ಇಂದಿಗೂ ನಡೆಯುವ ಮೇಲುಕೋಟೆ ಚೆಲುವನಾರಾಯಣ ಪವಾಡ ಇದು!
ಪ್ರತೀ ಬಾರಿಯಂತೆ ಈ ಬಾರಿಯೂ ಮೇಲುಕೋಟೆ ಚೆಲುವನಾರಾಯಣ ಸನ್ನಿಧಿಯಲ್ಲಿ ಪವಾಡ ನಡೆದಿದೆ. ಚಿಕ್ಕ ಗುಂಡಿಯಲ್ಲಿ ನೀರುಕ್ಕಿ ಅಚ್ಚರಿ ಉಂಟು ಮಾಡಿದೆ.
ಮೇಲುಕೋಟೆ (ಮಾ.30): ಮೇಲುಕೋಟೆ ಚೆಲುವನಾರಾಯಣಸ್ವಾಮಿ ಜಯಂತಿ ಅಂಗವಾಗಿ ಬರಡು ಹೊಲದಲ್ಲಿ ತೀರ್ಥೋದ್ಭವ ನಡೆಯಿತು.
ತೀರ್ಥಸ್ನಾನದದಿನವಾದ ಸೋಮವಾರ ನಾರಾಯಣಸ್ವಾಮಿ ಪಾದ ಸ್ಪರ್ಷವಾದ ನಾರಾಯಣಪುರದ ದಲಿತ ಭಕ್ತ ಶ್ರೀಧರ್ ಅವರಿಗೆ ಸೇರಿದ ಬರಡು ಹೊಲದಲ್ಲಿ ಕುಂಡಿಕೆಯಲ್ಲಿ ತೀರ್ಥ ಸಂಗ್ರಹವಾಗಿ ಪ್ರತೀ ಬಾರಿ ಅಚ್ಚರಿ ಮೂಡಿಸುತ್ತದೆ.
ಈ ಬಾರಿಯೂ ಸಹ ಮುಂದುವರೆದು ಭಕ್ತರಿಗೆ ಪುಳಕ ನೀಡಿತು. ಮಧ್ಯಾಹ್ನ 11ರ ಸುಮಾರಿಗೆ ಮೇಲುಕೋಟೆ ಕಲ್ಯಾಣಿಯಲ್ಲಿ ಸ್ವಾಮಿಯ ತೀರ್ಥಸ್ನಾನ ಆರಂಭವಾದ ತಕ್ಷಣ ಪೂಜೆ ಮಾಡಿ ಒಂದೆರಡು ಅಡಿ ಆಳದ ಗುಂಡಿ ತೋಡಲಾಯಿತು.
ಮೇಲುಕೋಟೆಯಲ್ಲಿ ರಥ ಸಪ್ತಮಿ ಸಂಭ್ರಮ, ಮೇಳೈಸಿತ್ತು ಜಾನಪದ ಕಲಾಮೇಳದ ಮೆರಗು ..
ಚೆಲುವನಾರಾಯಣನ ಭಾವಚಿತ್ರದೊಂದಿಗೆ ಮಂಗಳಾರತಿ ಮಾಡಿ ಕುಂಡಿಕೆಗೆ ಪೂಜೆ ಮಾಡಿ ಪ್ರಾರ್ಥಿಸಲಾಯಿತು. ಈ ವೇಳೆ ಕರ್ಪೂರದ ವಾಸನೆಯ ತೀರ್ಥ ಜಿನುಗುತ್ತಾ ಗುಂಡಿಯಲ್ಲಿ ಶೇಖರವಾಗತೊಡಗಿತು.
ಬಂದ ಭಕ್ತರಿಗೆ ಪೂಜೆಯ ನಂತರ ಕೋಸಂಬರಿ ಪ್ರಸಾದ ವಿತರಣೆ ಮಾಡಲಾಯಿತು. ನೂರಾರು ಭಕ್ತರು ಈ ತೀರ್ಥ ಸ್ವೀಕಾರ ಮಾಡಿದರು.