Asianet Suvarna News Asianet Suvarna News

‘ಡಿ. 9ರ ನಂತರ ಎಂಟಿಬಿ ನಾಗರಾಜು ಗಂಟು ಮೂಟೆ ಕಟ್ಟಬೇಕು’

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲ ದಿನದಲ್ಲಿ ಚುನಾವಣೆ ನಡೆಯಲಿದ್ದು, ಎಂಟಿಬಿ ಗಂಟುಮೋಟೆ ಕಟ್ಟಬೇಕೆಂದು ಭವಿಷ್ಯ ನುಡಿಯಲಾಗಿದೆ. 

Byrathi Suresh Slams Hoskote BJP Candidate MTB Nagaraj
Author
Bengaluru, First Published Nov 28, 2019, 10:55 AM IST

ಸೂಲಿಬೆಲೆ [ನ.28]:  ಹೊಸಕೋಟೆ ತಾಲೂಕಿನಾದ್ಯಂತ ಪ್ರತಿ ಗ್ರಾಮಗಳಲ್ಲಿಯೂ ಸಹ ಕಾಂಗ್ರೆಸ್  ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು ಯುವಕರು, ಪುರುಷರು ಹಾಗು ಮಹಿಳೆಯರು ಸೇರಿದಂತೆ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅಭೂತ ಪೂರ್ವ ಬೆಂಬಲ ಸೂಚಿಸಿದ್ದಾರೆ ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ತಿಳಿಸಿದರು.

ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಹಲಸಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಯುವಕರನ್ನು ಉದ್ದೇಶಿಸಿ ಮಾತನಾಡಿದ ಬೈರತಿ ಸುರೇಶ್‌, ಕೆಲವು ಕಾಂಗ್ರೆಸ್‌ ಮುಖಂಡರು ಹಾಗೂ ಯುವಕರು ಕಾರಣಾಂತರಗಳಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಮನಸ್ಸು ಒಪ್ಪದ ಕಾರಣ ಬಿಜೆಪಿ ದುರಾಡಳಿವನ್ನು ಅರಿತು ಮತ್ತೆ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಮ್ಮ ಕಾಂಗ್ರೆಸ್‌ ಪಕ್ಷ ಬಡವರ ಹಿಂದುಳಿದ ಅಲ್ಪಸಂಖ್ಯಾತರ ಪಕ್ಷ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂದಿನ ಕೆಲವೇ ದಿನಗಳಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ಮಹಿಳೆ ಏನು ಎಂದು ಮತದಾರರು ತೀರ್ಮಾನ ಮಾಡಲಿದ್ದಾರೆ. ತಾಲೂಕಿನ ಜನ ಹಣಕ್ಕಾಗಿ ಯಾರೂ ಮಾರಾಟ ಆಗುವುದಿಲ್ಲ. ಇಲ್ಲಿನ ಜನ ಸ್ವಾವಲಂಬಿಗಳಿದ್ದಾರೆ. ಕೂಲಿ ನಾಲಿ ಮಾಡಿ, ಬಂಡೆ ಒಡೆದು, ತರಕಾರಿ ಮಾರಿಯಾದರೂ, ಜೀವನ ಮಾಡುತ್ತಾರೆ. ಆದರೆ ಮತವನ್ನು ಮಾರಿಕೊಳ್ಳುವುದಿಲ್ಲ. ಎಂಟಿಬಿ ನಾಗರಾಜು ಅವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಡಿಸೆಂಬರ್‌ 9ರ ನಂತರ ಎಂಟಿಬಿ ಗಂಟು ಮೂಟೆ ಕಟ್ಟಿಕೊಂಡು ಮನೆ ಸೇರಬೇಕಾಗುತ್ತದೆ ಎಂದರು.

ಈ ಸಂರ್ಭದಲ್ಲಿ ಜಿಲ್ಲಾ ಕಾಂಗ್ರೇಸ್‌ ಅದ್ಯಕ್ಷ ಮುನಿಶಾಮಣ್ಣ. ಮಾಜಿ ಬಿಬಿಎಂಪಿ ಸದಸ್ಯ ಪಿಳ್ಳಣ್ಣ, ತಾ.ರಾ.ವೆಂಕಟೇಶ್‌. ಓಬಿಸಿ ರಾಜ್ಯ ಕಾರ್ಯದರ್ಶಿ ಶ್ರೀದರ್‌, ಓಬಿಸಿ ರಾಜ್ಯ ಉಪಾಧ್ಯಕ್ಷ ಕೋಲಾರ ಎಸ್‌, ಮಂಜುನಾಥ್‌ ಮತ್ತಿತರರು ಮುಖಂಡರು ಹಾಜರಿದ್ದರು.

ಡಿಸೆಂಬರ್ 5 ರಂದು ರಾಜ್ಯದ 15ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ

Follow Us:
Download App:
  • android
  • ios