ಧಾರವಾಡ(ಮಾ.20): ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರು ಸಹ ಕೊರೋನಾ ವೈರಸ್‌ನ ಭಯ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಕೊರೋನಾ ವೈರಸ್‌ ಇರುವ ಕುರಿತು ನಿಗಾ ಇಟ್ಟಿರುವ 158 ಜನರ ಪೈಕಿ ಗುರುವಾರ ಮೂವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ಮಂಗಳೂರು: ಕಟೀಲಿಗೆ ಭೇಟಿ ನೀಡಿದ ಕೊರೋನಾ ಶಂಕಿತ

ಈ ಮೂವರು ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಈವರೆಗೆ ಐದು ಶಂಕಿತರ ಮಾದರಿಯನ್ನು ಸಂಗ್ರಹಿಸಿ ಕಳುಹಿಸಲಾಗಿದ್ದು ಇಬ್ಬರ ವರದಿ ನೆಗೆಟಿವ್‌ ಬಂದಿದ್ದು ಉಳಿದ ಮೂವರ ವರದಿಗೆ ಕಾಯಲಾಗುತ್ತಿದೆ. 

‘ಪಿಯು ವಿದ್ಯಾರ್ಥಿಗಳೇ ಪರೀಕ್ಷಾ ಕೊಠಡಿಗೆ ಪ್ರತ್ಯೇಕವಾಗಿ ಬನ್ನಿ’

ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದವರು ಸೋಮವಾರ 73, ಮಂಗಳವಾರ 95 ಹಾಗೂ ಬುಧವಾರ 123ಕ್ಕೆ ಏರಿಕೆಯಾಗಿತ್ತು. ಇದೀಗ ಈ ಸಂಖ್ಯೆ 158ಕ್ಕೆ ಏರಿದ್ದು, ಇವರೆಲ್ಲರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು ಇರಿಸಿದೆ. 158 ಜನರ ಪೈಕಿ 122 ಜನರು ಮನೆಯಲ್ಲಿಯೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಈ ಪೈಕಿ ಮೂವರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿದ್ದಾರೆ. 27 ಜನರು 14 ದಿನಗಳ ಪ್ರತ್ಯೇಕ ವಾಸವನ್ನು ಪೂರ್ಣಗೊಳಿಸಿದ್ದರೆ, 6 ಜನರು 28 ದಿನಗಳ ಪ್ರತ್ಯೇಕ ವಾಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

"