Flyover Construction Work: ಹುಬ್ಳೀಲಿ ಟ್ರಾಫಿಕ್‌ ಹೆಚ್ಚಿಸಿದ ಫ್ಲೈಓವರ್‌

*  ಹುಬ್ಬಳ್ಳಿಗೆ ನಿತ್ಯ 2 ಲಕ್ಷಕ್ಕೂ ಹೆಚ್ಚಿನ ಜನರ ಭೇಟಿ
*  ಪರ್ಯಾಯ ಮಾರ್ಗ ಕಲ್ಪಿಸದೆ ಇರುವುದರಿಂದ ಟ್ರಾಫಿಕ್‌ ಸಮಸ್ಯೆ ಉಲ್ಬಣ
*  ಭಾರೀ ವಾಹನಗಳ ನಗರ ಪ್ರವೇಶ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ನಿಷೇಧ 

Increased Traffic Problem in Hubballi Due to Flyover Work grg

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ(ಫೆ.09): ನಗರದ ಮಹತ್ವಾಕಾಂಕ್ಷಿ ಫ್ಲೈಓವರ್‌(Flyover) ನಿರ್ಮಾಣ ಕಾಮಗಾರಿ ಚಾಲನೆ ಪಡೆದು ತಿಂಗಳಾಗಿದೆ. ಆದರೆ, ಪರ್ಯಾಯ ಮಾರ್ಗದ ಬಗ್ಗೆ ಸೂಕ್ತ ಮುಂದಾಲೋಚನೆ ಇಲ್ಲದೆ ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿದೆ. ಹುಬ್ಬಳ್ಳಿಗೆ(Hubballi) ನಿತ್ಯ 2 ಲಕ್ಷಕ್ಕೂ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದು, ಅದರಲ್ಲಿ 1.5 ಲಕ್ಷ ಜನರು ಚೆನ್ನಮ್ಮ ವೃತ್ತದ ಮೂಲಕವೇ ವಿವಿಧೆಡೆ ತೆರಳುತ್ತಾರೆ. ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(National Highway Authority) 300 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಫ್ಲೈಓವರ್‌ನಿಂದ ಹುಬ್ಬಳ್ಳಿ-ಗದಗ, ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ರಸ್ತೆ ಸಂಪರ್ಕ ಸಾಧ್ಯವಾಗಲಿದೆ.

ಗೋಕುಲ ರಸ್ತೆ, ಐಟಿ ಪಾರ್ಕ್‌ನ ಮುಂಭಾಗದಲ್ಲಿ ಈಗಾಗಲೇ ಫ್ಲೈಓವರ್‌ ಕಾಮಗಾರಿ ಆರಂಭಗೊಂಡಿದೆ. ಪರ್ಯಾಯ ಮಾರ್ಗಗಳ ಬಗ್ಗೆ ಗೊಂದಲದ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳ ದಟ್ಟಣೆ(Traffic) ಸಮಸ್ಯೆ ಉದ್ಭವವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗದಿರುವುದೇ ಕಾರಣ ಎನ್ನುವುದು ಜನಸಾಮಾನ್ಯರ ಆರೋಪ.

Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್‌..!

ಹೊಸೂರು ರಸ್ತೆ, ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ವಿಜಯಪುರ ರಸ್ತೆಯಲ್ಲಿ (Club Road) ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ವಾಹನ ಸಂಚಾರ ನಿಯಂತ್ರಣ ಹಾಗೂ ಪರ್ಯಾಯ ಮಾರ್ಗದ ಬಗ್ಗೆ ಈ ವರೆಗೆ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಇದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಅತಿಕ್ರಮಣ ಹೆಚ್ಚಾಗಿದ್ದು, ಆಟೋಗಳು ನಿಲ್ದಾಣವಿಲ್ಲದೆ ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಇದರಿಂದ ಟ್ರಾಫಿಕ್‌ ಹೆಚ್ಚಳವಾಗುತ್ತಿದೆ. ಇದರಿಂದ ಬೇಸತ್ತ ವಾಹನ ಸವಾರರು, ಜನರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಫ್ಲೈಓವರ್‌ ಕಾಮಗಾರಿ ಆರಂಭಕ್ಕೆ ಪೂರ್ವದಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಮೊದಲೇ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಜನರು ಹೈರಾಣಾಗಿದ್ದಾರೆ. ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ.

