*ದಾಖಲಾಗದ ಇತಿಹಾಸ ಬೇರೇನೋ ಇದೆ ಎಂದಿದ್ದ ಸಂವಿಧಾನ ಶಿಲ್ಪಿ: ಸಾಹಿತಿ*ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ‘ಮನೆಯಂಗಳದ ಮಾತುಕತೆ’*ಊರು, ಬಾಲ್ಯದ ಅನುಭವ, ತಂದೆ-ತಾಯಿಗಳು ತಮಗೆ ಪ್ರೇರಕ ಶಕ್ತಿ

ಬೆಂಗಳೂರು (ಫೆ. 21): ಬಾಲ್ಯ, ವಿದ್ಯಾರ್ಥಿ ದೆಸೆಯಲ್ಲಿ ಅನುಭವಿಸಿದ ನೋವು, ಅಪಮಾನಗಳ ಭಾರ ಕಳೆದುಕೊಳ್ಳಲು ಬರವಣಿಗೆಗೆ ಮೊರೆ ಹೋದೆ. ಇದರಿಂದಾಗಿ 8 ಕೃತಿಗಳನ್ನು ರಚಿಸಿದೆ ಎಂದು ಸಾಹಿತಿ, ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ (mahadeva shankanapura) ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ‘ಮನೆಯಂಗಳದ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಊರು, ಬಾಲ್ಯದ ಅನುಭವ, ತಂದೆ-ತಾಯಿಗಳು ತಮಗೆ ಪ್ರೇರಕ ಶಕ್ತಿಯಾಗಿದ್ದಾರೆ. ಬಾಲ್ಯ, ವಿದ್ಯಾರ್ಥಿ ದೆಸೆಯಲ್ಲಿ ಅನುಭವಿಸಿದ ದುಃಖ, ಅಪಮಾನಗಳೇ ಬರವಣಿಗೆಗೆ ಕಾರಣವಾದ ಅಂಶಗಳು ಎಂದರು.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಂಕನಪುರ ನಮ್ಮೂರು. ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಸಾಹಿತಿಗಳಾದ ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯ ಅವರ ಸಂಪರ್ಕ, ಉಪನ್ಯಾಸಕನಾಗಿ ಪಡೆದ ಅನುಭವ ಸಾಹಿತ್ಯ ಕೃಷಿಗೆ ಇನ್ನಷ್ಟುಶಕ್ತಿ ನೀಡಿತು. ಭಾರತಕ್ಕೆ ಸಂಬಂಧಿಸಿದಂತೆ ದಾಖಲಾಗದಿರುವ ಇತಿಹಾಸ ಬೇರೇನೋ ಇದೆ ಎಂದು ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ಸಂಪುಟ 3ರಲ್ಲಿ ಉಲ್ಲೇಖಿಸಿದ್ದು, ಇದರಿಂದ ಪ್ರಭಾವಿತನಾಗಿ ನಮ್ಮ ಮೌಖಿಕ ಪರಂಪರೆ ಹುಡುಕಲು ಶುರು ಮಾಡಿದೆ ಎಂದು ವಿವರಿಸಿದರು.

