ಕಲಬುರಗಿ: ನೈಟ್‌ ಲ್ಯಾಂಡಿಂಗ್‌ ಅನುಮತಿ: ಆಗುವುದೇ ಉದ್ಯಮ ಪ್ರಗತಿ..!

ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ಗೆ ಅನುಮತಿ- ಗರಿಗೆದರಿದ ಕಲಬುರಗಿ ಜನರ ನಿರೀಕ್ಷೆಗಳು, ಕಲಬುರಗಿಯಿಂದ ಇನ್ನೂ ಹೆಚ್ಚಿನ ಸೇವೆಗಳ ನಿರೀಕ್ಷೆ, ಕಲಬುರಗಿ- ಮಂಗಳೂರು ವಿಮಾನ ಸವಲತ್ತು ಕಲ್ಪಿಸಲು ದಕ್ಷಿಣ ಕನ್ನಡ ಸಂಘ ಆಗ್ರಹ

Is Progress of the Industry After Given Permission to Night Landing in Kalaburagi Airport grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಮೇ.20): ಕಲಬುರಗಿ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದಿಂದ ಬಹುನಿರೀಕ್ಷಿತ ರಾತ್ರಿ ಲ್ಯಾಂಡಿಂಗ್‌ ಅನುಮತಿ ಪಡೆದುಕೊಂಡಿರುವುದು ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನಲ್ಲಿನ ಜನಮನದಲ್ಲಿ ಹೊಸ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಸದ್ಯಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಮಾತ್ರ ವಿಮಾನ ಹಾರಾಟ ನಡೆಸುತ್ತಿದೆ. ಇನ್ನು ರಾತ್ರಿ ಇಳಿಯುವಿಕೆಯ ಅನುಮತಿಯೊಂದಿಗೆ ಸೂರ್ಯಾಸ್ತದ ನಂತರವೂ ವೈಮಾನಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ನೈಟ್‌ ಲ್ಯಾಂಡಿಂಗ್‌ ಸವಲತ್ತು ಬರುವ ದಿನಗಳಲ್ಲಿ ಕಲಬುರಗಿಯತ್ತ ಇನ್ನೂ ಹೆಚ್ಚಿನ ವೈಮಾನಿಕ ಸೇವೆಗಳನ್ನು ನೀಡುವವರಿಗೆ ಸೆಳೆಯುವ ನಿರೀಕ್ಷೆ ಇದೆ.

ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲಬುರಗಿಯನ್ನು ಕೇಂದ್ರವಾಗಿಟ್ಟುಕೊಂಡು ದೇಶದ ವಿವಿಧ ಕಡೆ ಸೇವೆ ಆರಂಭಿಸುವ ನಿಟ್ಟಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದೇ ಪರಿಗಣಿತವಾಗುತ್ತಿದೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ಅನುಮತಿ

ಕಳೆದ 2 ವರ್ಷಗಳ ಹಿಂದೆಯೇ ಆರಂಭವಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಈಗಾಗಲೇ ಸ್ಟಾರ್‌ ಏರ್‌ಲೈನ್ಸ್‌, ಅಲಯನ್ಸ್‌ ಏರ್‌ ಸಂಸ್ಥೆಯವರು ನಿತ್ಯ ಬೆಂಗಳೂರು, ವಾರದ ಪಾಳಿಯಲ್ಲಿ ತಿರುಪತಿಗೆ ವೈಮಾನಿಕ ಸೇವೆ ನೀಡುತ್ತಿದ್ದಾರೆ. ಪ್ರಯಾಣಿಕರ ಸರಾಸರಿ ಸಂಖ್ಯೆಯಲ್ಲಿಯೂ ಕಲಬುರಗಿ ವಿಮಾನ ನಿಲ್ದಾಣ ಗಮನ ಸೆಳೆದಿರೋದರಿಂದ ಇಲ್ಲೀಗ ರಾತ್ರಿ ವಿಮಾನ ಇಳಿಯುವ ಸವಲತ್ತು ದೊರಕಿರೋದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಲಾಗುತ್ತಿದೆ.

