುಂದೆ ಹೋಗಲು ತಿಳಿಸಿದೆ. ಈಗ ಮತದಾರರಾದ ನೀವುಗಳು ಅನರ್ಹ ಮಾಡಿ ಮನೆಗೆ ಕಳುಹಿಸಬೇಕು. ಯಡಿಯೂರಪ್ಪ ಯಾವತ್ತು ಮುಂದಿನ ಬಾಗಿಲಿಂದ ಅ​ಧಿಕಾರ ಮಾಡಿಲ್ಲ. ಹಿಂದಿನ ಬಾಗಿಲು ಮೂಲಕ ಅಧಿಕಾರ ಮಾಡಿರೋದು ಎಂದರು.

‘ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿಗೆ ಸೋಲು ಖಚಿತ’...

ಎಂಟಿಬಿ ನಾಗರಾಜು ಅವರನ್ನು ಗೆಲ್ಲಿಸಬೇಡಿ. ಉಪ ಚುನಾವಣೆ ನಡಿಯೋದು ಯಾವಾಗ ಎಂದರೆ ಚುನಾಯಿತ ಪ್ರತಿನಿ​ಧಿ ಸತ್ತರೆ ಅಥವಾ ರಾಜಕೀಯವೇ ಬೇಡ ಅಂತ ರಾಜೀನಾಮೆ ನೀಡಿದಾಗ ಮಾತ್ರ. ಆದರೆ, ಸಮ್ಮಿಶ್ರ ಸರ್ಕಾರವನ್ನು ಬಿಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಗೆ ಹೋಗಿರುವುದು ರಾಜ್ಯದ ಜನತೆಗೆ ತಿಳಿದಿದೆ. 15 ಅನರ್ಹ ಶಾಸಕರನ್ನು ಸೋಲಿಸಿ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಮಹಿಳೆಯರ ಬಗ್ಗೆ ನಾಗರಾಜ್‌ ಹಗುರವಾಗಿ ಮಾತನಾಡಿದ್ದಾರೆ. ಹಣ ಮತ್ತು ಉಂಗುರ ಹಂಚುತ್ತಿರುವುದರ ವಿರುದ್ಧ ಚುನಾವಣೆ ಆಯೋಗಕ್ಕೆ ಪಕ್ಷದ ವತಿಯಿಂದ ದೂರನ್ನು ನೀಡಲಾಗಿದೆ ಎಂದು ಡಿಸೋಜಾ ಹೇಳಿದರು.

‘ಡಿ. 9ರ ನಂತರ ಎಂಟಿಬಿ ನಾಗರಾಜು ಗಂಟು ಮೂಟೆ ಕಟ್ಟಬೇಕು’...

ಅಕ್ರಮವಾಗಿ ರಿಯಲ್‌ ಎಸ್ಟೇಟ್‌ನಲ್ಲಿ ಹಣ ಮಾಡಿ ರೈತರ ಜಮೀನು ಕಬಳಿಸಿ ಶ್ರೀಮಂತರಾಗಿ ಜನರ ಹಣದಿಂದ ಜನರಿಗೆ ಮೋಸ ಮಾಡಿರುವ ಎಂಟಿಬಿ ನಾಗರಾಜ್‌ನನ್ನು ಈ ಬಾರಿಯ ಉಪಚುನಾವಣೆಯಲ್ಲಿ ಸೋಲಿಸಬೇಕು. ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಯಡಿಯೂರಪ್ಪ 2008ರಲ್ಲೂ ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಈಗ 2019 ರಲ್ಲಿಯೂ ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದು ಅಪವಿತ್ರ ರಾಜಕಿಯ ಮಾಡುತ್ತಿದ್ದಾರೆ ಎಂದರು.