ಶಿವಮೊಗ್ಗ: ಚೆಲುವೆಯ ಅಂದದ ಮುಖದರ್ಶನ ನೀಡಿ 'ಮಾಯಾಂಗನೆ' ಕೀಟ ಕಣ್ಮರೆ?
Shivamogga Insect News: ಚೆಲುವೆಯ ಅಂದದ ಮುಖವನ್ನು ತನ್ನ ಬೆನ್ನ ಮೇಲೆ ಹೊತ್ತು ತಂದಿತ್ತು, ಕೀಟವನ್ನು ನೋಡಿದ ಸಾರ್ವಜನಿಕರಿಗೆ ಆಶ್ಚರ್ಯವೋ ಆಶ್ಚರ್ಯ! ಸಾರ್ವಜನಿಕರಿಗೆ ಚೆಲುವೆಯ ಅಂದದ ಮುಖದ ದರ್ಶನ ನೀಡಿದ ಕೀಟ ಈಗ ನಿಗೂಢವಾಗಿ ಕಣ್ಮರೆ?! ಕಾಯುತ್ತಿದ್ದಾರೆ ಮತ್ತೊಮ್ಮೆ ಅಂದದ ಮುಖದ ಚೆಲುವೆಯ ದರ್ಶನದ ಭಾಗ್ಯಕ್ಕೆ?!
ವರದಿ: ರಾಜೇಶ್ ಕಾಮತ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ
ಶಿವಮೊಗ್ಗ (ನ. 10): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗರ ಕೊಡುಗೆ ಗ್ರಾಮ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಗ್ರಾಮದ ಎಂ ಸಿ ಸುಬ್ರಮಣ್ಯ ಎಂಬುವರ ಮನೆಯಲ್ಲಿ ಚೆಲುವೆಯ ಅಂದದ ಮುಖವನ್ನು ಹೊತ್ತು ಕೀಟ ಒಂದು ಪ್ರತ್ಯಕ್ಷವಾಗಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿ ಕೆಲಕಾಲ ಅಲ್ಲಿಯ ಸಂಚರಿಸಿ ನಂತರ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯವರು ಅದರದೊಂದು ಫೋಟೋವನ್ನು ತೆಗೆದಿಟ್ಟುಕೊಂಡು ನಡೆದ ಘಟನೆಯ ಸಾಕ್ಷಿಯನ್ನಾಗಿಸಿದ್ದಾರೆ. ಹೌದು! ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಅಂದದ ಮುಖವನ್ನು ಹೊತ್ತು ತಂದಿತ್ತು. ಇಂತಹದೊಂದು ವಿಸ್ಮಯದ ಘಟನೆಗೆ ನಾಗರಕೊಡಿಗೆ ಸಾಕ್ಷಿಯಾಗಿದೆ.
ಬಣ್ಣ ಬಣ್ಣದ ವಿನ್ಯಾಸವುಳ್ಳ ಸುಂದರ ನಟ ನಟಿಯರ ಮುಖಚಿತ್ರ ಇರುವ ಧಿರಿಸು ಧರಿಸುವ ಫ್ಯಾಶನ್ ಪ್ರಿಯರಂತೆ ಹುಳು ಹಪ್ಪಟೆಗಳು ಇದೀಗ ಶುರು ಮಾಡಿದಂತಿದೆ. ಇಲ್ಲೊಂದು ಎಲೆ ಹುಳು ಅಥವಾ ಎಲೆಕೀಟ ಎಂದು ಕರಿಯುವ ಕೀಟವೊಂದು ತನ್ನ ಮೈಯನ್ನು ಚೆಲುವೆಯ ಅಂದದ ಮುಖವನ್ನಾಗಿ ಮಾರ್ಪಡಿಸಿಕೊಂಡಿತ್ತು. ಮೇಲ್ಮೈಯಲ್ಲಿ ಚೆಲುವೆಯ ಮುಖಚಿತ್ರವನ್ನು ಮೈಗೂಡಿಸಿಕೊಂಡು ಗಮನ ಸೆಳೆದಿತ್ತು. ಹುಳುವಿನ ಮೇಲೆ ಸುಂದರ ಯುವತಿಯ ಚಿತ್ರ ಒಡಮೂಡಿದ್ದು ಕಂಡು ಮನೆಯವರಿಗೆ ಅಚ್ಚರಿಯೋ ಅಚ್ಚರಿ.