ನೀಗಿತು ಪ್ರಮುಖ ಕೊರತೆ- ಇನ್ನಾದರೂ ಬರುವರೆ?:

ವಿಮಾನ ನಿಲ್ದಾಣ ಬಂತು, ಇನ್ನೇನು ಐಟಿ ಕಂಪನಿಗಳು ಸೇರಿದಂತೆ ಉದ್ದಿಮೆ ವಹಿವಾಟಿನವರು ಕಲಬುರಗಿ ಸೇರಿದಂತೆ ಕಲ್ಯಾಣದತ್ತ ಹೆಜ್ಜೆ ಹಾಕುತ್ತಾರೆಂದೇ ಭಾವಿಸಲಾಗಿತ್ತು. ಆದರೆ ವರ್ಷಗಳು ಉರುಳಿದರೂ ನಿರೀಕ್ಷಯಂತೆ ಯಾರೂ ಉದ್ದಿಮೆಯವರು ಇತ್ತ ಇಣುಕಿ ನೋಡದ ಅಂಶ ವಿಮಾನ ಸವಲತ್ತು ಬಂದರೂ ಉದ್ಯಮ ರಂಗ ಪ್ರಗತಿ ಕಾಣುತ್ತಿಲ್ಲವಲ್ಲ ಎಂಬ ಕೊರಗಿಗೆ ಕಾರಣವಾಗಿತ್ತು.

ವಿಮಾನ ನಿಲ್ದಾಣ ಬಂತು, ಆದರೂ ನೈಟ್‌ ಲ್ಯಾಂಡಿಂಗ್‌ ಇಲ್ಲವಲ್ಲ ಎಂಬ ಹೊಸ ಕೊರಗು ಎತ್ತಿ ಹಿಡಿದು ಮಾತುಕತೆ ಶುರುವಾಗಿ ಇದನ್ನೊಂದು ಬಹುದೊಡ್ಡ ಕೊರತೆ ಎದೇ ಬಿಂಬಿಸಲಾಗಿತ್ತು. ಆದರೀಗ ಡಿಜಿಸಿಎ ನೈಟ್‌ ಲ್ಯಾಂಡಿಂಗ್‌ಗೆ ಅನುಮತಿಸುವ ಮೂಲಕ ಈ ಕೊರಗನ್ನೂ ನೀಗಿಸಿದೆ. ಬರುವ ದಿನಗಳಲ್ಲಿ ಉದ್ದಿಮೆದಾರರು, ಐಟಿ ಕಂಪನಿಯವರು ಕಲಬುರಗಿ ಸೇರಿದಂತೆ ಕಲ್ಯಾಣಕ್ಕೆ ಹೆಜ್ಜೆ ಹಾಕುವರೆ? ಎಂದು ಕಾದು ನೋಡಬೇಕಿದೆ.

ಗರಿ ಗೆದರಿದ ಜನರ ನಿರೀಕ್ಷೆಗಳು:

ಕಲಬುರಗಿ ವಿಮಾನದಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಪೂರ್ಣಗೊಂಡಿದ್ದಕ್ಕೆ ಕಲಬುರಗಿ ಜನರ ನಿರೀಕ್ಷೆಗಳು ಗರಿಗೆದರಿವೆ. ಜನಸಾಮಾನ್ಯರಂತೂ ಇನ್ನೇನು ರಾತ್ರಿ ವಿಮಾನ ಸೇವೆಗೂ ಕಲಬುರಗಿ ತೆರೆದುಕೊಂಡಿತಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸೇವೆ ದೊರಕುವುದರ ಜೊತೆಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸೇವೆಗಳು ಇಲ್ಲಿಂದ ಶುರುವಾಗಲಿ, ಕಾರ್ಗೋ ವೈಮಾನಿಕ ಸೇವೆಗಳು ಲಭ್ಯವಾಗಲಿ, ಈ ಸೌಲಭ್ಯವು ಕಲಬುರಗಿ ವಿಮಾನ ನಿಲ್ದಾಣದಿಂದ ದೇಶದ ಇತರ ಭಾಗಗಳಿಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಹೆಚ್ಚಿನ ವಿಮಾನಯಾನ ಸಂಸ್ಥೆಗಳನ್ನು ಸೆಳೆಯುವಂತಾಗಲಿ ಎಂದು ಆಗ್ರಹಿಸುತ್ತಿದ್ದಾರೆ.

