ಬ್ರಾಹ್ಮಣ ಪ್ರಹ್ಲಾದ್ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆ ಆಗಿದೆಯಂತೆ, ಉಳಿದಂತೆ 8 ಮಂದಿ ಉಪಮುಖ್ಯಮಂತ್ರಿ ಆಗಲಿದ್ದಾರೆ.
ಬೆಂಗಳೂರು (ಫೆ.05): ದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್ ಪ್ರಮುಖರ ಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆ ಆಗಿದೆಯಂತೆ, ಉಳಿದಂತೆ 8 ಮಂದಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಪಾಳಯದಲ್ಲಿ ಪ್ರಳಯ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿ ಆಗುತ್ತಾರೆಂಬ ಪ್ರಸ್ತಾಪ ಆಗಿದ್ಯಂತೆ. ಪ್ರಹ್ಲಾದ್ ಜೋಷಿ ಸಿಎಂ ಆದರೆ, 8 ಜನ ಇತರೆ ಸಮುದಾಯದ ಮುಖ್ಯಸ್ಥರು ಉಪಮುಖ್ಯಮಂತ್ರಿ ಆಗುತ್ತಾರೆ. ಆದರೆ ಇವರು ಮರಾಠ ಬ್ರಾಹ್ಮಣರು. ಉಪಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದನ್ನು ಆದಷ್ಟು ಬೇಗ ತೆಗೆದಿಡ್ತೀನಿ. ಹೀಗಾಗಿ ಜೆಡಿಎಸ್ ವಿರುದ್ದ ಪಂಚರತ್ನ ರಥಯಾತ್ರೆ ಬಗ್ಗೆ ಪ್ರಹ್ಲಾದ್ ಜೋಷಿ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪಕ್ಷ ಸೇರುವಾಗಿನ ಉತ್ಸಾಹ ಸಂಘಟನೆಯಲ್ಲೂ ಇರಲಿ: ನಿಖಿಲ್ ಕುಮಾರಸ್ವಾಮಿ ಸಲಹೆ
ಪ್ರಹ್ಲಾದ್ ಜೋಶಿ ನವಗ್ರಹ ಯಾತ್ರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಮಾಡುವಂತೆ ಟೀಕೆ ಮಾಡುತ್ತಿದ್ದಾರೆ. ಆದರೆ, ಪಂಚರತ್ನ ಯೋಜನೆ ಜನಸ್ಪಂದನೆ ನೋಡಿ ಅವರು ಹೆದರಿದ್ದಾರೆ. ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣ ಅಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ವರ್ಗ ಇವರದ್ದು. ಮಹಾತ್ಮ ಗಾಂಧಿ ಕೊಂದ ಬ್ರಾಹ್ಮಣರು ಇವರು. ನಮ್ಮ ಹಳೆಯ ಬ್ರಾಹ್ಮಣರಲ್ಲ. ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನೋರು. ಆದ್ರೆ ಇವರು ದೇಶ ಹೊಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು.
RSS ಕುತಂತ್ರಕ್ಕೆ ಬಲಿಯಾಗಬೇಡಿ:
ಬಿಜೆಪಿಯ ಹುನ್ನಾರ RSS ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದ್ರೂ ಕೊಡ್ತೀನಿ. ಇನ್ನು ಬೆಂಗಳೂರಿನ ದಾಸರಹಳ್ಳಿಯ ನಮ್ಮ ಶಾಸಕ ಮಂಜುನಾಥ್ ಇದ್ದಾರೆ. ಅವರ ಕಾರ್ಯಕ್ರಮ ಮಾಡಲು ಬಿಡದೆ ತೊಂದರೆ ಕೊಡ್ತಿದ್ದಾರೆ. ಟೆಂಡರ್ ಪ್ರೋಸೆಸ್ ಮಾಡಲು ಬಿದೆ ಕಿರುಕುಳ ನೀಡಿದ್ದಾರೆ. ಸದಾನಂದ ಗೌಡರು ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದಾರೆ. ಜನಮನ್ನಣೆ ನೀಡದೆ ಕಿರುಕುಳ ನೀಡ್ತಿದ್ದಾರೆ. ಕ್ಷುಲ್ಲಕ ಕಾರಣದಿಂದ ಬೆಂಗಳೂರು ನಗರ ಸೇರದಂತೆ ಎಲ್ಲೆಡೆ ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳಲಿದೆ ಎಂದರು.
ಕಾಂಗ್ರೆಸ್ ಕಾಲು ಮುರಿದ ಕುದುರೆ ಕೊಟ್ಟು ನನಗೆ ಅಧಿಕಾರ ನಡೆಸಲು ಬಿಟ್ಟರು; ಎಚ್‌ಡಿಕೆ
ಬೆಂಗಳೂರಲ್ಲಿ ದೊಡ್ಡ ಸಮಾರೋಪ ಕಾರ್ಯಕ್ರಮ: ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಂಪೂರ್ಣ ಸಂಜೆವರೆಗೂ ಕಾರ್ಯಕ್ರಮ ಇದೆ. ನಂತರ ಮಾರ್ಚ್ 1ರಿಂದ 8-10 ಕ್ಷೇತ್ರದಲ್ಲಿ ಬೆಂಗಳೂರು ಗೆಲ್ಲಬೇಕಿದೆ. ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ. ಈ ತಿಂಗಳ 27 ರ ವರೆಗೂ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಶಿವರಾತ್ರಿ ಒಂದು ದಿನ ಮಾತ್ರ ಬಿಡುವು ನೀಡುತ್ತೇವೆ. ಮಾರ್ಚ್ ನಲ್ಲಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ. ಬೆಂಗಳೂರಿನ ಲ್ಲಿ 8ರಿಂದ 10 ಕ್ಷೇತ್ರ ಗೆಲ್ಲಬೇಕಿದೆ. ಮಾರ್ಚ್ 20-25ಕ್ಕೆ ಸಮಾರೋಪ ಸಮಾರಂಭ ಇದೆ ಎಂದರು.