ಮೈಸೂರು ದಸರಾ ಹಬ್ಬಕ್ಕೂ ಮುನ್ನವೇ ಅರಮನೆ ಬಳಿ ಅಳವಡಿಸಿದ್ದ ದೀಪಾಲಂಕಾರದ ಕಮಾನು ದಿಢೀರ್ ಕುಸಿದು ಬಿದ್ದಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಕಮಾನು ಬಿದ್ದ ರಭಸಕ್ಕೆ ಟಿಟಿ ವಾಹನ ಜಖಂ. ಅದೃಷ್ಟವಶಾತ್ ಪ್ರವಾಸಿಗರು ಅರಮನೆ ವೀಕ್ಷಣೆಗೆ ತೆರಳಿದ್ದರಿಂದ ಭಾರೀ ಪ್ರಾಣಾಪಾಯ ತಪ್ಪಿದೆ.
ಮೈಸೂರು (ಅ.3): ದಸರಾ ಹಬ್ಬ ಪ್ರಾರಂಭವೇ ಆಗಿಲ್ಲ. ಈಗಷ್ಟೇ ರಾಜಮನೆತನದವರಿಗೆ ಅಧಿಕೃತವಾಗಿ ಮೈಸೂರು ದಸರಾಕ್ಕೆ ಆಹ್ವಾನಿಸಲಾಗಿದೆ. ಆದರೆ ದಸರಾ ಹಬ್ಬಕ್ಕೂ ಮೊದಲೇ ಅಪಶಕುನವೆಂಬಂತೆ ದೀಪಾಲಂಕಾರದ ಕಮಾನು ಮುರಿದುಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ದಸರಾ ಮುನ್ನವೇ ಕಮಾನು ಬಿದ್ದು ಟಿಟಿ ವಾಹನ ಜಖಂ
ಹೌದು ದಸರಾ ಹಬಕ್ಕಾಗಿ ಅರಮನೆ ಮುಂಭಾಗದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸರ್ಕಲ್ ಬಳಿ ವಿದ್ಯುತ್ ದೀಪಾಲಂಕಾರದ ಕಮಾನು ಹಾಕಲಾಗಿದ್ದ ದಿಢೀರ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಇದೇ ಸಮಯದಲ್ಲಿ ಪ್ರಯಾಣಿಕರು ಅರಮನೆ ವೀಕ್ಷಣೆಗೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕಮಾನು ಬಿದ್ದ ರಭಸಕ್ಕೆ ಟಿಟಿ ವಾಹನ ಜಖಂಗೊಂಡಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಧಿಕಾರಿಗಳು ಕುಸಿದ ಬಿದ್ದ ಕಮಾನು ತೆರವುಗೊಳಿಸಿದರು.
ಗುತ್ತಿಗೆದಾರನ ಬೇಜವಾಬ್ದಾರಿತನ:
ವಿದ್ಯುತ್ ದೀಪಾಲಂಕಾರದ ಕಮಾನು ನಿರ್ಮಾಣ ಕೆಲಸ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಹಾಗೂ ಗುತ್ತಿಗೆ ಪಡೆದಿರುವ ಮೋಹನ್ ಎಂಬ ಬೇಜವಾಬ್ದಾರಿತನ, ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಏಕೆಂದರೆ ಕಟೌಟ್ ಗೆ ಅರ್ಧ ಅಡಿ ಗುಂಡಿ ಕಂಬಗಳನ್ನು ಹಾಕಿರುವ ಗುತ್ತಿಗೆದಾರ
ಕಟೌಟ್ ಗೆ ಅರ್ದ ಅಡಿ ಗುಂಡಿ ತೆಗೆದು ಕಂಬಗಳನ್ನು ಹಾಕಿರುವ ಗುತ್ತಿಗೆದಾರ. ಬೃಹತ್ ಕಮಾನು ಹಾಕುವಾಗ ಇಷ್ಟು ಸಾಕುವುದಿಲ್ಲ. ಅಗತ್ಯವಾಗಿ ಬಿಗಿಯಾಗಿ ನಿಲ್ಲುವಂತಹ ವ್ಯವಸ್ಥೆಯಿಲ್ಲದೆ ಬೇಕಾಬಿಟ್ಟಿಯಾಗಿ ಕಮಾನು ನಿಲ್ಲಿಸಿದ್ದಕ್ಕೆ ಕುಸಿದುಬಿದ್ದಿದೆ.
ಟಿಟಿ ವಾಹನ ಚಾಲಕ ಸ್ವಲ್ಪದರಲ್ಲೆ ಪಾರು
ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳವಾದ್ದರಿಂದ ದಸರಾ ಹಬ್ಬಕ್ಕೆ ಮೊದಲೇ ಭಾರೀ ಅನಾಹುತವೊಂದು ತಪ್ಪಿದೆ. ಕಮಾನು ಬಿದ್ದ ಸಮಯದಲ್ಲೇ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಿಕ್ಕೆ ಟಿಟಿ ವಾಹನ ಬಂದಿತ್ತು. ಕಮಾನು ನಿಲ್ಲಿಸಿದ ಕೆಲವೇ ಗಂಟೆಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ. ಕಟೌಟ್ ನೆಲಕ್ಕೆ ಬೀಳುತ್ತಿದ್ದಂತೆ ಸಾರ್ವಜನಿಕರು ಓಡಿಹೋಗಿ ಅಪಾಯದಿಂದ ಪಾರಾದರು.
ಅರಮನೆ ನೋಡಲು ಹೋಗಿದ್ದ ವಿದ್ಯಾರ್ಥಿಗಳು
ಈ ವೇಳೆ ಕೆಳಗೆ ನಿಂತಿದ್ದ ಟಿಟಿ ವಾಹನದ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ವಾಹನ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನು ಇದೇ ವೇಳೆ ಅರಮನೆ ನೋಡಲು ವಿದ್ಯಾರ್ಥಿಗಳು ಹೋಗಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.