ನಾವು ಈಗ ಇಂಡಿಗೋ ಏರ್‌ಲೈನ್ಸ್‌ಗೆ ಅಂತಾರಾಷ್ಟ್ರೀಯ ಸಂಪರ್ಕಗಳೊಂದಿಗೆ ಹೊಸ ಮಾರ್ಗಗಳನ್ನು ಪ್ರಾರಂಭಿಸಲು ವಿನಂತಿಸುತ್ತೇವೆ. ಇದರಿಂದಾಗಿ ಇದು ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ನಿಲುಗಡೆಯೊಂದಿಗೆ ಕಲಬುರಗಿಯಿಂದ ದೇಶ, ವಿದೇಶದ ಸ್ಥಳಗಳಿಗೆ ಪ್ರಯಾಣಿಸುವ ಸೌಲಭ್ಯವನ್ನು ಹೆಚ್ಚಿಸುತ್ತದೆ ಅಂತ ಅಮರನಾಥ ಪಾಟೀಲ್‌/ ಆನಂದ ದಂಡೋತಿ, ಅಧ್ಯಕ್ಷರು/ ಸಂಚಾಲಕರು ತಿಳಿಸಿದ್ದಾರೆ. 

ಕಲಬುರಗಿ: ಡಿಸಿಸಿ ಬ್ಯಾಂಕ್‌ಗೆ ರಾಜಕುಮಾರ್ ಪಾಟೀಲ್ ತೇಲ್ಕೂರ ರಾಜೀನಾಮೆ

ಇದು ಹೂಡಿಕೆದಾರರಿಗೆ 24 ಗಂಟೆಯೂ ಕಲ್ಬುರ್ಗಿಗೆ ಭೇಟಿ ನೀಡಲು ಸಹಾಯ ಮಾಡುತ್ತದೆ. ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸಲು ಕಾರ್ಗೋ ಸೇವೆಗಳನ್ನು ಪ್ರಾರಂಭಿಸಲು ನಾವು ಎಎಐ ಅಧಿಕಾರಿಗಳನ್ನು ವಿನಂತಿಸುತ್ತೇವೆ. ಇದು ನಮ್ಮ ಪ್ರದೇಶದ ಜನರಿಗೆ ದೊಡ್ಡ ಉದ್ಯೋಗ ಅವಕಾಶಗಳಿಗೆ ಕಾರಣವಾಗುತ್ತದೆ ಅಂತ ಕಲಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಮಹಾದೇವಪ್ಪ ಗೌಡ ಪಾಟೀಲ್‌ ನರಿಬೋಳ್‌ ಹೇಳಿದ್ದಾರೆ.

ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲ್ಬುರ್ಗಿಯಿಂದ ದೇಶದ ವಿವಿಧ ಕಡೆ ಸೇವೆ ಆರಂಭಿಸುವ ನಿಟ್ಟಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. 2 ವರ್ಷಗಳ ಹಿಂದೆಯೆ ಪೂರ್ಣಗೊಳ್ಳಬೇಕಾಗಿದ್ದ ಈ ಸೌಲಭ್ಯವು ಕೋವಿಡ್‌ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ಇದರ ಬಗ್ಗೆ ಕೇಂದ್ರದ ಸಚಿವರ ಗಮನಕ್ಕೆ ಹಲವಾರು ಬಾರಿ ಲೋಕಸಭೆಯಲ್ಲಿ ಪ್ರಶ್ನೆ ಕೇಳುವ ಮೂಲಕ, ಲಿಖಿತವಾಗಿ ಪತ್ರ ಬರೆಯುವ ಮೂಲಕ ತಂದಿದ್ದೆ. ಅದರ ಪ್ರತಿಫಲವಾಗಿ ಇಂದು ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಕೇಂದ್ರ ಸಚಿವರು ಭೇಟಿ ನೀಡಿ ವಿಮಾನಯಾನ ಸಂಸ್ಥೆಗಳಿಗೆ ಕಲಬುರಗಿಯಿಂದ ಸೇವೆಯನ್ನು ಪ್ರಾರಂಭಿಸಲು ಕೋರುತ್ತೇನೆ ಅಂತ ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios