Asianet Suvarna News Asianet Suvarna News

ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಬಿಡುಗಡೆ

* ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಬಿಡುಗಡೆ
* ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು 
* 33.31 ಟಿಎಂಸಿ ಸಾಮರ್ಥ್ಯದ ನಾರಾಯಣಪುರ ಜಲಾಶಯ 
 

Increased Inflow Water to Basava Sagar Dam in Yadgir grg
Author
Bengaluru, First Published Jul 16, 2021, 2:27 PM IST

ಯಾದಗಿರಿ(ಜು.16): ಕಳೆದೊಂದು ವಾರದಿಂದ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಸಹಜವಾಗಿ ಅಲ್ಲಿನ ನೀರು ಬಸವ ಸಾಗರಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ಬಸವ ಸಾಗರ ಜಲಾಶಯದ ಮಟ್ಟ ಕಾಯ್ದಿಟ್ಟುಕೊಂಡು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.

ಬುಧವಾರ ರಾತ್ರಿ ವೇಳೆಗೆ 50-60 ಸಾವಿರ ಕ್ಯುಸೆಕ್‌ ಪ್ರಮಾಣದ ನೀರನ್ನು ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗಿತ್ತು. ಗುರುವಾರವೂ ಸಹ ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ (50 ಸಾವಿರ ಕ್ಯೂಸೆಕ್‌) 57,120 ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಜಲಾಶಯದ ಒಟ್ಟು ನೀರಿನ ಮಟ್ಟ492.25 ಮೀ. (1614 ಅಡಿಗಳು) ಇದ್ದರೆ, ಗುರುವಾರದ ಸಂಜೆವರೆಗೆ ನೀರಿನ ಮಟ್ಟ491.48 ಮೀ. (1612 ಅಡಿಗಳಾಗಿತ್ತು.

ಯಾದಗಿರಿ: ಕೃಷ್ಣ ನದಿಗೆ ನೀರು, ಎಚ್ಚರದಿಂದಿರಲು ಸೂಚನೆ

33.31 ಟಿ.ಎಂ.ಸಿ. ಸಾಮರ್ಥ್ಯದ ಸಂಗ್ರಹವಿರುವ ಜಲಾಶಯದಲ್ಲಿ ಗುರುವಾರ (ಜುಲೈ 15) 30 ಟಿ.ಎಂ.ಸಿ. ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಲ್ಲಿ ನೀರಿನ ಮಟ್ಟ 491.67 ಮೀ. ಇದ್ದರೆ, 46131 ಕ್ಯುಸೆಕ್‌ ಒಳಹರಿವು ಹಾಗೂ 45995 ಕ್ಯೂಸೆಕ್‌ ಪ್ರಮಾಣದಷ್ಟು ನೀರನ್ನು ಕೃಷ್ಣಾ ನದಿಗೆ ಬಿಡಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟಿರುವುದರಿಂದ ನದಿಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು.
 

Follow Us:
Download App:
  • android
  • ios