ಗದಗ, ವಿಜಯಪುರ, ಕಾರವಾರ ಸೇರಿದಂತೆ ವಿವಿಧೆಡೆಯಿಂದ ನಗರಕ್ಕೆ ಆಗಮಿಸುವವರಿಗೆ ಚೆನ್ನಮ್ಮ ವೃತ್ತದಲ್ಲಿ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಬಿಸಿ ತಟ್ಟಲಿದೆ. ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಈಗಾಗಲೇ ಭಾರೀ ವಾಹನಗಳ ನಗರ ಪ್ರವೇಶವನ್ನು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ನಿಷೇಧಿಸಲಾಗಿದೆ. ಆದ್ದರಿಂದ ನಗರದಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕೂಡಲೇ ಗುರುತಿಸಿ ಫ್ಲೈಓವರ್‌ ಕಾಮಗಾರಿ ಮುಗಿಯುವ ವರೆಗೆ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಫ್ಲೈಓವರ್‌ ಕಾಮಗಾರಿ ಬಿಆರ್‌ಟಿಎಸ್‌ಯಂತೆ(BRTS) ಆಗಬಾರದು. ವೈಜ್ಞಾನಿಕ ರೀತಿಯಲ್ಲಿ(Scientific Way)ವಾಹನ ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಇದ್ದ ರಸ್ತೆಗಳನ್ನು ಸಣ್ಣದು ಮಾಡದೆ ಮಾದರಿ ನಗರ ನಿರ್ಮಾಣದ ಕಲ್ಪನೆಯಲ್ಲಿ ಫ್ಲೈಓವರ್‌ ನಿರ್ಮಿಸಬೇಕು ಅಂತ ಕೆಸಿಸಿಐ ಮಾಜಿ ಉಪಕಾರ್ಯದರ್ಶಿ ಜಗದೀಶ ಎಸ್‌. ಹೊಂಬಳ ತಿಳಿಸಿದ್ದಾರೆ. 

Tumkauru Road : ಸಾರ್ವಜನಿಕರೇ ಎಚ್ಚರ - ಮೇಲ್ಸೇತುವೆ ಮತ್ತೆ ಬಂದ್‌

ಫ್ಲೈಓವರ್‌ ಕಾಮಗಾರಿಯಿಂದ ವಾಹನ ದಟ್ಟಣೆ ಸಮಸ್ಯೆ ಆಗಿರುವುದು ನಿಜ. ಟ್ರಾಫಿಕ್‌ ನಿಯಂತ್ರಿಸಲು ನಗರದ ವಿವಿಧೆಡೆ ಅನೇಕ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಹುಬ್ಬಳ್ಳಿ-ಧಾರವಾಡಸಂಚಾರ ವಿಭಾಗದ ಎಸಿಪಿ ಟಿ.ಜಿ. ದೊಡ್ಡಮನಿ ಹೇಳಿದ್ದಾರೆ. 

ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಬೆಂಗಳೂರು-ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪುತ್ತಿಲ್ಲ. ಪೀಣ್ಯ ಫ್ಲೈ ಓವರ್ ದುರಸ್ತಿ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಬಳಕೆಗೆ ಅವಕಾಶ ಕೊಡುತ್ತಿಲ್ಲ. ಕಳೆದ 1 ತಿಂಗಳಿಂದ ಬಂದ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. 

ಪೀಣ್ಯ- ದಾಸರಹಳ್ಳಿ ಫ್ಲೈ ಓವರ್‌ನ 102, 103 ನೇ ಪಿಲ್ಲರ್ ನಡುವೆ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಡಿ. 25 ರಿಂದ ಫ್ಲೈಓವರ್ ಬಂದ್ ಮಾಡಲಾಗಿತ್ತು. ಈಗ ಕಾಮಗಾರಿ ಮುಗಿದಿದೆ. ಆದರೂ ಬಂದ್ ಮಾಡಿದ್ಯಾಕೆ..? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios