Asianet Suvarna News Asianet Suvarna News

ಹುಬ್ಬಳ್ಳಿ - ಪುಣೆಗೆ ನೇರ ವಿಮಾನ ಸಂಪರ್ಕ ಆರಂಭ, ವಾರಕ್ಕೆ ಎರಡು ಬಾರಿ ಸೇವೆ ಲಭ್ಯ

ಹುಬ್ಬಳ್ಳಿ ದೆಹಲಿಗೆ ನೇರ ವಿಮಾನಯಾನದ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನಯಾನ ಆರಂಭವಾಗಿದೆ.‌ ನೂತನ ನೇರ ವಿಮಾನ ಕಲ್ಪಿಸಿದ್ದಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂಡಿಗೋ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.‌

IndiGo started Hubblli to Pune  Direct flight connection gow
Author
First Published Feb 6, 2023, 5:31 PM IST

ಹುಬ್ಬಳ್ಳಿ (ಫೆ.6): ಹುಬ್ಬಳ್ಳಿ ದೆಹಲಿಗೆ ನೇರ ವಿಮಾನಯಾನದ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನಯಾನ ಆರಂಭವಾಗಿದೆ.‌ ನೂತನ ನೇರ ವಿಮಾನ ಕಲ್ಪಿಸಿದ್ದಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂಡಿಗೋ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.‌ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗುವ ಮೂಲಕ ಈ‌ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದನ್ನ ತೋರ್ಪಡಿಸುವಂತಿತ್ತು. 

ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ನೇರ ವಿಮಾನ ಸೇವೆ ಸಹಕಾರಿಯಾಗಲಿದ್ದು, ಜನರು ಇದರ ಲಾಭ ಪಡೆಯುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.

ಕ್ಯಾನ್ಸರ್‌ ಪೀಡಿತ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಸಿದ ಅಮೆರಿಕ ಏರ್‌ಲೈನ್ಸ್‌!

ಹುಬ್ಬಳ್ಳಿ ಹಾಗು ದೆಹಲಿಗೆ ನೇರ ವಿಮಾನ ಸೇವೆ ಒದಗಿಸಿದ ಬೆನ್ನಲ್ಲೆ ಹುಬ್ಬಳ್ಳಿಯಿಂದ ಪುಣೆಗೂ ನೇರ ವಿಮಾನ ಸೇವೆ ಒದಗಿಸುವ ಕುರಿತಂತೆ ಈ ಹಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.  ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ, ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಪ್ರಲ್ಹಾದ್ ಜೋಶಿ ಅನಂತ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ

ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಲಭ್ಯವಾಗಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಪುಣೆಗೆ  ವಿಮಾನ ಸೇವೆ ಲಭ್ಯವಾಗಲಿದೆ. 6ಇ7727 ಎಚ್‌ಬಿಎಕ್ಸ್‌ ಶನಿವಾರ ಸಂಜೆ 6.30ಕ್ಕೆ ಹಾಗೂ ಭಾನುವಾರ ರಾತ್ರಿ 7.40ಕ್ಕೆ ಹುಬ್ಬಳ್ಳಿ ಬಿಡಲಿದೆ. ಇನ್ನು ಪುಣೆಯಿಂದ 6ಇ 7716 ವಿಮಾನವೂ ರಾತ್ರಿ 8 ಹಾಗೂ 9.10ಕ್ಕೆ ಬಿಟ್ಟು ಹುಬ್ಬಳ್ಳಿಗೆ ಆಗಮಿಸಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಇಂಡಿಗೋ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಯವನ್ನು ಅಂತಿಮಗೊಳಿಸಿದ್ದಾರೆ.

ಕೇರಳ ಮಹಿಳೆಯಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ!

Follow Us:
Download App:
  • android
  • ios