ಜು.14ರಂದು ಕೆಆರ್‌ಎಸ್ ಮತ್ತು ಬೇಬಿ ಬೆಟ್ಟಕ್ಕೆ ಸಂಸದರು ಭೇಟಿ ನೀಡುವರೆಂಬ ವಿಚಾರ ನನ್ನ ಗಮನಕ್ಕೆ ಬಂದಿದೆ ಸಂಸದೆ ಸುಮಲತಾ ಅವರು ನನ್ನನ್ನು ಕರೆದರೆ ಕ್ಷೇತ್ರದ ಶಾಸಕನಾಗಿ ಬೇಬಿ ಬೆಟ್ಟಕ್ಕೆ  ಹೋಗಲು ಸಿದ್ಧನಿದ್ದೇನೆ  ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಹೇಳಿಕೆ

ಪಾಂಡವಪುರ (ಜು.13): ಸಂಸದೆ ಸುಮಲತಾ ಅವರು ನನ್ನನ್ನು ಕರೆದರೆ ಕ್ಷೇತ್ರದ ಶಾಸಕನಾಗಿ ಬೇಬಿ ಬೆಟ್ಟಕ್ಕೆ ಹೋಗಲು ಸಿದ್ಧನಿದ್ದೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಹೇಳಿದರು. 

ಜು.14ರಂದು ಕೆಆರ್‌ಎಸ್ ಮತ್ತು ಬೇಬಿ ಬೆಟ್ಟಕ್ಕೆ ಸಂಸದರು ಭೇಟಿ ನೀಡುವರೆಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ನನ್ನನ್ನು ಕರೆದರೆ ಶಾಸಕನಾಗಿ ಹೋಗಲು ತೊಂದರೆ ಇಲ್ಲ. ನಾನೇ ಹೋದರೆ ಎಲ್ಲಿಗೆ ಹೋಗಬೇಕು ಎನ್ನುವುದನ್ನು ತೋರಿಸಿಕೊಡುತ್ತೇನೆ ಎಂದರು. 

ಕಾಂಗ್ರೆಸ್ ನಾಯಕರ ಬೆಂಬಲ ಕೇಳಿದ ಸುಮಲತಾ ..

ಗಣಿಗಾರಿಗೆ ತಡೆಯುವುದಕ್ಕೆ ಬೆಟ್ಟದಲ್ಲಿ ಅದಿಕಾರಿಗಳೇ ಹಲವು ಕಡೆ ಟ್ರಂಚ್ ಹೊಡೆಸಿದ್ದಾರೆ. ಸಂಸದರು ಅಲ್ಲಿಗೆ ಹೋಗಬೇಕು ಎಂದರೆ ಅದನ್ನು ತೆರವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಅಲ್ಲದೇ ಎಲ್ಲ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. 

ನನ್ನ ಹೋರಾಟಕ್ಕೆ ಯಾರೆಲ್ಲಾ ಸೇರ್ತಾರೆ ಕಾದು ನೋಡಿ: ಸುಮಲತಾ!

ನಾನು ಜಿಲ್ಲಾ ಮಂತ್ರಿ ಆಗಿದ್ದಾಗ ಭಾರೀ ಶಬ್ದವೊಂದು ಹೇಳಿ ಬಂದಿತ್ತು. ಅದೇ ಕಾರಣಕ್ಕೆ ಬೇಬಿ ಬೆಟ್ಟದಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಮಾಡಿದ್ದೆ. ನೀರಾವರಿ ಇಲಾಖೆಯಿಂದ 20 ಲಕ್ಷ ರು. ಬಿಡುಗಡೆ ಮಾಡಿ ಶಬ್ದದ ಕುರಿತು ತನಿಖೆ ಮಾಡಲು ಆದೇಶ ನೀಡಿದ್ದೆವು. ತಜ್ಞರು ಇದರ ಬಗ್ಗೆ ತನಿಖೆ ಮಾಡಲು ಬಂದಿದ್ದರು, ಆದರೆ ಅದಕ್ಕೆ ಕೆಲವರು ಅಡ್ಡಿ ಉಂಟು ಮಾಡಿದರು. 

ಕೃಷ್ಣರಾಜಸಾಗರ ಅಣೆಕಟ್ಟು ಸುರಕ್ಷಿತವಾಗಿರಬೇಕು ಎನ್ನುವುದು ನಮ್ಮ ಆಸೆ. ಗಣಿಗಾರಿಕೆಯಿಂದ ಕೆಆರ್ ಎಸ್‌ಗೆ ನಿಜವಾದ ತೊಂದರೆ ಇದೆಯೇ, ಇಲ್ಲವೇ ಎನ್ನುವುದನ್ನು ಸರ್ಕಾರ ಪರಿಶೀಲನೆ ಮಾಡಬೇಕು ಎಂದರು.