ಚಿತ್ರದುರ್ಗ(ಅ. 10)  ಈ ಪ್ರಪಂಚಲ್ಲಿ ಪ್ರತಿಯೊಂದು ಜೀವವೂ ಶ್ರೇಷ್ಠ.. ಅದಕ್ಕೆ ಅದರದ್ದೇ ಆದ ಮಹತ್ವ ಇದ್ದೇ ಇರುತ್ತದೆ. ಪಶು-ಪ್ರಾಣಿಗಳ ಜತೆ ಮಾನವನ ಒಡನಾಟವೂ ಹೊಸದೇನಲ್ಲ. ಉತ್ತರ ಕರ್ನಾಟಕ ನೆರೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಹಸು, ಎಮ್ಮೆ, ಮೊಸಳೆ, ಹೆಬ್ಬಾವು ಎಲ್ಲರದ್ದೂ ಒಂದು ಕತೆ.. ಈಗ ನಾವು ಹೇಳಹೊರಟಿವುದು ಒಂದು ಮೂಕ ಪ್ರಾಣಿಯ ಕತೆಯನ್ನೇ.

ಸಕಲ ಜೀವತ್ಮಾರಿಗೆ ಲೇಸಾಗಲಿ... ಚಿತ್ರದುರ್ಗದಿಂದ ಹೊಳಲ್ಕೆರೆ ಮಾರ್ಗವಾಗಿ ಸಂಚರಿಸುವ ರಸ್ತೆ ಮಧ್ಯೆ ಸಣ್ಣ ಅಪಘಾತದಿಂದ ಗಾಯಗೊಂಡ ನರಿ ತೊಂದರೆ ಪಡುತ್ತಾ ಬಿದ್ದಿತ್ತು. ಇದನ್ನು ಕಂಡ ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೀರು ಕುಡಿಸಿ ಆರೈಕೆ ಮಾಡಿ ಮಾನವೀಯತೆ ಮೇರೆದರು.

ಮಡಿಕೇರಿಯಲ್ಲೊಂದು ಮನ ಕಲಕುವ ಸ್ಟೋರಿ.. ಸತ್ತ ಹಸುವಿಗೆ ಮಿಡಿದ ಮೂಕ ಮನ

ಈ ಸಂದರ್ಭದಲ್ಲಿ ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , ಶಿವಮೊಗ್ಗದ ಬಸವ ಮರಳುಸಿದ್ಧ ಸ್ವಾಮೀಜಿ, ರಾಯಚೂರಿನ ಬಸವಪ್ರಸಾದ ಶರಣರು, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿಯವರು ಸಹ ಇದ್ದರು.

ಪ್ರಾಣಿಗಳಮೇಲೆ ಮಾನವನಿಗೆ ಸಹಜ ಪ್ರೀತಿ ಇದ್ದೇ ಇರುತ್ತದೆ. ಬೇಸಿಗೆಯಲ್ಲಿ ಮನೆಯ ಮೇಲೆ, ಟೆರೆಸ್ ಮೇಲೆ ತೆರೆದ ಪಾತ್ರೆಯಲ್ಲಿ ನೀರಿಡಿ, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರೆಲ್ಲಿ ಬಿಸಾಡಬೇಡಿ, ಚೂಯಿಂಗ್ ಗಮ್ ಅಗೆದು  ರಸ್ತೆಯಲ್ಲೆಲ್ಲಾ ಉಗುಳಬೇಡಿ,  ಗಾಳಿಪಟ ಹಾರಿಸಲು ಅಪಾಯಕಾರಿ ಮಾಂಜಾ ದಾರ ಬಳಕೆ ಮಾಡಬೇಡಿ, ವಾಟರ್ ಬಾಟಲ್ ಗಳನ್ನು ಕಂಡ ಕಂಡಲ್ಲಿ ಎಸೆಯಬೇಡಿ... ನಾವು ತೆಗೆದುಕೊಳ್ಳುವ ಈ ಸಣ್ಣ ಸಣ್ಣ ಕ್ರಮಗಳು ಪ್ರಾಣಿ ಸಂಕುಲ ರಕ್ಷಣೆ ಮತ್ತು ಪರಿಸರ ಕಾಪಾಡುವಲ್ಲಿ ದೊಡ್ಡ ಹೆಜ್ಜೆಯಾಗಬಹುದು.