Asianet Suvarna News Asianet Suvarna News

ಇಂಡಿಯಾ ಮೈತ್ರಿಕೂಟಕ್ಕೇ ಗೆಲುವು ಖಚಿತ : ರಕ್ಷಾ ರಾಮಯ್ಯ

2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ. ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿಯೇ ಇಂಡಿಯಾ ಮತ್ತು ಭಾರತ ಎಂದೇ ನಮೂದಾಗಿದೆ ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಹೇಳಿದರು.

India alliance is sure of victory: Raksha Ramaiah snr
Author
First Published Sep 20, 2023, 9:50 AM IST

  ಚಿಕ್ಕಬಳ್ಳಾಪುರ :  2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ. ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿಯೇ ಇಂಡಿಯಾ ಮತ್ತು ಭಾರತ ಎಂದೇ ನಮೂದಾಗಿದೆ ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಹೇಳಿದರು.

ಚಿಕ್ಕಬಳ್ಳಾಪುರ ನಗರದಲ್ಲಿನ ಸಾರ್ವಜನಿಕ ಗಣೇಶಗಳ ಪ್ರತಿಷ್ಠಾಪನೆ ಮಂಟಪಗಳನ್ನು ವೀಕ್ಷಣೆ ಮಾಡಿ, ನಗರದ ವಾಪಸಂದ್ರ ವಿದ್ಯಾಗಣಪತಿ ಗೆಳೆಯರ ಬಳಗ ವರಸಿದ್ದಿ ವಿನಾಯಕ ಸ್ನೇಹ ಕೂಟ ಪ್ರತಿಷ್ಠಾಪಿಸಿದ್ದ ಗಣೇಶ ವೀಕ್ಷಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಜೆಡಿಎಸ್‌ ಮೈತ್ರಿಗೆ ಒಳ್ಳೆಯದಾಗಲಿ

ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ‌ಮೈತ್ರಿ‌ ವಿಚಾರದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು‌ ಏನಾಯ್ತು ಅಂತಾ ಗೊತ್ತಿದೆ. ಆದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಅವರಿಗೆ ಒಳ್ಳೆಯದಾಗಲಿ ಅಷ್ಟೆ ಎಂದರು.

ಮುಖಂಡರಾದ ಪಿ.ಎಂ.ರಘು,ಡ್ಯಾನ್ಸ್ ಶ್ರೀನಿವಾಸ್, ಕುಬೇರ ಅಚ್ಚು,ನಗರಸಭೆ ಸದಸ್ಯರಾದ ದೀಪಕ್‌ ಕುಮಾರ್,ನಾರಾಯಣಸ್ವಾಮಿ, ಪೈಲೆಟ್ ನಾರಾಯಣಸ್ವಾಮಿ, ಮೋಲ್ಡ್ ವೆಂಕಟೇಶ್, ಮತ್ತಿತರರು ಇದ್ದರು. 

ಮೈತ್ರಿಗೆ ಸಹಮತ ಇದೆಯಾ

ಚಿಕ್ಕಬಳ್ಳಾಪುರ(ಸೆ.20): 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ಜೆಡಿಎಸ್ ನ ಹಾಲಿ ಹಾಗೂ ಮಾಜಿ ಶಾಸಕರಿಂದ ಯಾವುದೇ ವಿರೋಧ ಇಲ್ಲ. ಬಿಜೆಪಿ ಜೊತೆ ಮೈತ್ರಿಗೆ ತಮ್ಮ ಸಹಮತ ಇರುವುದಾಗಿ ಎರಡೂ ಪಕ್ಷಗಳ ಹಾಲಿ ಹಾಗೂ ಮಾಜಿ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಹೊರವಲಯದ ಬೆಂಗಳೂರು ಕಡಪ ಹೆದ್ದಾರಿಯಲ್ಲಿರುವ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿಯವರ ಜೆಕೆ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ, ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ಬಿ.ಎನ್. ರವಿಕುಮಾರ್, ಗೌರಿಬಿದನೂರು ಕ್ಷೇತ್ರದ ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಸೇರಿದಂತೆ ಹಲವು ನಾಯಕರು ಸಮ್ಮತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜತೆ ಮೈತ್ರಿ ಆಗದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ: ಮಾಜಿ ಸಂಸದ ಶಿವರಾಮೇಗೌಡ

ಜೆಡಿಎಸ್‌ ಬಲಿಷ್ಠ ಕ್ಷೇತ್ರ ಪಕ್ಷಕ್ಕೇ ಇರಲಿ

ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಿಂತಾಮಣಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ‌ಮಾತನಾಡಿ, ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಜೆಡಿಎಸ್ ಬಲಿಷ್ಟವಾಗಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೋಡುವ ಕುರಿತು ಎರಡೂ ಪಕ್ಷಗಳ ಹಿರಿಯ ನಾಯಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದರು.

ಜೆಡಿಎಸ್ ವರಿಷ್ಠರಿಗೆ ಈಗಾಗಲೇ ನಮ್ಮ ಸಹಮತದ ಅಭಿಪ್ರಾಯದ ಬಗ್ಗೆ ತಿಳಿಸಲಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಹುತೇಕ ಫಿಕ್ಸ್ ಆಗಲಿದೆ. ಆದರೆ ಯಾವ-ಯಾವ ಕ್ಷೇತ್ರ ನಮಗೆ ಬಿಟ್ಟುಕೊಡಬೇಕು ಎಂಬುದು ತೀರ್ಮಾನವಾಗಿಲ್ಲ. ಈ ಬಗ್ಗೆ ವರಿಷ್ಠರು ಚರ್ಚೆ ನಡೆಸಿ ತೀರ್ಮಾನ ಮಾಡಿಕೊಳ್ಳಲಿದ್ದಾರೆ. ನಮ್ಮ ವರಿಷ್ಟರ ತಿರ್ಮಾನದಂತೆ ನಾವುಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

JDS ಕುಟುಂಬ ರಾಜಕಾರಣ ಪಾರ್ಟಿ..ನಮ್ದು ಅದರ ವಿರುದ್ಧ: ಪ್ರೀತಂ ಗೌಡ

ವರಿಷ್ಟರ ತೀರ್ಮಾನಕ್ಕೆ ಬದ್ಧ

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕ ಮೇಲೂರು ಬಿ.ಎನ್. ರವಿಕುಮಾರ್ ಮಾತನಾಡಿ, 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎರಡೂ ಜಿಲ್ಲೆಯ ನಾಯಕರು ಒಮ್ಮತದಿಂದ ಸಹಮತ ವ್ಯಕ್ತಪಡಿಸುತ್ತೇವೆ. ನಾವು ಬಿಜೆಪಿಗೆ ಸಪೋರ್ಟ್ ಅಂತ ಹೇಳುವುದಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಶಕ್ತಿ ಇದೆ. ಹಾಗಾಗಿ ಈ ಭಾಗದಲ್ಲಿ ಬಿಜೆಪಿ ನಮಗೆ ಸಪೋರ್ಟ್ ಮಾಡಲಿದೆ. ಹಾಗಾಗಿ ನಮ್ಮ ವರಿಷ್ಠರ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ ಅಂತ ಸ್ಪಷ್ಟಪಡಿಸಿದರು.

Follow Us:
Download App:
  • android
  • ios