Asianet Suvarna News Asianet Suvarna News

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

*ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟ
*ಆ ಪೈಕಿ ಕರ್ನಾಟಕದ್ದೇ 14 ಲಕ್ಷ ಹೆಕ್ಟೇರ್‌: ತೋಮರ್‌
*ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ  8873 ಕೋಟಿ ರು
 

Karnataka reported maximum crop damage due to rain Agriculture Minister Narendra Singh Tomar mnj
Author
Bengaluru, First Published Dec 1, 2021, 6:57 AM IST

ನವದೆಹಲಿ(ಡಿ. 01): ಪ್ರಸಕ್ತ ವರ್ಷ ಸಂಭವಿಸಿದ ಭಾರೀ ಮಳೆ (Rain), ಪ್ರವಾಹ ಮತ್ತು ಭೂಕುಸಿತದ ಪರಿಣಾಮ ದೇಶದಲ್ಲಿ 50.40 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿವೆ. ಈ ಪೈಕಿ ಕರ್ನಾಟಕದಲ್ಲಿ (Karnataka) ಅತಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಕುರಿತು ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (Narendra Singh Tomar), ‘ಪ್ರಸಕ್ತ ವರ್ಷ ಭಾರೀ ಮಳೆ, ಪ್ರವಾಹ, ಭೂಕುಸಿತದಿಂದ ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. 

ಈ ಪೈಕಿ ಕರ್ನಾಟಕದಲ್ಲಿ 13.98 ಲಕ್ಷ ಹೆಕ್ಟೇರ್‌, ಪಶ್ಚಿಮ ಬಂಗಾಳದಲ್ಲಿ 6.90 ಲಕ್ಷ ಹೆಕ್ಟೇರ್‌, ರಾಜಸ್ಥಾನದಲ್ಲಿ 6.79 ಲಕ್ಷ ಹೆಕ್ಟೇರ್‌, ಬಿಹಾರದಲ್ಲಿ 5.80 ಲಕ್ಷ ಹೆಕ್ಟೇರ್‌, ಮಹಾರಾಷ್ಟ್ರದಲ್ಲಿ 4.55 ಲಕ್ಷ ಹೆಕ್ಟೇರ್‌ ಮತ್ತು ಉತ್ತರ ಪ್ರದೇಶದಲ್ಲಿ 3.61 ಲಕ್ಷ ಹೆಕ್ಟೇರ್‌ ಬೆಳೆಗಳಿಗೆ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

ಹಣ ಬಿಡುಗಡೆ:

ನಷ್ಟಸಂಬಂಧ ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ನ.25ರವರೆಗೆ 8873 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದಲೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

Gadag: ಶಾಲಾ ಛಾವಣಿ ಕುಸಿಯುವ ಭೀತಿ: ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು

ಸಾಲ ಮನ್ನಾ ಇಲ್ಲ:

ಇದೇ ವೇಳೆ ಮಳೆ, ಪ್ರವಾಹ ಪೀಡಿತ ಜಿಲ್ಲೆಗಳ ರೈತರ ಸಾಲವನ್ನು ಮನ್ನಾ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಎಲ್ಲಿ ಎಷ್ಟುನಷ್ಟ? (ಹೆಕ್ಟೇರ್‌ಗಳಲ್ಲಿ)

1. ಕರ್ನಾಟಕ 13.98 ಲಕ್ಷ

2. ಪಶ್ಚಿಮ ಬಂಗಾಳ 6.90 ಲಕ್ಷ

3. ರಾಜಸ್ಥಾನ 6.79 ಲಕ್ಷ

4. ಬಿಹಾರ 5.80 ಲಕ್ಷ

5. ಮಹಾರಾಷ್ಟ್ರ 4.55 ಲಕ್ಷ

ಬೆಳೆ ಕಳೆದುಕೊಂಡ ರೈತರಿಗೆ ಅತಿ ಕಡಿಮೆ ಪರಿಹಾರ!

ಕಳೆದ ಐದಾರು ವರ್ಷಗಳಿಂದ ಬೆಳೆ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದ್ದರೂ ಮಳೆ ಅಥವಾ ಬರದಿಂದ ಬೆಳೆ ಹಾನಿಯಾದ (Crop Loss) ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌ NDRF)  ಅಡಿ ನೀಡುತ್ತಿರುವ ಪರಿಹಾರದ ಮೊತ್ತ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.  

Tamil Nadu Rains: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು: 3 ದಿನದಲ್ಲಿ 5 ಸಾವು!

ಬೀಜ, (Seeds) ಗೊಬ್ಬರ, ಕೂಲಿ ವೆಚ್ಚ, ನಿರ್ವಹಣೆ ಸೇರಿದಂತೆ ಬೆಳೆ ಉತ್ಪಾದಿಸಲು ವೆಚ್ಚ ಮಾಡುವ ಹಣ (Money) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಕೇಂದ್ರ ಸರ್ಕಾರ (govt Of India) ಆರು ವರ್ಷಗಳ ಹಿಂದೆ ರೂಪಿಸಿದ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ನೀಡುತ್ತಿರುವ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ. ನಿಯಮಗಳನ್ನು ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೆಚ್ಚಿಸಬೇಕು, ಜೊತೆಗೆ ರಾಜ್ಯ ಸರ್ಕಾರ (Karnataka govt) ಎಸ್‌ಡಿಆರ್‌ಎಫ್‌ (STRF) ನಿಧಿಯಿಂದ ಪರಿಹಾರ ನೀಡಬೇಕೆಂದು ರೈತ ಸಂಘಟನೆಗಳು (Farmers), ಕೃಷಿ ತಜ್ಞರು ಒತ್ತಾಯಿಸಿದ್ದಾರೆ.

ಪರಿಹಾರ ಹೆಚ್ಚಳಕ್ಕೆ ಕೃಷಿ ಬೆಲೆ ಆಯೋಗ ಮನವಿ

ಹೆಕ್ಟೇರ್‌ ಒಣಭೂಮಿಯ ಪರಿಹಾರವನ್ನು 6800 ರಿಂದ 50 ಸಾವಿರ, ನೀರಾವರಿ ಜಮೀನಿಗೆ (Farm land) ನೀಡುತ್ತಿದ್ದ 13,500 ರುಪಾಯಿ ಬದಲಿಗೆ 50 ಸಾವಿರ ಹಾಗೂ ತೋಟಗಾರಿಕಾ ಬೆಳೆಗಳ ನಷ್ಟಕ್ಕೆ 18 ಸಾವಿರಕ್ಕೆ ಬದಲಾಗಿ 1 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಗಮನ ಸೆಳೆದು ಪರಿಹಾರ ಮೊತ್ತ ಹೆಚ್ಚಳ ಮಾಡಿಸಬೇಕಿದೆ.

Follow Us:
Download App:
  • android
  • ios