Belagavi news: ಜಿಲ್ಲಾಡಳಿತದ ನೆರಳಲ್ಲಿ ಕಲ್ಲು ಗಣಿಗಾರಿಕೆ?
ಬೈಲಹೊಂಗಲ ತಾಲೂಕಿನಲ್ಲಿ ಕಲ್ಲು ಪುಡಿ ಮಾಡುವ ಘಟಕಗಳ ಹಾವಳಿ ಮತ್ತೆ ಶುರುವಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶ ಹೊರಡಿಸಿದ್ದರೂ, ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರೂ, ವಿಚಾರಣೆ ಬಾಕಿ ಇರುವಾಗಲೇ ಜಿಲ್ಲಾಡಳಿತದ ಪರೋಕ್ಷ ಸಹಕಾರಿಂದ ರಾತ್ರಿ ಸಮಯದಲ್ಲಿ ಅವ್ಯಾಹತ ಗಣಿಗಾರಿಕೆ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ವಿಶೇಷ ವರದಿ
ಬೆಳಗಾವಿ (ಜ.18) : ಬೈಲಹೊಂಗಲ ತಾಲೂಕಿನಲ್ಲಿ ಕಲ್ಲು ಪುಡಿ ಮಾಡುವ ಘಟಕಗಳ ಹಾವಳಿ ಮತ್ತೆ ಶುರುವಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶ ಹೊರಡಿಸಿದ್ದು, ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಲ್ಲು ಕ್ರಷರ್ ಘಟಕಗಳ ವಿಚಾರಣೆ ಬಾಕಿ ಇರುವಾಗಲೇ ಜಿಲ್ಲಾಡಳಿತದ ಪರೋಕ್ಷ ಸಹಕಾರಿಂದ ರಾತ್ರಿ ಸಮಯದಲ್ಲಿ ಅವ್ಯಾಹತ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಕಲ್ಲು ಕ್ರಷರ್‌ಗಳಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರು ಇದೀಗ ಈ ಕ್ರಷರ್‌ಗಳ ಹಾವಳಿಯಿಂದ ಶಾಶ್ವತ ಪರಿಹಾರ ಪಡೆಯಲು ಜಿಲ್ಲಾಡಳಿತದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬೈಲಹೊಂಗಲ(Bailhongal ) ತಾಲೂಕಿನ ಮರಿಕಟ್ಟಿಮತ್ತು ಗಣಿಕೊಪ್ಪ(Ganikoppa) ಗ್ರಾಮಗಳ 13 ಕಲ್ಲು ಕ್ರಷರ್‌ಗಳು(Crushers) ನಿಯಮಗಳು ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯನ್ನು ಕಂಡುಹಿಡಿದ ನಂತರ, ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು ಮತ್ತು ಬೆಳಗಾವಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಉಪ ನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪರಿಸರ ಅಧಿಕಾರಿ ಹಾಗೂ ಬೈಲಹೊಂಗಲ ತಹಸೀಲ್ದಾರ್‌ಗೆ ಜನರು, ಮನೆಗಳು, ಡ್ಯಾಮ್‌ಗೆ ಆಗಿರುವ ಹಾನಿಯನ್ನು ಪರಿಶೀಲಿಸುವಂತೆ ಹಾಗೂ ಈ ಕಲ್ಲು ಕ್ರಷರ್‌ಗಳಿಂದ ರಸ್ತೆ ಮತ್ತು ಕೃಷಿ ಬೆಳೆಗಳು ಮತ್ತು ಪರಿಸರ ಮತ್ತು ಅದರ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
Shivamogga News: ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ಬಸ್ತಿಕೊಪ್ಪ ಗಢಗಢ!
ನಿಯಮ ಉಲ್ಲಂಘಟನೆ ಸ್ಪಷ್ಟ:
ಈ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಲ್ಲು ಕ್ರಷರ್‌ಗಳಿಗೆ ಮೊಹರು ಹಾಕಿದೆ. ವಿಚಾರಣೆ ಪೂರ್ಣಗೊಂಡು ಕ್ರಷರ್‌ಗಳು ಇಲಾಖೆಯ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುವವರೆಗೆ ಕೆಲವು ಪ್ರಭಾವಿ ವ್ಯಕ್ತಿಗಳ ಒಡೆತನದ ಈ ಕ್ರಷರ್‌ಗಳು ಮಾಲಿನ್ಯ ನಿಯಂತ್ರಣ ಕ್ರಮಗಳು, ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸದೇ ಕರ್ನಾಟಕ ಕಲ್ಲು ಕ್ರಷರ್ ಕಾಯ್ದೆ, 2011 ರ ಸೆಕ್ಷನ್ 6ರ ಉಪವಿಭಾಗ 6ರಿಂದ 9ರವರೆಗೆ ಸ್ಪಷ್ಟವಾಗಿ ಉಲ್ಲಂಘಿಘಿಘಿಘಿಸಿವೆ ಎಂದು ಇಲಾಖೆ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಬೆಳಗಾವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಲೋಕಾ ಸಮರ
ಜಿಲ್ಲಾಡಳಿತ ಹೆಸರು ಹೇಳಿ ಬೆದರಿಕೆ
ಆದರೆ, ಪ್ರಭಾವಿಗಳು ಹಾಗೂ ಜಿಲ್ಲಾಡಳಿತ ನಮ್ಮ ಮುಷ್ಠಿಯಲ್ಲಿದ್ದು ತಾವು ಹೇಳಿದಂತೆ ಕೇಳುತ್ತದೆ ಎಂದು ಈ ಕಲ್ಲು ಕ್ರಷರ್ ಮಾಲೀಕರು ಹೇಳಿಕೊಂಡು ಸ್ಥಳೀಯರನ್ನು ಬೆದರಿಸುವ ಕಾರ್ಯವನ್ನು ಮಾಡುತ್ತಿರುವ ಆರೋಪವೂ ಕೇಳಿಬರುತ್ತಿವೆ. ಜಿಲ್ಲಾಡಳಿತ ಹಾಗೂ ಕೆಲ ರಾಜಕಾರಣಿಗಳ ಆಶ್ರಯ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಷರತ್ತುಗಳನ್ನು ಪಾಲಿಸದೇ ಮತ್ತೆ ಕ್ರಷಿಂಗ್ ಘಟಕಗಳನ್ನು ಆರಂಭಿಸಿದ್ದಾರೆ. ಈ ಕಲ್ಲು ಕ್ರಷರ್‌ಗಳಿಗೆ ಮತ್ತೆ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿರುವ ಜಿಲ್ಲಾಡಳಿತದ ವಿರುದ್ಧ ತಮ್ಮ ಬೆಳೆ, ಮನೆಗಳಿಗೆ ಹಾನಿಯಾದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯಮಗಳ ಪ್ರಕಾರ, ಜಿಲ್ಲಾಧಿಕಾರಿ ಅವರು ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಕಲ್ಲು ಕ್ರಷರ್‌ಗಳಿಗೆ ಭೇಟಿ ನೀಡಬೇಕು. ಆದರೆ, ಈ ಕಲ್ಲು ಕ್ರಷರ್‌ಗಳನ್ನು ಸುರಕ್ಷತಾ ಕ್ರಮಗಳಿಲ್ಲದೆ ಪುಡಿಮಾಡಲಾಗಿದೆ. ಹೀಗಾಗಿ, ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.