ಇದನ್ನೂ ಓದಿ:Insult to Ambedkar: ಬೆಂಗ್ಳೂರಲ್ಲಿ ದಲಿತರ ಬೃಹತ್‌ ರ‍್ಯಾಲಿ

ಜನಪದ ಕಾವ್ಯ, ಕಲೆ ಮತ್ತು ಸಂಸ್ಕೃತಿಗೆ ಕರ್ನಾಟಕ ತನ್ನದೇ ಆದ ಕೊಡುಗೆ ನೀಡಿದ್ದು, ಇದರಲ್ಲಿ ಬಹಳಷ್ಟುಅಂಶ ಹೊರ ಜಗತ್ತಿಗೆ ಗೊತ್ತಿಲ್ಲ. ಇದನ್ನು ಅನಾವರಣ ಮಾಡಲು ಅಧ್ಯಯನ, ಸಂಶೋಧನೆ ನಡೆಸಿದೆ. ಚಾಮರಾಜನಗರ ಜಿಲ್ಲೆಯ ಗೊರವರ ಕುಣಿತ, ಕಂಸಾಳೆ, ತೊಗಲು ಗೊಂಬೆಯಾಟ ಮತ್ತಿತರ ಜನಪದ ಕಲೆಗಳ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದೆ ಎಂದು ಹೇಳಿದರು. ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ, ಜಂಟಿ ನಿರ್ದೇಶಕರಾದ ವಿ.ಎನ್‌.ಬನಶಂಕರಿ ಹಾಜರಿದ್ದರು.

‘ಉರಿ ಗದ್ದುಗೆ...’ ಕವನ 21 ಭಾಷೆಗೆ ತರ್ಜುಮೆ: 73ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾದ ಅಖಿಲ ಭಾರತ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ರಾಜ್ಯದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಸೌಹಾರ್ದತೆ ಸಾರುವ ನನ್ನ ‘ಉರಿ ಗದ್ದಿಗೆಯ ಮೇಲೆ ಬೋಳು ಜಂಗಮನ ತಂಬೂರಿ ಪದ’ ಕವನ ದೇಶದ 21 ಭಾಷೆಗಳಿಗೆ ಭಾಷಾಂತರವಾಗಿ ಆಯಾ ರಾಜ್ಯಗಳ ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದು, ತುಂಬಾ ಖುಷಿ ನೀಡಿತು ಎಂದು ಸಾಹಿತಿ ಮಹಾದೇವ ಶಂಕನಪುರ ನೆನಪಿಸಿಕೊಂಡರು.

ಇದನ್ನೂ ಓದಿ:Constitution: ಅಂಬೇಡ್ಕರ್‌ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ

ರಾಜ್ಯದ ಶಾಲೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಹೆಸರು: ಇತ್ತೀಚಿನ ರಾಜ್ಯ ಸರ್ಕಾರದ ಆದೇಶದ ನಂತರ, ಸಮಾಜ ಕಲ್ಯಾಣ ಇಲಾಖೆಯ (Department of Social Welfare ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಶಾಲೆಗಳಿಗೆ ಭಾರತ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ (Dr BR Ambedkar) ಅವರ ಹೆಸರಿಡಲು ನಿರ್ಧರಿಸಲಾಗಿದೆ. 

ಅಕ್ಟೋಬರ್ 25 ರಂದು ಸಮಾಜ ಕಲ್ಯಾಣ ಆಯುಕ್ತ ಡಾ.ರವಿಕುಮಾರ್ ಸುರಪುರ ಅವರು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದ ಪರಿಣಾಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (Scheduled Caste and Scheduled Tribe) 1 ರಿಂದ 5ನೇ ತರಗತಿಯ ಸುಮಾರು 68 ವಸತಿ ಶಾಲೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಹೆಸರಿಡಲು ನಿರ್ಧರಿಸಲಾಗಿದೆ.

ಸಂವಿಧಾನವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸುತ್ತದೆ, ಇದರಿಂದಾಗಿ ಅವರು ಸಮುದಾಯದಲ್ಲಿ ಸರಿಯಾದ ಸ್ಥಾನವನ್ನು ಪಡೆದುಕೊಳ್ಳಬಹುದು. ಹಾಗಾಗಿ ಶಾಲೆಗಳಿಗೆ ಅಂಬೇಡ್ಕರ್ ಅವರ ಹೆಸರನ್ನು ಇಡುವುದು ಒಂದು ಆದರ್ಶ ಕ್ರಮವಾಗಿದೆ ಎಂದು ಸಾಂವಿಧಾನಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ’ ಎಂದು ನಾಮಕರಣ ಮಾಡಲು ಅವಕಾಶ ನೀಡುವಂತೆ ರವಿಕುಮಾರ್ ಸುರಪುರ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.