ಯಾದಗಿರಿ: ಕೃಷ್ಣ ನದಿಗೆ ನೀರು, ಎಚ್ಚರದಿಂದಿರಲು ಸೂಚನೆ

* ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳ
* ಕೃಷ್ಣಾ ನದಿ ದಡದಲ್ಲಿರುವ ಜನರು ಜಾಗೃತಿ ವಹಿಸಲು ಸೂಚನೆ
* ಕೃಷ್ಣಾ ನದಿಗೆ 24000 ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ  
 

24000 cusec water Released to Krishna River From Basava Sagar Dam in Yadgir grg

ಯಾದಗಿರಿ(ಜು.15):  ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದರಿಂದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4 ಗೇಟ್‌ಗಳ ಮೂಲಕ 24000 ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ ಎಂದು ಅಣೆಕಟ್ಟು ವಿಭಾಗದ ಮೂಲಗಳಿಂದ ತಿಳಿದು ಬಂದಿದೆ.

ಜನರಲ್ಲಿ ಜಾಗೃತಿ:

ಬಸವಸಾಗರ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ನದಿ ಪಾತ್ರದ ಮೇಲಿನಗಡ್ಡಿ, ದೇವರಗಡ್ಡಿ, ಬೆಂಚಿಗಡ್ಡಿ, ನೀಲಕಂಠರಾಯನ ಗಡ್ಡಿ, ತಿಂಥಣಿ ಬಂಡೋಳಿ ಸೇರಿದಂತೆ ಇತರೆ ಹಳ್ಳಿಗಳ ಜನ-ಜಾನುವಾರು ಹಾಗೂ ಮೀನುಗಾರರು ನದಿಗೆ ಇಳಿಯದೆ ಎಚ್ಚರ ವಹಿಸಬೇಕೆಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ: ಬಸವಸಾಗರ ಜಲಾಶಯ ಬಹುತೇಕ ಭರ್ತಿ

ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಬಸವಸಾಗರ ಜಲಾಶಯದಿಂದ ಇನ್ನು ಹೆಚ್ಚಿನ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios