Asianet Suvarna News Asianet Suvarna News

ತುಮಕೂರು: ಅಕ್ರಮ ಸಂಬಂಧಕ್ಕೆ ಅವಿವಾಹಿತೆ ಗರ್ಭಿಣಿ, ಶಿಶು ಬೀದಿಗೆ ಎಸೆದ ತಾಯಿ, ಚಳಿ ತಾಳದೆ ಹಸುಗೂಸು ಸಾವು..!

ಗೌರೀಪುರ ಗ್ರಾಮದ 25 ವರ್ಷದ ಅವಿವಾಹಿತ‌ ಯುವತಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಮುಚ್ಚಿಟ್ಟಿದ್ದಳು.‌ ಒಂಬತ್ತು ತಿಂಗಳ‌ ಕಾಲ ಸಡಿಲವಾದ ಹುಡುಗೆ ತೊಟ್ಟು  ಗರ್ಭವನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತ ಮಗುವನ್ನೇ ಬಯಲಿಗೆಸೆಯುವ ಮೂಲಕ ಕಂದನ ಸಾವಿಗೆ ಕಾರಣಳಾಗಿದ್ದಾಳೆ.

Infant Dies in Tumakuru grg
Author
First Published Jan 6, 2024, 1:00 AM IST

ತುಮಕೂರು(ಜ.06):  ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿ ಯಾರಿಗೂ ತಿಳಿಸದೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡು ಹೆಣ್ಣು ಮಗುವನ್ನು ಎಸೆದು ಹೋದ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಅರೇಗುಜ್ಜನಹಳ್ಳಿ ಪಂಚಾಯ್ತಿಯ ಗೌರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಸುಗೂಸು ಚಳಿ ತಾಳದೆ ಕೊನೆಯುಸಿರೆಳೆದಿದೆ.‌

ಗೌರೀಪುರ ಗ್ರಾಮದ 25 ವರ್ಷದ ಅವಿವಾಹಿತ‌ ಯುವತಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಮುಚ್ಚಿಟ್ಟಿದ್ದಳು.‌ ಒಂಬತ್ತು ತಿಂಗಳ‌ ಕಾಲ ಸಡಿಲವಾದ ಹುಡುಗೆ ತೊಟ್ಟು  ಗರ್ಭವನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತ ಮಗುವನ್ನೇ ಬಯಲಿಗೆಸೆಯುವ ಮೂಲಕ ಕಂದನ ಸಾವಿಗೆ ಕಾರಣಳಾಗಿದ್ದಾಳೆ.
ಅವಿವಾಹಿತ ಯುವತಿಗೆ ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಮೊನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ, ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ನಂತರ ಮಗುವನ್ನ ಅಲ್ಲಿಯೇ ಪಕ್ಕದ ಬಯಲಿಗೆ ಎಸೆದು ಮನೆಗೆ ತೆರಳಿದ್ದಳು.

ತುಮಕೂರಿನಲ್ಲಿ ತಪ್ಪಿತು ದೊಡ್ಡ ಅನಾಹುತ;  ಮಕ್ಕಳ ಕೈಗೆ ಸಿಕ್ಕಿತ್ತು ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ!

ಯುವತಿ ಮನೆಗೆ ಹೋಗಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಾಳೆ. ಆದರೆ ಬೆಳಿಗ್ಗೆ ಗ್ರಾಮಸ್ಥರ ಕಣ್ಣಿಗೆ ನವಜಾತ ಹೆಣ್ಣುಮಗುವಿನ ಶವ ಸಿಕ್ಕಿದೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅತ್ತ ನವಜಾತ ಶಿಶುವಿನ ಶವ ಕೂಡ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಯ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Follow Us:
Download App:
  • android
  • ios