ಶಿರಾ ತಾಲೂಕಿನಲ್ಲಿ ಕೈಗಾರಿಕೆ ಮತ್ತು ಶಿಕ್ಷಣ ಕ್ರಾಂತಿ

ಮುಂದಿನ ದಿನಗಳಲ್ಲಿ ಶಿರಾ ನಗರವು ಜಿಲ್ಲಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಎಲ್ಲಾ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

Industrial and Educational Revolution in Shira Taluk snr

  ಶಿರಾ :  ಮುಂದಿನ ದಿನಗಳಲ್ಲಿ ಶಿರಾ ನಗರವು ಜಿಲ್ಲಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಎಲ್ಲಾ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಗುಮ್ಮನಹಳ್ಳಿ ಬಳಿಯ ಕೈಗಾರಿಕಾ ವಸಹತು ಪ್ರದೇಶ ಬಳಿ ರಾಜ್ಯ ಸರ್ಕಾರದ ಉದ್ದೇಶಿತ ಕೌಶಲ್ಯಾಭಿವೃದ್ಧಿ ಇಲಾಖೆಯ ವಿಶ್ವವಿದ್ಯಾಲಯ ಸ್ಥಾಪಿಸಲು ಅಧಿಕಾರಿಗಳ ಜೊತೆ ಸ್ಥಳ ಪರಿವೀಕ್ಷಣೆ ನಡೆಸಿ ಮಾತನಾಡಿದರು. ಯುವಕರು ಮತ್ತು ಯುವತಿಯರು ಅತ್ಯುನ್ನತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಮತ್ತು ಜಾಗತಿಕ ಮಟ್ಟದಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸ್ಪರ್ಧಾತ್ಮಕವಾಗಿರಲು ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಹೆಚ್ಚು ಸಹಕಾರಿಯಾಗಲಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮಾಂತರ ಪ್ರದೇಶದ ಯುವಕ ಯುವತಿಯರು ಹೆಚ್ಚು ಕ್ರಿಯಾಶೀಲರಾಗಿರಲು ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗೆ ನೇಮಕಾತಿ ಪಡೆಯಲು ಹಲವು ಬಗೆಯ ಕೌಶಲ್ಯಗಳು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಆಲ್ ಇಂಡಿಯ ಸೊಸೈಟಿ ಫಾರ್‌ ಎಲೆಕ್ಟ್ರಾನಿಕ್ಸ್ ಅಂಡ್ ಕಂಪ್ಯೂಟರ್ ಟೆಕ್ನಾಲಜಿ ಇದರ ಸಹಯೋಗದೊಂದಿಗೆ ಶಿರಾದಲ್ಲಿ 40 ಎಕರೆ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವಿಶ್ವವಿದ್ಯಾಲಯ ಸ್ಥಾಪಿಸಲಿದ್ದು, ಈ ಸಂಸ್ಥೆ ಯುವಕ ಯುವತಿಯರಿಗೆ ಅಗತ್ಯ ಕೌಶಲ್ಯಗಳ ಕುರಿತು ತರಬೇತಿ ನೀಡಿ ಅವರಿಗೆ ಅಗತ್ಯ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಕಾರ್ಯ ಮಾಡಲಿದೆ ಎಂದರು.

ಮಾಜಿ ಜಿ.ಪಂ ಸದಸ್ಯರಾದ ಅರೇಹಳ್ಳಿ ರಮೇಶ್, ಮಾಜಿ ತಾ.ಪಂ ಸದಸ್ಯ ಪಿ.ಬಿ ನರಸಿಂಹಯ್ಯ, ಕಂದಾಯ ನಿರೀಕ್ಷಕ ಸುದರ್ಶನ್, ಎಐಎಸ್ಇಸಿಟಿ ಕಂಪನಿಯ ರಜತ್, ಪಂಕಜ್, ಮುಖಂಡರಾದ ಡಿ.ಆರ್.ಗೌಡ, ಅಜಯ್ ಕುಮಾರ್ ಗಾಳಿ, ಸುನಿಲ್, ಹೇಮಂತ್ ಗೌಡ ಇದ್ದರು.

Latest Videos
Follow Us:
Download App:
  • android
  • ios