ದೀಪಾವಳಿ ಸಮಯದಲ್ಲಿ ಹೊಸನಗರ ತಾಲ್ಲೂಕಿನ ನಾಗರಕೊಡಿಗೆ ಗ್ರಾಮದ ಎಂ.ಸಿ. ಸುಬ್ರಹ್ಮಣ್ಯ ರವರ ಮನೆಯ ಒಳಭಾಗಕ್ಕೆ ಕೀಟವೊಂದು ಹಾರಿ ಬಂದಿದೆ. ಒಳಗೆ ಸಂಪೂರ್ಣ ಹಾರಿ ಬರಲಾಗದೆ ಮನೆಯ ಟೈಲ್ಸ್ ಮೇಲೆ ತೆವಳ್ಳುತ್ತಾ ಸಾಗಿದೆ. ಆಗ ಮನೆಯೊಡತಿ ಅನ್ನಪೂರ್ಣ ಕೀಟವನ್ನು ಕಾಲಿನಲ್ಲಿ ಹೊರದೂಡಲು ಮುಂದಾದಾಗ ಅಚ್ಚರಿಯೊಂದು ಕಂಡು ಬೆರಗಾಗಿದ್ದಾರೆ.
ಕೀಟಗಳ ಮೊಟ್ಟೆ ತಿನ್ತಾರೆ ಮೆಕ್ಸಿಕೋದ ಜನ, ಇದು ದೇವರ ಆಹಾರವಂತೆ !
ಹುಡುಗಿ ಚಿತ್ರ ಇರುವ ಹುಳು ಬರುತ್ತಿದೆಯೆಲ್ಲಾ, ಅರರೇ ಇದೇನಿದು..ಮನೆ ಬಾಗಿಲಿಗೆ ಬಂದ ಹುಳುವಿನ ಮೈ ಮೇಲೆ ಸುಂದರ ಯುವತಿಯ ರೂಪ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕಾಗದ ಚೂರು ಅಂಟಿರಬಹುದೇನೋ ಎಂದು ಹತ್ತಿರದಿಂದ ಪರೀಕ್ಷಿಸಿದರೂ ಏನು ತಿಳಿಯದೆ ತಲೆಕೆಡಿಸಿಕೊಂಡು ನಂತರ ಮನೆಯಲ್ಲಿದ್ದ ಪಾತ್ರೆಯಿಂದ ಹುಳುವಿನ ಮೇಲೆ ಮಗ್ಗಿಸಿ ಇಟ್ಟು ಬಂದಿಸಿದ್ದಾರೆ. ಮನೆಗೆ ಬಂದವರಿಗೆಲ್ಲ ಈ ಹುಳುವಿನ ಸೌಂದರ್ಯವನ್ನು ತೋರಿಸಿ ಖುಷಿ ಪಟ್ಟಿದ್ದಾರೆ ಮಾರನೇ ದಿನ ಹುಳು ಮನುಷ್ಯ ಇಟ್ಟ ಡಬ್ಬಿಯಿಂದ ಕಣ್ಮರೆಯಾಗಿದೆ.
ಎಲೆ ಕೀಟಗಳು, ಹುಳುಗಳು ಎಲೆ ಆಕಾರ ಹೊಂದಿರುತ್ತವೆ. ಮಾವು, ಹಲಸು, ಕೌಲು ಮರದಲ್ಲಿ ಅದರ ಎಲೆಯಂತೆ ಕೀಟಗಳು ಕಾಣಿಸಿಕೊಂಡು ರಕ್ಷಣೆಯನ್ನು ಪಡೆದಿದೆ. ಗಿಡದಲ್ಲಿ ಹಸಿರೆಲೆ ಆಕಾರ ಹೊಂದಿರುವ ಎಲೆ ಕೀಟವು ತನ್ನ ಮೇಲ್ಮೈಯಲ್ಲಿ ಸುಂದರ ಯುವತಿಯ ಮುಖಚಿತ್ರದ ಚಿತ್ತಾರವನ್ನು ಮೂಡಿಸಿಕೊಂಡಿದ್ದು ಹೇಗೆ ಎಂದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಏನೇ ಇರಲಿ ಪ್ರಕೃತಿಯ ವೈಚಿತ್ರ್ಯಕ್ಕೆ ಪ್ರಕೃತಿಯೇ ಸಾಟಿ.