Mysuru chamundi Hill : ಕುಸಿದ ಚಾಮುಂಡಿ ರಸ್ತೆ ದುರಸ್ತಿಗೆ 9.50 ಕೋಟಿ ರು.ಗೆ ಪ್ರಸ್ತಾವನೆ
- ಕುಸಿದ ಚಾಮುಂಡಿ ಬೆಟ್ಟದ ರಸ್ತೆ ದುರಸ್ತಿಗೆ 9.50 ಕೋಟಿ ಪ್ರಸ್ತಾವನೆ
- ಇಂಡಿಯನ್ ಇನ್‌ಸ್ಟಿಟ್ಯೂಟ್ ಅಧಿಕಾರಿಗಳಿಂದ ಚಾಮುಂಡಿ ಬೆಟ್ಟ ಸ್ಥಳ ಪರಿಶೀಲನೆ
- ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಮಾಹಿತಿ
ಮೈಸೂರು (ಡಿ.01): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Mysuru Chamundi Hill ) ಕುಸಿದಿರುವ ರಸ್ತೆ ದುರಸ್ತಿಗೆ 9.50 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekar ) ತಿಳಿಸಿದರು. ಮೈಸೂರಿನಲ್ಲಿ (Mysuru) ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯನ್ ಇನ್‌ಸ್ಟಿಟ್ಯೂಟ್ (Indian Institute ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಸುಮಾರು 9.50 ಕೋಟಿ ರು. ಬೇಕಾಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದು ಬಾರಿ ಸರ್ವೇ ಮಾಡಲು ನಿರ್ಧರಿಸಿದ್ದಾರೆ ಎಂದರು.
ತಕ್ಷಣಕ್ಕೆ ಕುಸಿತವಾಗಿರುವ ಸ್ಥಳದಲ್ಲಿ ದುರಸ್ತಿ ಕಾರ್ಯ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ (Rain) ಬರುತ್ತಿರುವುದರಿಂದ ತೇವ ಇದೆ. ಬಿಸಿಲು ಬಂದು ನೆಲ ಗಟ್ಟಿಯಾದ ನಂತರ ದುರಸ್ತಿ ಕಾರ್ಯ ಆರಂಭಿಸಲಿದ್ದಾರೆ. ಈ ಕೆಲಸ ಶೀಘ್ರ ಆರಂಭಿಸುವಂತೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ಭೇಟಿ ವೇಳೆ ಮನವಿ ಮಾಡಿರುವುದಾಗಿ ಅವರು ಹೇಳಿದರು.
ಚಾಮುಂಡಿ ಬೆಟ್ಟ (Chamundi Hill) ಸಂರಕ್ಷಣೆಗೆ ಪ್ರಧಾನಿ ಮೋದಿ (Prime minister Narendra Modi) ಅವರಿಗೆ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ(SL Bhyrappa) ಅವರು ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚಾಮುಂಡಿಬೆಟ್ಟದಲ್ಲಿ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಕುಸಿತ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ಏನೇ ಅಭಿವೃದ್ಧಿ ಮಾಡಿದರೂ ಜನರ ಅಭಿಪ್ರಾಯ ಪಡೆದು ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿಗೆ ಬೈರಪ್ಪ ಪತ್ರ : ಮೈಸೂರಿನ(Mysuru) ಚಾಮುಂಡಿಬೆಟ್ಟದ(Chamundi Hill) ಅಭಿವೃದ್ಧಿ ವಿಚಾರವಾಗಿ ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ(Dr SL Bhyrappa) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ(Central Government) ‘ಪ್ರಸಾದ’ ಯೋಜನೆಯಡಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಂದ ಚಾಮುಂಡಿಬೆಟ್ಟ ಕಾಂಕ್ರೀಟ್ ಕಾಡಾಗಲಿದೆ. ಹೀಗಾಗಿ ಚಾಮುಂಡಿಬೆಟ್ಟವನ್ನು ಉಳಿಸಿ ಎಂದು ಪ್ರಧಾನಿ ಮೋದಿ(Narendra Modi) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೇಂದ್ರದ ‘ಪ್ರಸಾದ’ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆ ಇದೆ. ಚಾಮುಂಡಿಬೆಟ್ಟ ಕಾಂಕ್ರೀಟ್ ಕಾಡು(Concrete Forest) ಮಾಡುವ ಈ ಯೋಜನೆಯನ್ನು ಅನುಷ್ಠಾನಗೊಳಿಸಬಾರದು. ಚಾಮುಂಡಿಬೆಟ್ಟಕ್ಕೆ ಹೋಗುವ ವಾಹನಗಳಿಗೆ ನಿರ್ಬಂಧಿಸಬೇಕು. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನ(Electric Vehicles), ಬಸ್‌ಗಳನ್ನು ಸರ್ಕಾರವೇ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡ, ವಾಣಿಜ್ಯ ಮಳಿಗೆಗಳಿಂದ ಅಲ್ಲಿನ ಪ್ರಶಾಂತತೆ ಹಾಳಾಗಿ, ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಬೆಟ್ಟದಲ್ಲಿ ಇನ್ನಷ್ಟು ನಿರ್ಮಾಣ ಚಟುವಟಿಕೆ ಕೈಗೊಳ್ಳುವ ಬದಲು, ಅಲ್ಲಿರುವ ಕಟ್ಟಡಗಳನ್ನು ಕೆಡವಬೇಕು. ಚಾಮುಂಡಿಬೆಟ್ಟದಲ್ಲಿ 4 ಸಾವಿರ ಜನ ವಾಸವಿದ್ದಾರೆ. ಅವರನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಅರ್ಚಕರು, ಸಿಬ್ಬಂದಿ ಇರಲು ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಏನಿದು ಪ್ರಸಾದ ಯೋಜನೆ?: ದೇಶದಲ್ಲಿ(India) ಧಾರ್ಮಿಕ ಪ್ರವಾಸೋದ್ಯಮಕ್ಕೆ(Religious Tourism) ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಸಾದ (ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪಾರಂಪರಿಕವರ್ಧನೆ) ಯೋಜನೆ ಜಾರಿ ತಂದಿದೆ. ಈ ಮೂಲಕ ದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸುವುದು ಉದ್ದೇಶವಿದೆ. ರಾಜ್ಯದಲ್ಲಿ(Karnataka) ಚಾಮುಂಡಿಬೆಟ್ಟವನ್ನು ಈ ಯೋಜನೆಯಡಿ ಆಯ್ಕೆಯಾಗಿದ್ದು, ಇಲ್ಲಿ ಹೈಟೆಕ್ ಮಾದರಿಯ ಮಳಿಗೆ, ಮಹಾದೇಶ್ವರ ದೇಗುಲ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ, ಮಹಿಷಾಸುರ ಪ್ರತಿಮೆ ಬಳಿ ಹಂಪಿ ಶೈಲಿಯ ರಾಜಗೋಪುರ, ನಂದಿ ವಿಗ್ರಹ ವೀಕ್ಷಣೆಗೆ ವೀಕ್ಷಣಾ ತಾಣ, ವಿಶೇಷ ವ್ಯೂವ್‌ಪಾಯಿಂಟ್(View Point) ನಿರ್ಮಿಸಲು ಉದ್ದೇಶಿಸಿದೆ